ಕ್ರೈಂದೇಶ-ಪ್ರಪಂಚ

ಇಬ್ಬರು ಮಕ್ಕಳನ್ನು ದೇವರ ಪಾದ ಸೇರಿಸಿ ಬಿಟ್ಟ ಪಾಪಿ ತಂದೆ..! ಹೆತ್ತಪ್ಪನ ಕ್ರೌರ್ಯಕ್ಕೆ ಎರಡು ಮುಗ್ದ ಜೀವಗಳು ಬಲಿ

ನ್ಯೂಸ್ ನಾಟೌಟ್: ಹೆತ್ತ ತಂದೆಯೇ ಇಬ್ಬರು ಪುಟ್ಟ ಕಂದಮ್ಮಗಳನ್ನು ಬಲಿ ತೆಗೆದುಕೊಂಡಿದ್ದಲ್ಲದೆ ಪತ್ನಿಯ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿರುವ ಪ್ರಕರಣವೊಂದು ಶ್ರೀರಂಗಪಟ್ಟಣ ತಾಲ್ಲೂಕಿನ ಮರಳಾಗಾಲ ಗ್ರಾಮದ ತೋಟದ ಮನೆಯಲ್ಲಿ ಬುಧವಾರ ತಡರಾತ್ರಿ ನಡೆದಿದೆ.

ಕಲಬುರ್ಗಿ ಜಿಲ್ಲೆ, ಜೇವರ್ಗಿ ತಾಲ್ಲೂಕಿನ ಗಾಣಗಾಪುರದ ಶ್ರೀಕಾಂತ್ ಎಂಬಾತ ತನ್ನ ಮಕ್ಕಳಾದ ಅದಿತ್ಯ (4) ಮತ್ತು ಅಮೂಲ್ಯ (2) ಅವರ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ. ತನ್ನ ಪತ್ನಿ ಲಕ್ಷ್ಮಿ ಎಂಬಾಕೆಗೂ ಚೂರಿಯಿಂದ ಇರಿದು ಕಲ್ಲಿನಿಂದ‌ ಜಜ್ಜಿದ್ದಾನೆ. ಲಕ್ಷ್ಮಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಶ್ರೀಕಾಂತ್ ನಾಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.


ಮರಳಾಗಾಲ ಗ್ರಾಮದ ಬಳಿ ಇರುವ ವಿರೂಪಾಕ್ಷ ಎಂಬವವರ ತೋಟದಲ್ಲಿ ಅಂಬಿಕಾ ಮತ್ತು ಅವರ 2ನೇ ಪತಿ ಮೋಹನ್ ಒಂದೂವರೆ ವರ್ಷದಿಂದ ಕೆಲಸ ಮಾಡುತ್ತಿದ್ದರು. ಅಂಬಿಕಾ ಅವರ ಮೊದಲ‌ ಪತಿಯ ಮಗಳು ಲಕ್ಷ್ಮಿ ಮತ್ತು ಅವರ ಅಳಿಯ ಶ್ರೀಕಾಂತ್ ಮಂಗಳವಾರ ಇಲ್ಲಿಗೆ ಬಂದಿದ್ದರು. ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಗ್ರಾಮಾಂತರ ಠಾಣೆ ಸಿಪಿಐ ಬಿ.ಜಿ. ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.

Related posts

ಹತ್ಯೆಯಾದ ಬಿಜೆಪಿ ನಾಯಕನನ್ನು ಸ್ಮರಿಸಿ ಕಣ್ಣೀರಿಟ್ಟ ಮೋದಿ..! ಯಾರು ಆ ಮುಖಂಡ..?

ಮುಂಬೈ ಸರಣಿ ಬ್ಲಾಸ್ಟ್ ನ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಅಬುಬಕರ್ ಬಂಧನ!

ಪುತ್ತೂರು: ಯುವತಿಯ ಕೊಲೆಗೂ ಮುನ್ನ ಅಂಗಡಿಯಲ್ಲಿ ಜಗಳವಾಡಿ ಮೊಬೈಲ್‌ ಕಿತ್ತುಕೊಂಡಿದ್ದ ಆರೋಪಿ ಪದ್ಮರಾಜ್‌, ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಜಗಳದ ದೃಶ್ಯ ಸೆರೆ