ಕ್ರೈಂದೇಶ-ವಿದೇಶ

ಹಿಂದೂಗಳ ದೇವಾಲಯದಲ್ಲಿಯೇ ಭಕ್ತರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್

ನ್ಯೂಸ್ ನಾಟೌಟ್: ಕೆನಡಾದಲ್ಲಿ ಹಿಂದೂ ದೇವಾಲಯಗಳ ಮೇಲೆ ಖಲೀಸ್ತಾನಿಗಳ ದಾಳಿ ನಡೆದಿದೆ. ಖಲಿಸ್ತಾನಿ ಬೆಂಬಲಿಗರು ಭಾನುವಾರ(ನ.3) ರಂದು ಬ್ರಾಂಪ್ಟನ್ ನಲ್ಲಿರುವ ಹಿಂದೂ ದೇವಾಲಯದಲ್ಲಿ ಭಕ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಇದರ ಬೆನ್ನಲ್ಲೇ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಸೋಮವಾರ(ನ.4) ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿದ ಬೆಳವಣಿಗೆ ನಡೆದಿದೆ.

ಭಾರತ–ಕೆನಡಾ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆಯೇ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಶನಿವಾರ ದೀಪಾವಳಿ ಆಚರಣೆಯಲ್ಲಿ ಭಾಗಿಯಾಗಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಇದೇ ಸಂದರ್ಭದಲ್ಲಿ ಕೆನಡಾದಲ್ಲಿರುವ ಹಿಂದೂ ದೇವಾಲಯಗಳಿಗೆ ಭೇಟಿ ನೀಡಿದ್ದರು.

ಅಷ್ಟು ಮಾತ್ರವಲ್ಲದೆ ದೇವಸ್ಥಾನದಲ್ಲಿ ನೀಡಿರುವ ಕೆಂಪು ದಾರವನ್ನು ಕೈಗೆ ಕಟ್ಟಿಕೊಂಡಿದ್ದು ಇದರ ವಿಡಿಯೋ X ನಲ್ಲಿ ಹಂಚಿಕೊಂಡಿದ್ದಾರೆ. ಇದರ ಬೆನ್ನಲ್ಲಿ ಖಾಲಿಸ್ತಾನಿಗಳು ಬ್ರಾಂಪ್ಟನ್ ನಲ್ಲಿರುವ ಹಿಂದೂ ದೇವಾಲಯಕ್ಕೆ ದಾಳಿ ನಡೆಸಿದ್ದಾರೆ. ಅಲ್ಲಿದ್ದ ಹಿಂದೂ ಭಕ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಕೆನಡಾದಲ್ಲಿರುವ ಭಾರತೀಯ ಮೂಲದ ಸಂಸದ ಚಂದ್ರ ಆರ್ಯ ಅವರು ಬ್ರಾಂಪ್ಟನ್ ನ ಹಿಂದೂ ಸಭಾ ಮಂದಿರದಲ್ಲಿ ನಡೆದ ಹಿಂಸಾಚಾರದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅತಿರೇಕದ ವರ್ತನೆ ಖಾಲಿಸ್ತಾನಿಗಳು ಅತಿರೇಕದ ವರ್ತನೆಯನ್ನು ತೋರೋಸುತಿದ್ದಾರೆ ಎಂದು ಕಿಡಿಕಾರಿದ್ದಾರೆ.

Related posts

13 ತಿಂಗಳಿನಿಂದ ಕಬ್ಬಿನ ಗದ್ದೆಗಳಲ್ಲಿ ಬೆತ್ತಲೆಯಾಗಿ ಮಹಿಳೆಯರ ಶವ ಪತ್ತೆ..! 9 ಕೊಲೆಗಳ ಬಳಿಕವೂ ಸಿಕ್ಕಿಲ್ಲ ಸೀರಿಯಲ್ ಕಿಲ್ಲರ್..!

ಸಂಪಾಜೆ ದರೋಡೆ ಪ್ರಕರಣ: 71.52 ಗ್ರಾಂ ಚಿನ್ನಾಭರಣ, 11,590 ರೂ. ವಶ

ಹುಲ್ಲು ಮೇಯುತ್ತಿದ್ದ ವೇಳೆ ಹೆಡೆಯೆತ್ತಿ ನಿಂತ ನಾಗರ ಹಾವನ್ನು ಮುದ್ದಾಡಿದ ಹಸು..! ಇಲ್ಲಿದೆ ಅಪರೂಪದ ವಿಡಿಯೋ