ಕ್ರೈಂ

ಮನೆಗೆ ನುಗ್ಗಿ ಚಿನ್ನ ಬೆಳ್ಳಿ ದೋಚಿದ್ದಲ್ಲದೇ ಮಾಲೀಕನ ಕಾರಲ್ಲೇ ತುಂಬಿ ಕಳ್ಳರು ಪರಾರಿ;ಘಟನೆ ನಡೆದದ್ದು ಹೇಗೆ?

ನ್ಯೂಸ್‌ ನಾಟೌಟ್‌ : ಈಗೀಗ ಕಳ್ಳರು ಕೂಡ ಅಪ್‌ ಡೇಟ್ ಆಗುತ್ತಿದ್ದಾರೆ ಅನ್ಸುತ್ತೆ . ಮನೆಯೊಂದರ ಬಾಗಿಲು ಮುರಿದು ಚಿನ್ನ, ಬೆಳ್ಳಿ, ನಗದನ್ನು ದೋಚಿದ್ದಲ್ಲದೇ ಅದೇ ಮನೆಯ ಮಾಲೀಕನ ಕಾರಿನಲ್ಲೇ ತುಂಬಿಕೊಂಡು ಕಳ್ಳರು ಪರಾರಿಯಾದಂತಹ ಆಘಾತಕಾರಿ ಘಟನೆ ಹಾಸನದ ವಿದ್ಯಾನಗರದಲ್ಲಿ ನಡೆದಿದೆ.

ಇಲ್ಲಿನ ವನಜಾಕ್ಷಿ ಎಂಬುವವರು ಕಳೆದ ಹತ್ತು ದಿನಗಳ ಹಿಂದೆ ಮನೆ, ಗೇಟ್‍ಗಳಿಗೆ ಬೀಗ ಹಾಕಿಕೊಂಡು ಬೆಂಗಳೂರಿನಲ್ಲಿರುವ (Bengaluru) ಮಗನ ಮನೆ ತೆರಳಿದ್ದರು.ಇದೇ ಸಂದರ್ಭವನ್ನು ಬಳಸಿಕೊಂಡು ಮನೆಯಲ್ಲಿ ಯಾರು ಇಲ್ಲದ್ದನ್ನು ಗಮನಿಸಿರುವ ಕಳ್ಳರು ಗೇಟ್ ಬೀಗ ಒಡೆದು, ಮನೆಯ ಬಾಗಿಲಿನ ಲಾಕ್ ಮುರಿದು ಒಳಗೆ ನುಗ್ಗಿದ್ದಾರೆ.

ಬೀರುವಿನ ಲಾಕ್ ಒಡೆದು ಅದರಲ್ಲಿಟ್ಟಿದ್ದ ಚಿನ್ನ, ಬೆಳ್ಳಿ, ನಗದನ್ನು ಕದ್ದಿದ್ದು, ಕಾರಿನ ಕೀ ತೆಗೆದುಕೊಂಡು ಇನ್ನೊಂದು ಗೇಟ್‍ನ ಬೀಗ ಒಡೆದು ಕಾರನ್ನು ಕದ್ದೊಯ್ದಿದ್ದಾರೆ.ಸಂಬಂಧಿಕರು ಮನೆಯ ಬಳಿ ಬಂದಾಗ ಕಳ್ಳತನ ನಡೆದಿರುವುದು ತಿಳಿದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಯಿತು.ಸ್ಥಳಕ್ಕೆ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ

Related posts

ಬಂಟ್ವಾಳ: ಬೈಕಿಗೆ ಖಾಸಗಿ ಬಸ್ ಢಿಕ್ಕಿ, ಸವಾರ ಸ್ಥಳದಲ್ಲೇ ಸಾವು..! ಬಸ್ ಚಾಲಕ ಪರಾರಿ..!

ಚೇಳು ಕಚ್ಚಿ 5 ರ ಬಾಲಕ ದುರಂತ ಅಂತ್ಯ..! ಭೂತೋಚ್ಚಾಟನೆ ಮಗುವಿನ ಜೀವಕ್ಕೆ ಮುಳುವಾಯ್ತಾ?

ರಾತ್ರಿಯಿಡೀ ಎಸಿ ಹಾಕಿ ಮಲಗಿದ್ದ ವೈದ್ಯನಿಂದ ನಡೆಯಿತು ಭಾರೀ ಅನಾಹುತ! ನವಜಾತ ಶಿಶುಗಳ ದುರಂತ ಅಂತ್ಯಕ್ಕೆ ಕಾರಣವೇನು? ಮಕ್ಕಳ ಕುಟುಂಬಸ್ಥರು ಹೇಳಿದ್ದೇನು?