ಕರಾವಳಿ

ಫೆ.18ರಿಂದ ಪೇರಡ್ಕ ಮಖಾಂ ಉರೂಸ್ ಆರಂಭ

ಸುಳ್ಯ : ಚರಿತ್ರೆ ಪ್ರಸಿದ್ಧವಾದ ವಲಿಯುಲ್ಲಾಹಿ ದರ್ಗಾ ಶರೀಫ್ ಪೇರಡ್ಕ ಗೂನಡ್ಕ ಇಲ್ಲಿ ವಾರ್ಷಿಕ ಮಖಾಂ ಉರೂಸ್ ಫೆ. 18ರಿಂದ 20ರವರೆಗೆ ಪೇರಡ್ಕದ ತೆಕ್ಕಿಲ್ ಮಹಮ್ಮದ್ ಹಾಜಿ ವೇದಿಕೆಯಲ್ಲಿ ವಿಜೃಂಭಣೆಯಿಂದ ನಡೆಯಲಿದೆ ಎಂದು ಮಸೀದಿಯ ಗೌರವಾಧ್ಯಕ್ಷ, ಮಸೀದಿ ಪುನರ್‌ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಟಿ.ಎಂ.ಶಹೀದ್ ಹೇಳಿದರು.

ಅವರು ಸುಳ್ಯದ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು ಫೆ.18 ರಂದು ಉರೂಸ್ ಕಾರ್ಯಕ್ರಮಕ್ಕೆ ರಿಯಾಝ್ ಫೈಝಿ ಎಮ್ಮೆಮಾಡು ಚಾಲನೆ ನೀಡಲಿದ್ದಾರೆ. ಫೆ. 18 ರಂದು ಮಸೀದಿಯ ಅಧ್ಯಕ್ಷರಾದ ಎಸ್.ಆಲಿಹಾಜಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಶೈಖುನಾ ಅಬ್ದುಲ್ ಖಾದರ್ ಅಲ್‌ಖಾಸಿಮಿ ಉದ್ಘಾಟನೆ ನೆರವೇರಿಸಲಿದ್ದು, ಉಮರ್ ಹುದವಿ ಪುಳಪಾಡಂ ಮುಖ್ಯ ಭಾಷಣ ಮಾಡಲಿದ್ದಾರೆ. ಹಲವಾರು ಮಂದಿ ಧಾರ್ಮಿಕ, ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಸಂಪಾಜೆ ಗ್ರಾ.ಪಂ. ಅಧ್ಯಕ್ಷ ಜಿ.ಕೆ.ಹಮೀದ್, ಟಿ.ಎಂ.ಅಬ್ದುಲ್ ರಝಾಕ್ ಹಾಜಿ, ಹಾಜಿ ಸಾಜಿದ್ ಅಝ್ಹೆರಿ, ರಿಯಾಝ್ ಕಲ್ಲುಗುಂಡಿ ಉಪಸ್ಥಿತರಿದ್ದರು.

Related posts

ಅನ್ನದಾಸೋಹ ಕಟ್ಟಡ ಲೋಕಾರ್ಪಣೆಗೊಳಿಸಿದ ಸಿಎಂ ಬೊಮ್ಮಾಯಿ

ಚಿನ್ನದ ಬೆಲೆಯಲ್ಲಿ 230, ಬೆಳ್ಳಿ ಬೆಲೆ 500 ರೂ. ಹೆಚ್ಚಳ

ಹರ್ಷ, ನೆಟ್ಟಾರ್‌ಗೆ ತೋರಿದ ಕಾಳಜಿ ಬಾಳಿಗಾಗೆ ಏಕಿಲ್ಲ