ಕೊಡಗು

ಮಡಿಕೇರಿ: ಗೌಡ ಪ್ರೀಮಿಯರ್ ಲೀಗ್ ಲಾಂಛನ ಬಿಡುಗಡೆ

ನ್ಯೂಸ್ ನಾಟೌಟ್ : ಕೊಡಗು ಗೌಡ ಯುವ ವೇದಿಕೆ ವತಿಯಿಂದ ಮೇ 16ರಿಂದ ಮಡಿಕೇರಿ ಜನರಲ್‌ ತಿಮ್ಮಯ್ಯ ಜಿಲ್ಲಾ ಕ್ರೀಡಂಗಣದಲ್ಲಿ ನಡೆಯಲಿರುವ ಲೆದರ್ ಬಾಲ್‌ -ಟಿ10 ಪ್ರೀಮಿಯರ್ ಲೀಗ್‌ ಕ್ರಿಕೆಟ್ ಪಂದ್ಯಾವಳಿಯ ಲಾಂಛನ ಬಿಡುಗಡೆ ಮತ್ತು ಆಟಗಾರರ ಹರಾಜು ಪ್ರಕ್ರಿಯೆ ನಗರದ ಖಾಸಗಿ ಹೋಂಸ್ಟೇಯಲ್ಲಿ ಶುಕ್ರವಾರ ಸಾಯಂಕಾಲ ನಡೆಯಿತು.

ಗೌಡ ಕ್ರಿಕೆಟ್‌ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಗೌಡ ಪ್ರೀಮಿಯರ್ ಲೀಗ್ ನಡೆಯುತ್ತಿದ್ದು, ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಗೌರವ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, ಪೊನ್ನಚನ್ ಮಧು ಸೋಮಣ್ಣ , ಲಾಂಛನ ಬಿಡುಗಡೆ ಮಾಡಿದರು.

ಕಟ್ಟೆಮನೆ ಸೋನಾಜಿತ್ ಹರಾಜು ಪ್ರಕ್ರಿಯೆ ನಡೆಸಿಕೊಟ್ಟರು. ತಂಡಗಳ ಖರೀದಿ ಮಾಡಿರುವ ಪ್ರಾಂಚೈಸಿಗಳಾದ ಮಡಿಕೇರಿ ಕಾಫಿ ಕ್ರಿಕೆಟರ್ಸ್ , ಸಿದ್ದಲಿಂಗಪುರ ಗೌಡ ಕಿಂಗ್ಸ್ , ಕರಗೋಡಿನ ಕುಕ್ಕನೂರ್ ಬುಲ್ಸ್ , ಕುಶಾಲನಗರದ ಕೆಜಿಎಸ್ ಸ್ಟ್ರೈಕರ್ಸ್ , ಮಡಿಕೇರಿಯ ಟೀಂ ಭಗವತಿ, ಬಿಳಿಗೇರಿಯ ಪ್ಲಾಂಟರ್ಸ್ ಕ್ಲಬ್, ಮಡಿಕೇರಿ ಚಾಂಪಿಯನ್ ಬಾವಾಸ್ ಹಾಗೂ ದಿ ಎಲೈಟ್ ಕ್ಲಬ್ ಬಲ್ಲಮಾವಟಿ ತಂಡಗಳ ಮಾಲೀಕರು, ಐಕಾನ್ ಆಟಗಾರರು ಪಾಲ್ಗೊಂಡು ಆಟಗಾರರನ್ನು ಖರೀದಿಸಿದರು. ಈ ಸಂದರ್ಭ ಯುವ ವೇದಿಕೆ ಉಪಾಧ್ಯಕ್ಷ ಕೋಚನ ಅನೂಪ್ , ಕಾರ್ಯದರ್ಶಿ ಪುದಿಯನೆರವನ ರಿಶಿತ್, ಖಜಾಂಜಿ ಮೂಲೆಮಜಲು ಮನೋಜ್ , ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್ , ನಿರ್ದೇಶಕರಾದ ಕಟ್ಟಮನೆ ರೋಶನ್‌, ಪರಿಚನ ಸತೀಶ್ , ದೇರಳ ನವೀನ್, ಕೆದಂಬಾಡಿ ಕಾಂಚನ್‌ ಮೊದಲಾದವರು ಉಪಸ್ಥಿತರಿದ್ದರು.

Related posts

ಕಾಫಿ ತೋಟದೊಳಗೆ ಎರಡು ಗೋವುಗಳ ಕಳೇಬರ ಪತ್ತೆ ,ಪ್ರಕರಣ ದಾಖಲಿಸಿಕೊಂಡ ಪೊಲೀಸರು

ಮಡಿಕೇರಿ:ವಿದ್ಯಾರ್ಥಿಗಳಿಗೆ ಮುಂದಿನ ತಿಂಗಳಿಂದ ರಾಗಿ ಮಾಲ್ಟ್,ವಾರಕ್ಕೆರಡು ಮೊಟ್ಟೆ ವಿತರಣೆ; ಸಚಿವ ಮಧು ಬಂಗಾರಪ್ಪ ಹೇಳಿದ್ದೇನು? ಇಲ್ಲಿದೆ ವರದಿ

ಓಟು ಹಾಕುವ ಮುಂಚೆ ಪ್ರತಿಯೊಬ್ಬರು ಈ ಸ್ಟೋರಿ ಓದಿ, ನೋಟಾ ಅಂದ್ರೇನು ತಿಳಿಯಿರಿ