ಸುಳ್ಯ: ಯುವಕರು ರಕ್ತದಾನ ಮಾಡಲು ರಕ್ತ ಮುಂದೆ ಬರಬೇಕು ಎಂದು ಕರ್ನಾಟಕದಲ್ಲಿ ಅತೀ ಹೆಚ್ಚು ಬಾರಿ ರಕ್ತದಾನ ಮಾಡಿ ದಾಖಲೆ ಬರೆದ ಪಿಬಿ ಸುಧಾಕರ ರೈ ತಿಳಿಸಿದ್ದಾರೆ. ಎಐಕೆಎಂಸಿಸಿ ಬೆಂಗಳೂರು ಶಿಹಾಬ್ ತಂಙಳ್ ಸೆಂಟರ್ ಫಾರ್ ಹ್ಯುಮಾನಿಟಿ ವತಿಯಿಂದ ನಡೆಯುತ್ತಿರುವ ಮೂರನೇ ಸಾಮೂಹಿಕ ವಿವಾಹ ಕಾರ್ಯಕ್ರಮ ಹಾಗೂ ಈ ಪ್ರಯುಕ್ತ ನಡೆಯುತ್ತಿರುವ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು. ಎಲ್ಲರೂ ರಕ್ತದಾನ ಮಾಡಬೇಕು ರಕ್ತದಾನ ಮಾಡುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಹೊರತು ಯಾವುದೇ ತೊಂದರೆ ಆಗುವುದಿಲ್ಲ. ಯುವಕರು ಆದಷ್ಟು ತುರ್ತು ಸಂದರ್ಭಗಳಲ್ಲಿ ರಕ್ತದಾನ ಮಾಡಲು ಮುಂದೆ ಬರಬೇಕು ಎಂದರು. ಎಐಕೆಎಮ್ ಸಿಸಿ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಎಮ್.ಕೆ.ನೌಶಾದ್ ಅತಿಥಿಗಳನ್ನು ಬರಮಾಡಿಕೊಂಡರು. ಪಾಣಕ್ಕಾಡ್ ಸೈಯ್ಯದ್ ಸಾದಿಕಲಿ ಶಿಹಾಬ್ ತಂಙಳ್, ಶಾಸಕ ಎನ್ ಎ ಹ್ಯಾರಿಸ್, ಸ್ಥಳೀಯ ಕಾರ್ಪೋರೇಟರ್ ಮುಜಾಹಿದ್ ಫಾಶಾ, ಯೂತ್ ಕಾಂಗ್ರೆಸ್ ಮಂಜು, ಎಐಕೆಎಂಸಿಸಿ ಬೆಂಗಳೂರು ಅದ್ಯಕ್ಷ ಟಿ ಉಸ್ಮಾನ್ , ಎಐಕೆಎಂಸಿಸಿ ಬೆಂಗಳೂರು ಪ್ರಧಾನ ಕಾರ್ಯದರ್ಶಿ ಎಂ ಕೆ ನೌಶಾದ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.