ಕ್ರೈಂ

ಗುಂಡ್ಯ: ರಸ್ತೆ ಬದಿ ಕಾರು ನಿಲ್ಲಿಸಿದ್ದ ವ್ಯಕ್ತಿ ಮರಬಿದ್ದು ಪತ್ನಿ, ಮಕ್ಕಳ ಕಣ್ಣೆದುರೇ ಸಾವು

ಗುಂಡ್ಯ: ಸಾವು ಯಾವ ಸಂದರ್ಭದಲ್ಲೂ ಎದುರಾಗಬಹುದು ಅನ್ನೋದಕ್ಕೆ ಇಲ್ಲೊಂದು ಪ್ರತ್ಯಕ್ಷ ಉದಾಹರಣೆಯನ್ನು ನೋಡಬಹುದು. ಹೌದು, ಚಲಾಯಿಸುತ್ತಿದ್ದ ಕಾರ್ ನಲ್ಲಿ ಶಬ್ದ ಬಂದ ಹಿನ್ನೆಲೆಯಲ್ಲಿ ಹೆದ್ದಾರಿಯ ಬದಿ ನಿಲ್ಲಿಸಿದ ವೇಳೆ ಕಾರಿನ ಮೇಲೆ ಮರ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಶಿರಾಡಿ ಗ್ರಾಮದ ಗುಂಡ್ಯ ಸಮೀಪದ ಅಡ್ಡ ಹೊಳೆಯಲ್ಲಿ ಇಂದು ಮುಂಜಾನೆ ನಡೆದಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಗಳೂರು ಕಡೆಗೆ ತೆರಳುತ್ತಿದ್ದ ಕಾರಿನಲ್ಲಿ ಶಬ್ದ ಬಂದಿದ್ದು, ಈ ವೇಳೆ ರಸ್ತೆ ಬದಿಯಲ್ಲಿ ಚಾಲಕ ಕಾರನ್ನು ನಿಲ್ಲಿಸಿ ಬಾನೆಟ್ ತೆಗೆಯುತ್ತಿದ್ದ ವೇಳೆ ಹೆದ್ದಾರಿ ಬದಿಯಲ್ಲಿದ್ದ ಮರವೊಂದು ಕಾರು ಮತ್ತು ಚಾಲಕನ ಮೇಲೆ ಬಿದ್ದಿದೆ ಎನ್ನಲಾಗಿದೆ. ಘಟನೆಯಲ್ಲಿ ಕಾರ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಕಾರಿನಲ್ಲಿದ್ದ ಚಾಲಕನ ಪತ್ನಿ ಮತ್ತು ಇಬ್ಬರು ಮಕ್ಕಳು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.

Related posts

ಮೊಬೈಲ್ ಕಸಿದುಕೊಂಡ ತಾಯಿಯ ತಲೆಗೆ ಬ್ಯಾಟ್ ನಿಂದ ಹೊಡೆದ ಪುಟ್ಟ ಬಾಲಕ..! ಇಲ್ಲಿದೆ ವೈರಲ್ ಸಿಸಿಟಿವಿ ದೃಶ್ಯ..!

ವಿಮಾನದಿಂದ ಕೆಳಗೆ ಬಿದ್ದ ಸಿಬ್ಬಂದಿ..! ಏನಿದು ಘಟನೆ..? ಇಲ್ಲಿದೆ ವಿಡಿಯೋ

ಬಿಜೆಪಿ ಮುಖಂಡನ ಮೇಲೆ ಬಾಂಬ್ ದಾಳಿ! ಹತ್ಯೆಯಾದಾತನ ಮೇಲಿತ್ತು 15ಕ್ಕೂ ಹೆಚ್ಚು ಪ್ರಕರಣ