ಸುಳ್ಯ

ಗ್ರಾಮ ಪಂಚಾಯತ್ ಗ್ರಂಥಾಲಯ ಉನ್ನತೀಕರಿಸಿ ಡಿಜಿಟಲ್ ಗ್ರಂಥಾಲಯವಾಗಿಸಲು ನಿರ್ಧಾರ, ಭವಾನಿಶಂಕರ್ ಅಧ್ಯಕ್ಷತೆಯಲ್ಲಿ ಸಭೆ

ಸುಳ್ಯ:   ಇತ್ತೀಚೆಗೆ ತಾಲೂಕು ಪಂಚಾಯತ್ ಕಚೇರಿಯ ಮಿನಿ ಸಭಾಂಗಣದಲ್ಲಿ  ಗ್ರಾಮ ಪಂಚಾಯತ್ ಗ್ರಂಥಾಲಯವನ್ನಾಗಿ ಉನ್ನತೀಕರಿಸಿ ಡಿಜಿಟಲ್ ಗ್ರಂಥಾಲಯ ವನ್ನಾಗಿ ಮಾರ್ಪಡಿಸುವ ಬಗ್ಗೆ ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಭವಾನಿಶಂಕರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.  ನಂತರ ಮಾತನಾಡಿದ ಅವರು,  ಈಗಾಗಲೇ ಗ್ರಾಮ ಪಂಚಾಯಿತಿ ಗ್ರಂಥಾಲಯಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸುಪರ್ದಿಗೆ ಬಂದಿದೆ. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತ್ ಗಳು ಜವಾಬ್ದಾರಿ ವಹಿಸಿಕೊಂಡು ಗ್ರಂಥಾಲಯ ಮೇಲ್ವಿಚಾರಕರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹೊಂದಾಣಿಕೆಯಿಂದ ಉತ್ತಮ ಕೆಲಸಗಳನ್ನು ಮಾಡಿದ ತಾಲೂಕಿನ ಮೂರು ಪಂಚಾಯತಿಗಳನ್ನು ಗುರುತಿಸಲಾಗುವುದು ಎಂದು ತಿಳಿಸಿದರು . ಈ ಸಭೆಯಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯ ಅಧಿಕಾರಿ ಶ್ರೀಮತಿ ಗಾಯತ್ರಿ ಯವರು ಗ್ರಾಮ ಪಂಚಾಯಿತಿಗಳನ್ನು ಉನ್ನತೀಕರಿಸಿ ಡಿಜಿಟಲ್ ಗ್ರಂಥಾಲಯ ವನ್ನಾಗಿ ಮಾರ್ಪಡಿಸುವ ಬಗ್ಗೆ ಮಾಹಿತಿ ನೀಡಿದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಂಥಾಲಯ ಮೇಲ್ವಿಚಾರಕರು,  ತಾಲೂಕು ಪಂಚಾಯತ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.  

Related posts

ಸುಳ್ಯದಲ್ಲೊಂದು ಸಣ್ಣ ಟೀ ಅಂಗಡಿ ಇಟ್ಟು ನಾಲ್ಕು ಜನ ಮೆಚ್ಚುವಂತೆ ಬದುಕಿದ ಹಿರಿಯಜ್ಜ..!, ಪ್ರೀತಿ ವಿಶ್ವಾಸಕ್ಕೆ ಮತ್ತೊಂದು ಹೆಸರಾದ ಚಾಯ್ ವಾಲಾ ವೆಂಕಪ್ಪ ಗೌಡ ಇನ್ನು ನೆನಪು ಮಾತ್ರ, ಸರಳ ಜೀವಿಗೆ ಸುಳ್ಯದ ಆಂಬ್ಯುಲೆನ್ಸ್ ಚಾಲಕ -ಮಾಲಕರಿಂದ ಅಂತಿಮ ನಮನ

ಸುಳ್ಯ: ಬ್ಯೂಟಿ ಪಾರ್ಲರ್ ಗೆ ತೆರಳಿದ್ದ ನವ ವಿವಾಹಿತೆ ನಾಪತ್ತೆ, ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಸುಳ್ಯ:ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ಉಮೇದುವಾರಿಕೆ ಸಲ್ಲಿಕೆ; ಬೃಹತ್ ಮೆರವಣಿಗೆಯಲ್ಲಿ ಮುಖಂಡರು,ಕಾರ್ಯಕರ್ತರು ಭಾಗಿ