ಕ್ರೈಂದೇಶ-ವಿದೇಶವೈರಲ್ ನ್ಯೂಸ್

ರೈಲು ನಿಲ್ದಾಣದ ಸಮೀಪ 19 ವರ್ಷದ ಯುವತಿಯ ಕೊಲೆ ಪ್ರಕರಣದಲ್ಲಿ ಆಘಾತಕಾರಿ ಮಾಹಿತಿ ಬಯಲು..! ಕೊಂದ ಬಳಿಕ ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದ ಹಂತಕ..!

ನ್ಯೂಸ್ ನಾಟೌಟ್: ಇತ್ತೀಚೆಗೆ ಗುಜರಾತ್‌ ನ ರೈಲು ನಿಲ್ದಾಣದ ಸಮೀಪ ಯುವತಿಯ ಅತ್ಯಾಚಾರ, ಕೊಲೆ ಪ್ರಕರಣ ನಡೆದಿತ್ತು. ಕೇಸ್‌ ನ ಆರೋಪಿಯ ವಿಚಾರಣೆ ಸಂದರ್ಭದಲ್ಲಿ ಹಲವು ಆಘಾತಕಾರಿ ಅಂಶಗಳು ಬಯಲಾಗಿವೆ. ಈತ ಯುವತಿಯ ಕೊಲೆ ಮಾಡಿದ ಬಳಿಕ ಮತ್ತೆ ಸ್ಥಳಕ್ಕೆ ಮರಳಿ ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.

ನವೆಂಬರ್ 14 ರಂದು ಉದ್ವಾಡ ರೈಲು ನಿಲ್ದಾಣದ ಸಮೀಪ 19 ವರ್ಷದ ಯುವತಿಯ ಕೊಲೆಯಾಗಿತ್ತು. ಹಳಿಯ ಮೇಲೆ ಆಕೆಯ ಶವ ಪತ್ತೆಯಾಗಿತ್ತು. ಹಂತಕ ಹರಿಯಾಣದ ರೋಹ್ಟಕ್ ನಿವಾಸಿ ರಾಹುಲ್ ಜಾಟ್ ಅಲಿಯಾಸ್ ಭೋಲು ಕರ್ಮವೀರ್ ಈಶ್ವರ್ ಜಟ್ (29) ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ಕಳೆದ 11 ದಿನಗಳಲ್ಲಿ 5 ಮಂದಿಯನ್ನು ಕೊಲೆ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ಗುಜರಾತ್‌ ಪೊಲೀಸರು ಮಾಹಿತಿ ನೀಡಿದ್ದಾರೆ.

ರೈಲು ನಿಲ್ದಾಣದ ಸಮೀಪ ಮನೆಯಿಂದ ಟ್ಯೂಷನ್‌ ಗೆ ಹೋಗುತ್ತಿದ್ದ ಯುವತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಆ ನಂತರ ಆಕೆಯ ಶವದೊಂದಿಗೆ ಸಂಭೋಗ ನಡೆಸಿದ್ದಾನೆ. ಕೊಲೆಯ ಬಳಿಕ ರೈಲು ನಿಲ್ದಾಣಕ್ಕೆ ಮರಳಿ ಹಣ್ಣು, ನೀರಿನ ಬಾಟಲಿ ಖರೀದಿಸಿ ಮತ್ತೆ ಕೊಲೆ ಮಾಡಿದ್ದ ಸ್ಥಳಕ್ಕೆ ತೆರಳಿದ ಹಂತಕ ಶವದೊಂದಿಗೆ ಮತ್ತೆ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಕೊನೆಗೆ ಯುವತಿ ಸ್ನೇಹಿತರು, ಪೋಷಕರು ಹುಡುಕುತ್ತಾ ಬಂದಾಗ ಆ ಸ್ಥಳದಿಂದ ತಪ್ಪಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ವಿಚಾರಣೆ ಹಿನ್ನೆಲೆ ಪೊಲೀಸರು ಸ್ಥಳಕ್ಕೆ ಹಂತಕನನ್ನು ಕರೆತಂದು ಮಹಜರು ಮಾಡಿದ್ದಾರೆ. ಸಿಸಿಟಿವಿ ಚಲನವಲನ ಪರಿಶೀಲಿಸಿ ಕೃತ್ಯದ ಸಂದರ್ಭದಲ್ಲಿ ಬಿಟ್ಟು ಹೋಗಿದ್ದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಯುವತಿಯನ್ನು ಕೊಲ್ಲುವ ಮೊದಲು ಇಬ್ಬರನ್ನು, ಆ ನಂತರ ಇಬ್ಬರನ್ನು ರೈಲಿನಲ್ಲಿ ಕೊಂದಿದ್ದಾನೆ ಎಂದು ಪೊಲೀಸ್‌ ತನಿಖೆಯಲ್ಲಿ ತಿಳಿದುಬಂದಿದೆ. ಐದನೇ ವಯಸ್ಸಿನಲ್ಲಿ ಪೋಲಿಯೋಗೆ ತುತ್ತಾದ ರಾಹುಲ್ ಎಡಗಾಲಿನ ಅಂಗವೈಕಲ್ಯದಿಂದ ಬಳಲುತ್ತಿದ್ದಾನೆ. ಇತ್ತೀಚೆಗಷ್ಟೆ ಕೊಲೆಗೈಯುವ ಮುನ್ನ ರಾಹುಲ್ ರಾಜಸ್ಥಾನ, ಹರಿಯಾಣ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಾದ್ಯಂತ ಟ್ರಕ್ ಕಳ್ಳತನ ಮತ್ತು ಶಸ್ತ್ರಾಸ್ತ್ರ ಸಾಗಣೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ.

Click

https://newsnotout.com/2024/11/kannada-news-ambulance-16-year-old-girl-kannada-news/
https://newsnotout.com/2024/11/pak-islamabhad-kannada-news-viral-news-container/
https://newsnotout.com/2024/11/kananda-news-police-commisioner-anupam-agarwal-news/
https://newsnotout.com/2024/11/narendra-modi-special-protection-group-women-viral-photo/

Related posts

ಮಂಗಳೂರಿನಲ್ಲಿ ವಿದ್ಯಾರ್ಥಿನಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್..! ಅನ್ಯಕೋಮಿನ ಯುವಕನಿಂದ ಡ್ರಗ್ಸ್ ನಂಟು..?

ಉಮಾಪತಿ, ಪ್ರಥಮ್‍ ಗೆ ಬೆದರಿಕೆ ಹಾಕಿದ್ದ ದರ್ಶನ್ ಅಭಿಮಾನಿ ಅರೆಸ್ಟ್..! ವಿಡಿಯೋ ಮಾಡಿ ಕ್ಷಮೆ ಕೇಳಿದ ಅಂಧಾಭಿಮಾನಿ..! ಬೆದರಿಕೆ ಹಾಕಿದ ಎಲ್ಲರ ವಿರುದ್ಧ ಕ್ರಮಕ್ಕೆ ಪೊಲೀಸರ ಸಿದ್ಧತೆ..!

ಸಲ್ಮಾನ್ ಖಾನ್ ಹತ್ಯೆಯ ಸಂಚು ರೂಪಿಸಿದ್ದ ಲಾರೆನ್ಸ್ ಬಿಷ್ಣೋಯ್ ಸಹೋದರನ ಸುಳಿವು ನೀಡಿದವರಿಗೆ 10 ಲಕ್ಷ ರೂ. ಬಹುಮಾನ..! ಈತನ ವಿರುದ್ಧ 18 ಪ್ರಕರಣಗಳು ದಾಖಲು..!