ಕರಾವಳಿವೈರಲ್ ನ್ಯೂಸ್

ಹಿಂದೂ ನಾಯಕ ಮಹೇಶ್ ಶೆಟ್ಟಿ ತಿಮರೋಡಿ ನಿವಾಸಕ್ಕೆ ಶ್ರೀ ರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಭೇಟಿ, ಸೌಜನ್ಯ ಪ್ರಕರಣದ ಬಗ್ಗೆ ಇಬ್ಬರು ನಾಯಕರ ನಡುವೆ ಸುದೀರ್ಘ ಮಾತುಕತೆ

ನ್ಯೂಸ್ ನಾಟೌಟ್: ಸೌಜನ್ಯ ಪರ ನ್ಯಾಯದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಹಿಂದೂ ನಾಯಕ ಮಹೇಶ್ ಶೆಟ್ಟಿ ತಿಮರೋಡಿ ನಿವಾಸಕ್ಕೆ ಶ್ರೀ ರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಭೇಟಿ ನೀಡಿದ್ದಾರೆ.

ಮಹೇಶ್ ಶೆಟ್ಟಿ ತಿಮರೋಡಿ ನಿವಾಸಕ್ಕೆ ಭೇಟಿ ನೀಡಿರುವ ಪ್ರಮೋದ್ ಮುತಾಲಿಕ್ ಸೌಜನ್ಯ ಹೋರಾಟದ ಬಗೆಗಿನ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಮಾತ್ರವಲ್ಲ ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಹೋರಾಟ ಸಾಗಲಿದೆ ಅನ್ನುವ ಬಗೆಗಿನ ಮಾಹಿತಿಯನ್ನು ತಿಮರೋಡಿಯವರಿಂದ ಪಡೆದುಕೊಂಡಿದ್ದಾರೆ. ಅಲ್ಲದೆ ತಿಮರೋಡಿ ಅವರ ಹೋರಾಟಕ್ಕೆ ಬೆಂಬಲ ಸೂಚಿಸುವ ಬಗ್ಗೆಯೂ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೌಜನ್ಯಳಿಗೆ ನ್ಯಾಯ ಸಿಗಬೇಕು ಅನ್ನುವ ಒತ್ತಾಯ ಭಾರಿ ಸಂಖ್ಯೆಯಲ್ಲಿ ಕೇಳಿ ಬಂದಿದೆ. ದಕ್ಷಿಣ ಹೊರತುಪಡಿಸಿದಂತೆ ರಾಜ್ಯದ ವಿವಿಧ ಮೂಲೆಗಳಿಂದ ಸೌಜನ್ಯ ಪರ ನ್ಯಾಯದ ಕೂಗು ಕೇಳಿ ಬರುತ್ತದೆ.

Related posts

ಚಂದ್ರಯಾನ-3 ಲ್ಯಾಂಡಿಂಗ್‌ ಕಾರ್ಯಕ್ರಮ ಪ್ರಸಾರ ಮಾಡಲಿವೆಯೇ ಪಾಕ್ ಮಾಧ್ಯಮಗಳು? ಪಾಕ್‌ ಮಾಜಿ ಸಚಿವ ಈ ಬಗ್ಗೆ ಹೇಳಿದ್ದೇನು?

ಬೆಳ್ತಂಗಡಿ : ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ  ಆಶೀರ್ವಾದ ಪಡೆದ ವಿ.ಸುನೀಲ್ ಕುಮಾರ್ ದಂಪತಿ

ಅರಂಬೂರು: ಚಪ್ಪಲಿ ತೆಗೆಯೋಕೆ ಹೋಗಿ ಕಾರಿನ ಗೇರ್ ಚೇಂಜ್ ಮಾಡಿದ ಅಪ್ರಾಪ್ತ ಮಗ, ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸಿ ಕಲ್ಲಿಗೆ ಗುದ್ದಿ ನಿಂತ ಕಾರು