ಕರಾವಳಿ

ಸಂದರ್ಶನಕ್ಕೆ ಹೋದ ಯುವತಿ ನಾಪತ್ತೆ, ಪೊಲೀಸರ ಹುಡುಕಾಟ

ವರದಿ:ರಸಿಕಾ ಮುರುಳ್ಯ

ನ್ಯೂಸ್ ನಾಟೌಟ್: ತನ್ನ ಸ್ವಂತ ಕಾಲ ಮೇಲೆ ನಿಂತುಕೊಳ್ಳಬೇಕು ಎಂದು ಕನಸು ಕಟ್ಟಿಕೊಂಡಿದ್ದ ಹುಡುಗಿಯೊಬ್ಬಳು ಇದ್ದಕ್ಕಿದ್ದ ಹಾಗೆ ದಿಢೀರ್ ನಾಪತ್ತೆಯಾಗಿರುವ ಘಟನೆ ವಿಟ್ಲದಿಂದ ವರದಿಯಾಗಿದೆ. ಈ ಬಗ್ಗೆ ಅಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂದರ್ಶನಕ್ಕೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಯುವತಿ ಮಂಗಳೂರಿಗೆ ಹೋಗಿದ್ದಳು. ಆದರೆ ಆಕೆ ನಂತರ ಮನೆಗೆ ಬಂದಿಲ್ಲ ಎಂದು ಹೆತ್ತವರು ಠಾಣೆಯಲ್ಲಿ ದೂರು ನೀಡಿದ್ದಾರೆ.

ಬಂಟ್ವಾಳ ತಾಲೂಕಿನ ಕಂಬಳಬೆಟ್ಟು ನಿವಾಸಿ  ಸುಶ್ಮಿತ (21) ನಾಪತ್ತೆಯಾದ ಯುವತಿ.  ಮುಂಜಾನೆ ಮನೆಯಿಂದ ಹೋದ ಈಕೆ ತಿರುಗಿ ಮನೆಗೆ ಬಾರದ ಕಾರಣ ಮನೆಯವರಿಗೆ ಆತಂಕ ಶುರುವಾಗಿದೆ.  ವಿಟ್ಲದ ಪೋಲಿಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related posts

ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ನಾಳೆ (ಜು.25) ರಜೆ, ಆದೇಶ ಹೊರಡಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್

ಮಂಗಳೂರು:ಎಳನೀರು ಕುಡಿದು 15 ಮಂದಿ ಅಸ್ವಸ್ಥ..! ಎಳನೀರು ಮತ್ತು ಐಸ್ ಕ್ರೀಮ್ ಮಾರಾಟ ಸಂಸ್ಥೆಯಿಂದ ಖರೀದಿ

ಪುತ್ತೂರು ಬಂಡಾಯ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಹರಿಹಾಯ್ದ ಕಲ್ಲಡ್ಕ ಪ್ರಭಾಕರ್ ಭಟ್