ಕ್ರೈಂಸುಳ್ಯ

ಸುಳ್ಯ: ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಯುವಕನಿಂದ ಅತ್ಯಾಚಾರ ಆರೋಪ, ಪೊಲೀಸ್ ದೂರು ಕೊಟ್ಟ ಸಂತ್ರಸ್ತೆಯ ತಂದೆ

ನ್ಯೂಸ್ ನಾಟೌಟ್: ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರ ಎಸಗಿರುವ ಪ್ರಕರಣ ಸುಳ್ಯ ತಾಲೂಕಿನ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಾಲಕಿ ಕೊಡಿಯಾಲ ಮೂಲದವಳು ಎಂದು ತಿಳಿದು ಬಂದಿದೆ.

ಈಕೆ ಸುಬ್ರಹ್ಮಣ್ಯದ ಕಾಲೋಜೊಂದರಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಳು ಎನ್ನಲಾಗಿದೆ.
ಈಕೆಯನ್ನು ಪರಿಚಯದ ಯುವಕನೊಬ್ಬ ಪುಸಲಾಯಿಸಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಅಪ್ರಾಪ್ತ ಬಾಲಕಿಯ ತಂದೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸದ್ಯ ಯುವಕನ ವಿರುದ್ಧ ಫೋಕ್ಸೊ ಪ್ರಕರಣದಡಿ ಕೇಸು ದಾಖಲಾಗಿದೆ. ಯುವತಿಯನ್ನು ಅತ್ಯಾಚಾರ ಮಾಡಿದ ಯುವಕ ಕಲ್ಮಡ್ಕ ಮೂಲದವನು ಎಂದು ತಿಳಿದು ಬಂದಿದೆ.

https://www.youtube.com/watch?v=hnkiiNe0x6M

Related posts

ಆಸ್ಪತ್ರೆಗೆ ದಾಖಲಾಗಿದ್ದ ತಮ್ಮನಿಗೆ ಕಿಡ್ನಿ ದಾನ ಮಾಡಿದ ಪತ್ನಿ ..!ದುಬೈನಿಂದ ವಾಟ್ಸಾಪ್‌ನಲ್ಲಿಯೇ ತ್ರಿವಳಿ ತಲಾಖ್ ಕೊಟ್ಟ ಪತಿ..!

ನಟ ದರ್ಶನ್ ಗನ್ ಲೈಸೆನ್ಸ್ ರದ್ದು..! ದರ್ಶನ್ ಮನವಿ ತಿರಸ್ಕರಿಸಿದ ಪೊಲೀಸರು..!

ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ‘ರೇಡಿಯೋ ಡಯಾಗ್ನಿಸಿಸ್’ ವಿಭಾಗದ ವತಿಯಿಂದ ವೈದ್ಯಕೀಯ ಅಧಿವೇಶನ, ತಜ್ಞ ವೈದ್ಯ ಡಾ| ಶಿವಕುಮಾರ್ ಮಣಿಕ್ಕಂ ವಿಷಯ ಮಂಡನೆ