ದೇಶ-ಪ್ರಪಂಚವೈರಲ್ ನ್ಯೂಸ್

ಚಲಿಸುತ್ತಿದ್ದ ಸರ್ಕಾರಿ ಬಸ್‌ನಲ್ಲೇ ಮಹಿಳೆ ಜತೆ ಕಂಡೆಕ್ಟರ್‌ನ ಲೈಂಗಿಕ ಕ್ರಿಯೆ, ವಿಡಿಯೋ ವೈರಲ್‌….! ಮಜಾ ಮಾಡಲು ಹೋಗಿ ಸಿಕ್ಕಿಬಿದ್ದ ಕಂಡೆಕ್ಟರ್‌ಗೆ ಪ್ರಯಾಣಿಕರು ಮಾಡಿದ್ದೇನು..?

ನ್ಯೂಸ್‌ ನಾಟೌಟ್‌: ಸರ್ಕಾರಿ ಬಸ್‌ನ ಕಂಡೆಕ್ಟರ್‌ ಓರ್ವ ಮಹಿಳೆಯ ಜತೆ ಚಲಿಸುತ್ತಿರುವ ಬಸ್‌ನಲ್ಲೇ ಲೈಂಗಿಕ ಕ್ರಿಯೆ ನಡೆಸಿ ಸಿಕ್ಕಿಬಿದ್ದಿದ್ದಾನೆ. ಈತ ಯುವತಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ದೃಶ್ಯವನ್ನು ಪ್ರಯಾಣಿಕರು ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿದ್ದಾರೆ. ಅಲ್ಲದೇ ಒಂದು ಗಂಟೆಗೂ ಹೆಚ್ಚು ಕಾಲ ಕಂಡೆಕ್ಟರ್ ನಡೆಸಿದ್ದ ಕೃತ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ.

ಈ ಘಟನೆ ನಡೆದದ್ದು ಉತ್ತರಪ್ರದೇಶದ ಲಕ್ನೋಗೆ ತೆರಳುತ್ತಿದ್ದ ಹತ್ರಾಸ್‌ ಡಿಪೋಗೆ ಸೇರಿದ ಬಸ್‌ನಲ್ಲಿ . ಕಂಡಕ್ಟರ್‌ ಬಸ್‌ನ ಹಿಂಬದಿ ಸೀಟ್‌ನಲ್ಲಿ ಕುಳಿತು ವಿಚಿತ್ರವಾಗಿ ವರ್ತಿಸುವುದನ್ನು ಗಮನಿಸಿದ ಪ್ರಯಾಣಿಕನೋರ್ವ ಹತ್ತಿರ ಹೋಗಿ ನೋಡಿದಾಗ ಕಂಬಳಿಯೊಳಗೆ ಮಹಿಳೆಯ ಜತೆ ಲೈಂಗಿಕ ಕ್ರಿಯೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಈ ಘಟನೆಯನ್ನು ಪ್ರಯಾಣಿಕ ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿದ್ದಾರೆ. ವಿಡಿಯೋ ಮಾಡುವುದು ಗೊತ್ತಾದ ತಕ್ಷಣ ಕೋಪಗೊಂಡ ಕಂಡೆಕ್ಟರ್ ಪ್ರಯಾಣಿಕರ ಮೊಬೈಲ್ ಕಸಿದುಕೊಳ್ಳಲು ಪ್ರಯತ್ನಿಸಿದ್ದಾನೆ. ಈ ವೇಳೆ ಕಂಡೆಕ್ಟರ್​ ಮತ್ತು ಪ್ರಯಾಣಿಕರ ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ಘಟನೆ 10 ದಿನಗಳ ಹಿಂದೆಯೇ ನಡೆದಿದೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಘಟನೆ ನಡೆದ ನಿಖರವಾದ ಸ್ಥಳ ವಿಡಿಯೋದಲ್ಲಿ ಗೊತ್ತಾಗಿಲ್ಲ. ಪ್ರಯಾಣಿಕರೊಬ್ಬರು ಅರ್ಧ ಗಂಟೆಯೊಳಗೆ ಮುಂಬರುವ ಆಲಂಬಾಗ್ ಬಸ್ ನಿಲ್ದಾಣದ ಬಗ್ಗೆ ಸುಳಿವು ನೀಡಿರುವ ಕಾರಣ ಇದು ಲಕ್ನೋ ಬಳಿ ನಡೆದಿದೆ ಎಂದು ಹೇಳಲಾಗಿದೆ.. ಅಧಿಕಾರಿಗಳು ಪ್ರಯಾಣಿಕರ ದೂರನ್ನು ಗಂಭೀರವಾಗಿ ಪರಿಗಣಿಸಿ ಕಂಡೆಕ್ಟರ್‌ನನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದಾರೆ.

ವಿಡಿಯೋ ವೈರಲ್ ಆದ ನಂತರ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಹಾಯಕ ಪ್ರಾದೇಶಿಕ ವ್ಯವಸ್ಥಾಪಕರು ಬಸ್​ನ ಚಾಲಕ ಮತ್ತು ನಿರ್ವಾಹಕನ ವಿರುದ್ಧ ಕ್ರಮ ಕೈಗೊಂಡಿದ್ದು, ಘಟನೆ ಕುರಿತು ಸಮಗ್ರ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

Related posts

ದಲಿತ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ ಚಪ್ಪಲಿಯಿಂದ ಉಗುಳು ನೆಕ್ಕಿಸಿ ವಿಕೃತಿ ಮೆರೆದ ಲೈನ್ ಮ್ಯಾನ್‌..! ಸರಕಾರಿ ನೌಕರನ ಸೊಕ್ಕಿನ ವಿಡಿಯೋ ಇಲ್ಲಿದೆ ವೀಕ್ಷಿಸಿ

ಗದ್ದೆಯಲ್ಲಿ ತುರ್ತು ಭೂಸ್ಪರ್ಶ ಮಾಡಿದ ನೌಕಾಪಡೆಯ ಹೆಲಿಕಾಪ್ಟರ್..! ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತರಿಗೆ ಗಾಬರಿ..!

ವಿದೇಶ ಪ್ರವಾಸ ಮುಗಿಸಿ ಭಾರತಕ್ಕೆ ಬಂದಿಳಿದ ಪ್ರಧಾನಿ ಮೋದಿ, ಫೋಟೋಗಳಲ್ಲಿ ವೀಕ್ಷಿಸಿ