ನ್ಯೂಸ್ ನಾಟೌಟ್ : ವಯಸ್ಸು ಕೇವಲ ಸಂಖ್ಯೆ ಅಷ್ಟೇ.ಹೌದು,ಇಲ್ಲೊಬ್ಬರು ತಾತ ತನ್ನ ೯೬ ವರ್ಷದ ಇಳಿವಯಸ್ಸಿನಲ್ಲಿ ಕೂಡ ಮೊಮ್ಮಗನ ಮದುವೆಯಲ್ಲಿ ಭರ್ಜರಿ ಸ್ಟೆಪ್ ಹಾಕಿದ್ದಾರೆ.ನೇಪಾಳಿ ಹಾಡಿಗೆ ಹೆಜ್ಜೆ ಹಾಕಿರುವ ವಿಡಿಯೋವೀಗ ಸಕತ್ ವೈರಲ್ ಆಗಿದೆ.
ತನ್ನ ಮಕ್ಕಳ ಮದುವೆ ಸಂಭ್ರಮ ಎಂದರೇನೆ ಖುಷಿ,ಆದರೆ ಮೊಮ್ಮಕ್ಕಳ ಮದುವೆಯಲ್ಲಿ ಭಾಗಿಯಾಗುವುದೆಂದರೆ ಆ ಖುಷಿ ಇನ್ನೂ ಇಮ್ಮಡಿಯಾಗುತ್ತೆ. ಈ ತಾತನಿಗೂ ಮೊಮ್ಮಗನ ಮದುವೆ ನೋಡಿ ಸಂತಸಕ್ಕೆ ಪಾರವೇ ಇರಲಿಲ್ಲ.ಈ ಖುಷಿಯಲ್ಲಿ ತಾತ ಎಂಜಾಯ್ ಮಾಡಿದ್ದಾರೆ.ಡಾನ್ಸ್ ಮಾಡಿದ ಆ ವಿಡಿಯೋ ತುಣುಕೊಂದು ಸಕತ್ ವೈರಲ್ ಆಗಿದೆ.
ವೈರಲ್ ವೀಡಿಯೊದಲ್ಲಿ ಅಜ್ಜ ಸಾಂಪ್ರದಾಯಿಕ ನೇಪಾಳಿ ಹಾಡಿಗೆ ಡಾನ್ಸ್ ಮಾಡುವುದನ್ನು ಕಾಣಬಹುದು. ಡಾನ್ಸ್ ವೈರಲ್ ವಿಡಿಯೋ ಇಲ್ಲಿದೆ ನೋಡಿ