ದೇಶ-ಪ್ರಪಂಚ

ಗ್ರಾಹಕರೇ ಚಿಂತಿತರಾಗಬೇಡಿ, ಗೋಬಿ ಬ್ಯಾನ್​ ಆಗಿಲ್ಲ..! ಇದರ ಅಸಲಿ ಕಥೆಯೆ ಬೇರೆ ಇದೆ,ಏನದು? ಇಲ್ಲಿದೆ ರಿಪೋರ್ಟ್‌…

ನ್ಯೂಸ್‌ ನಾಟೌಟ್‌ : ಗೋಬಿ ಮಂಚೂರಿಯನ್ ಪ್ರಿಯರ ಪಾಲಿಗೆ ಇದೊಂದು ಬ್ಯಾಡ್‌ ಸುದ್ದಿಯಾಗಿತ್ತು. ಇನ್ಮುಂದೆ ಗೋಬಿ ಮಂಚೂರಿ ಮಾರಾಟ ಮಾಡುವಂತೆ ಇಲ್ಲ. ಗೋಬಿ ಬ್ಯಾನ್​ ಎನ್ನುವ ಸುದ್ದಿ ವೈರಲ್​ ಆಗುತ್ತಿದ್ದಂತೆ ಮಹತ್ವದ ಮಾಹಿತಿ ಹೊರಬಿದ್ದಿದೆ.

ರಾಜ್ಯದಲ್ಲಿ ಅಪಾಯಕಾರಿಯಾದ ಕಾಟನ್ ಕ್ಯಾಂಡಿ ಈಗಾಗಲೇ ಬ್ಯಾನ್ ಮಾಡಲಾಗಿದೆ. ಇನ್ನು ಗೋಬಿ ಮಂಚೂರಿಯ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣಗಳನ್ನು ಬಳಸುವಂತಿಲ್ಲ. ಗೋಬಿ ಮಂಚೂರಿಯ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣ ಬಳಸಿದರೇ ಆಹಾರ ಸುರಕ್ಷಿತೆ ಮತ್ತು ಗುಣಮಟ್ಟ ಕಾಯ್ದೆ 2006 ನಿಯಮ 59ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.

ಗೋಬಿ ಮಾರಾಟ ಮಾಡುವುದನ್ನು ಬ್ಯಾನ್ ಎಂದು ಸರ್ಕಾರವಾಗಲಿ ಅಥವಾ ಅಧಿಕಾರಿಗಳಾಗಲಿ ​ಹೇಳಿಲ್ಲ. ಗೋಬಿ ಮಾಡುವಾಗ ಕೃತಕ ಬಣ್ಣವನ್ನು ಬಳಕೆ ಮಾಡುವುದು ಮತ್ತು ಆರೋಗ್ಯಕ್ಕೆ ಹಾನಿ ಉಂಟು ಮಾಡುವ  ಬಣ್ಣಗಳನ್ನು ಮಾರಾಟ ಮಾಡುವುದನ್ನು ನಿಷೇಧ ಮಾಡಲಾಗಿದೆ ಎಂದು ಹೇಳಲಾಗಿದೆ.ಗೋಬಿ ಮಂಚೂರಿಯಲ್ಲಿ’ಸನ್‌ಸೆಟ್‌ ಯೆಲ್ಲೊ’ ಬಣ್ಣ ಮತ್ತು ‘ಟಾಟ್ರಾಜಿನ್‌’ ರಾಸಾಯನಿಕ ಅಂಶ ಪತ್ತೆಯಾಗಿದೆ.ಗೋಬಿ ಮಂಚೂರಿಯ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣ ಬಳಸಿದರೆ ಆಹಾರ ಸುರಕ್ಷಿತೆ ಮತ್ತು ಗುಣಮಟ್ಟ ಕಾಯ್ದೆ 2006 ನಿಯಮ 59ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.  ಬಣ್ಣ ಬರಲು ಕೆಮಿಕಲ್​ ಬಳಸಿ ಗೋಬಿ ಮಾಡುವಂತೆ ಇಲ್ಲ. ಕಲರ್​ ಬಳಸಿ ಮಾಡುವ ಗೋಬಿ ಬ್ಯಾನ್​ ಮಾಡಲಾಗುತ್ತದೆ. ಕೃತಕವಾದ ಬಣ್ಣವನ್ನು ಮಾರಾಟ ಹಾಗೂ ಬಳಕೆ ಮಾಡಿದ್ದಲ್ಲಿ ಕಾನೂನು ಕ್ರಮ ಕೈ ಗೊಳ್ಳಲಾಗುತ್ತದೆ.

ಗೋಬಿ ಮಂಚೂರಿ ಮತ್ತು ಕಾಟನ್ ಕ್ಯಾಂಡಿಗಳಲ್ಲಿ ಕೃತಕ ಬಣ್ಣ ಬಳಕೆಯನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಈ ನಿಷೇಧ ಉಲ್ಲಂಘಿಸಿದಲ್ಲಿ 7 ವರ್ಷಗಳವರೆಗೆ ಜೈಲು ಹಾಗು 10 ಲಕ್ಷದವರೆಗೆ ದಂಡ ವಿಧಿಸಲಾಗುವುದು.ಈ ಕೃತಕ ಬಣ್ಣಗಳನ್ನು ಬಳಸುವ ತಿಂಡಿ ತಿನಿಸುಗಳನ್ನು ಸೇವಿಸುವುದರಿಂದ ದೀರ್ಘಾವಧಿಯಲ್ಲಿ ಕಾನ್ಸರ್ ಗೆ ತುತ್ತಾಗುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ. ಸಾರ್ವಜನಿಕರೂ ಸಹ ಇಂತಹವುಗಳ ಬಗ್ಗೆ ಎಚ್ಚರ ವಹಿಸಬೇಕಿದೆ.

Related posts

ಲೋಕಸಭೆ ಚುನಾವಣೆಗೆ ಬಾಲಿವುಡ್‌ ನಟಿ ಕಂಗನಾ ರಣಾವತ್ ಸ್ಪರ್ಧಿಸುತ್ತಿದ್ದರಾ? ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ? ಈ ಬಗ್ಗೆ ನಟಿಯ ತಂದೆ ಹೇಳಿದ್ದೇನು?

ಬಾಲಕ ರಾಮನ ಹಣೆಯ ಮೇಲೆ ಸೂರ್ಯ ರಶ್ಮಿಯ ತಿಲಕ! ಇಲ್ಲಿದೆ ವಿಡಿಯೋ

ಕಳೆದ 60 ವರ್ಷಗಳಿಂದ ನಿದ್ದೆಯನ್ನೇ ಮಾಡದ 80ರ ವ್ಯಕ್ತಿ..!