ಕ್ರೈಂ

ವಿಡಿಯೊ ನೋಡುವ ಚಟ: 16ರ ಬಾಲಕಿ ಆತ್ಮಹತ್ಯೆ

ನ್ಯೂಸ್ ನಾಟೌಟ್: ಮೊಬೈಲ್ ನಲ್ಲಿ ಕೊರಿಯನ್ ವಿಡಿಯೊ ಅಲ್ಬಂ ನೋಡುವ ಚಟ ಬೆಳೆಸಿಕೊಂಡಿದ್ದ ಕೇರಳದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ವರದಿಯಾಗಿದೆ.

ತಿರುವನಂತಪುರದಲ್ಲಿ 16ರ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸುತ್ತಿದ್ದೇನೆ ಮತ್ತು ನನಗೆ ಗೆಳೆಯರು ಯಾರೂ ಇಲ್ಲ. ಅಲ್ಲದೆ, ಕೊರಿಯನ್ ಮ್ಯೂಸಿಕ್ ವಿಡಿಯೊಗಳನ್ನು ವಿಪರೀತವಾಗಿ ನೋಡುತ್ತಿದ್ದೇನೆ, ಅದರಿಂದ ಹೊರಬರಲಾಗುತ್ತಿಲ್ಲ ಎಂದು ಬರೆದಿರುವ ಡೆತ್‌ನೋಟ್ ಸಹಿತ ಬಾಲಕಿ ಶವ ಪತ್ತೆಯಾಗಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಕಲ್ಲಂಬಳಂ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು, ಓದಿನಲ್ಲಿ ಹಿಂದುಳಿದಿರುವುದು ಮತ್ತು ಕೊರಿಯನ್ ವಿಡಿಯೊ ನೋಡುವ ಚಟ ಬೆಳೆಸಿಕೊಂಡಿರುವುದರಿಂದ ಬಾಲಕಿ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಅದಕ್ಕೆ ಪೂರಕವಾಗಿ ಬಾಲಕಿ ಬರೆದಿರುವ ಡೆತ್ ನೋಟ್ ಸಿಕ್ಕಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದಿದ್ದಾರೆ.

Related posts

Belthangady:ಬೆಳ್ತಂಗಡಿ: ತಂದೆಯ ಎದುರಲ್ಲೇ ವಿದ್ಯುತ್ ಸ್ಪರ್ಶಿಸಿ ಮಗಳು ಸಾವು, ಪಾರ್ಸೆಲ್ ತರಲು ಓಡಿ ಬಂದ ಮಗಳಿಗೆ ಆಗಿದ್ದೇನು..?

ಕೊಡಗು: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಸಂಬಂಧ 3 ಮನೆಗಳ ಮೇಲೆ NIA ದಾಳಿ..! ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳಿಗೆ‌‌‌ ಕೊಡಗಿನ ಸಂಪರ್ಕ..?

ಉಪ್ಪಿನಂಗಡಿ: ಚಲಿಸುತ್ತಿದ್ದ KSRTC ಐರಾವತ ಬಸ್ ನಲ್ಲಿ ಆಕಸ್ಮಿಕ ಅಗ್ನಿ ಅವಘಡ..! ಎಸಿ(Air Conditioner)ಯಲ್ಲಿ ಕಾಣಿಸಿಕೊಂಡ ಬೆಂಕಿ..!