ಕರಾವಳಿ

ಗೂನಡ್ಕ :ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಜಿಮ್‌ರಿಂದ ಪೇರಡ್ಕ ಜುಮಾ ಮಸ್ಜಿದ್ ಹಾಗೂ ದರ್ಗಾ ಭೇಟಿ

ನ್ಯೂಸ್ ನಾಟೌಟ್ : ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾದ ಅಬ್ದುಲ್ ಅಜಿಮ್ ರವರು ಸಂಪಾಜೆ ಗ್ರಾಮದ ಗೂನಡ್ಕ ಪೇರಡ್ಕ ಮೋಹಿಯುದ್ದಿನ್ ಜುಮಾ ಮಸೀದಿಗೆ ಭೇಟಿ ನೀಡಿದರು.

ಬಳಿಕ ಮಸೀದಿಯ ಇತಿಹಾಸ ಕೇಳಿ ಹಳೆಯ ಮಸೀದಿ ಮತ್ತು ಪೇರಡ್ಕ ದರ್ಗಾದ ಬಗ್ಗೆ ಸಂತಸ ವ್ಯಕ್ತಪಡಿಸಿ ಈ ಭಾಗದಲ್ಲಿ ಮುಸ್ಲಿಮರು ಮಸೀದಿ ಹಾಗೂ ದರ್ಗಾದ ಬಗ್ಗೆ ಭಯ ಭಕ್ತಿ ಶಿಸ್ತು ಉಳ್ಳವರು ಹಾಗೂ ಧಾರ್ಮಿಕ ತಿಳುವಳಿಕೆ ಉಳ್ಳವರು ಎಂದು ಸಂತಸ ವ್ಯಕ್ತಪಡಿಸಿದರು . ಬಳಿಕ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪೇರಡ್ಕ ಜುಮಾ ಮಸೀದಿ ಅಧ್ಯಕ್ಷ ಟಿ. ಎಂ ಶಾಹಿದ್ ತೆಕ್ಕಿಲ್ , ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೇಲು, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಸ್. ಕೆ. ಹನೀಫ್,ಮಾಜಿ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ, ಮಹಮದ್ ಕುಂಞಿ ತೆಕ್ಕಿಲ್, ಮಸೀದಿ ಕಾರ್ಯದರ್ಶಿ ಉಸ್ಮಾನ್, ಪಾಂಡಿ ಅಬ್ಬಾಸ್, ಸಾಧುಮೋನ್ ತೆಕ್ಕಿಲ್ ಪೇರಡ್ಕ ಜುರೈದ್ ತೆಕ್ಕಿಲ್ , ಖಲಿಲ್,ಮುನೀರ್ ದಾರಿಮಿ. ಹಸೈನಾರ್ ಮುಸ್ಲಿಯಾರ್ ಜುನೈದ್ ತೆಕ್ಕಿಲ್, ಮೂಸನ್, ಮೊದಲಾದವರು ಉಪಸ್ಥಿತರಿದ್ದರು.

Related posts

ಭಾರಿ ಮಳೆ: ದ.ಕ. ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಜು.19ರಂದು ರಜೆ, ಜಿಲ್ಲಾಧಿಕಾರಿ ಆದೇಶ

ಫೆ.08ರಂದು ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಕಂದ್ರಪ್ಪಾಡಿ ಶಾಲೆಯ ಶತಮಾನೋತ್ಸವ ಸಂಭ್ರಮ;ತೆಲಿಕೆದ ಬೊಳ್ಳಿ ಡಾ.ದೇವದಾಸ್ ಕಾಪಿಕಾಡ್ ತಂಡದಿಂದ ತುಳು ಹಾಸ್ಯಮಯ ನಾಟಕ ಪ್ರದರ್ಶನ

Sand mining: ಬೃಹತ್ ಅಕ್ರಮ ಮರಳು ಗಣಿಗಾರಿಕೆ ಮೇಲೆ ದಾಳಿ..! ಕೋಟಿ ರೂ. ಮೌಲ್ಯದ ಮರಳು ವಶಕ್ಕೆ..!