ದೇಶ-ಪ್ರಪಂಚ

ಶಾಲೆಯಲ್ಲಿ ಹಾಲು ಕುಡಿದ 20 ಮಕ್ಕಳಿಗೆ ಅಸ್ವಸ್ಥ..!; ಹೊಟ್ಟೆನೋವು,ತಲೆಸುತ್ತು, ವಾಂತಿ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿಗಳು

ನ್ಯೂಸ್ ನಾಟೌಟ್ : ಶಾಲೆಯಲ್ಲಿ ಹಾಲು ಕುಡಿದು 20 ಮಕ್ಕಳು ಅಸ್ವಸ್ಥಗೊಂಡ ದುರಂತ ಘಟನೆಯೊಂದು ಸಂಭವಿಸಿದೆ.ಗಾಜಿಯಾಬಾದ್ ಲೋನಿಯ ಪ್ರೇಮ್ ನಗರ ಕಾಲೋನಿಯಲ್ಲಿರುವ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಮಧ್ಯಾಹ್ನ ಹಾಲು ಕುಡಿಯಲು ನೀಡಲಾಯಿತು.ಆದರೆ ಇದ್ದಕ್ಕಿದ್ದ ಹಾಗೆ ಅದೇನಾಯ್ತೋ ಗೊತ್ತಿಲ್ಲ. ಹಾಲು ಕುಡಿದ ನಂತರ ಒಬ್ಬರಾದ ನಂತರ ಒಬ್ಬರಂತೆ ಮಕ್ಕಳ ಆರೋಗ್ಯ ಹದಗೆಡತೊಡಗಿತು.

ಮಕ್ಕಳಲ್ಲಿ ಅನಾರೋಗ್ಯ ಕಾಡಿದ್ದು, ಹೊಟ್ಟೆನೋವು,ತಲೆಸುತ್ತು ಮತ್ತು ವಾಂತಿ ಕಾಣಿಸಿಕೊಂಡಿದೆ.ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.ಸುಮಾರು 20 ಮಕ್ಕಳನ್ನು ಲೋನಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಸದ್ಯ ಹಾಲಿನ ಮಾದರಿಯನ್ನು ತೆಗೆದುಕೊಳ್ಳಲಾಗಿದೆ.ಆರೋಗ್ಯ ಇಲಾಖೆ ಅಧಿಕಾರಿಗಳು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ. ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಸುದ್ದಿ ಭಾರಿ ಸಂಚಲನ ಮೂಡುವಂತೆ ಮಾಡಿದೆ.೨೦ ಮಕ್ಕಳ ಪೈಕಿ 9 ಮಕ್ಕಳ ಸ್ಥಿತಿ ಸಹಜವಾದ ಬಳಿಕ ಮನೆಗೆ ಕಳುಹಿಸಲಾಗಿದೆ ಎನ್ನಲಾಗಿದೆ. ಮಕ್ಕಳನ್ನು ದಾಖಲಿಸಿಕೊಳ್ಳಲು ಗಾಜಿಯಾಬಾದ್‌ನಿಂದ ಲೋನಿಗೆ ಆಂಬ್ಯುಲೆನ್ಸ್‌ಗೆ ಕರೆ ಮಾಡಬೇಕಾಯಿತು.

ಸದ್ಯ ಪೋಷಕರು ಈ ಬಗ್ಗೆ ಗರಂ ಆಗಿದ್ದಾರೆ.ಶಾಲೆಯ ಹೊರಗೆ ಬಂದು ಗಲಾಟೆ ಮಾಡಿದ್ದು, ಮಕ್ಕಳಿಗೆ ಕಳಪೆ ಗುಣಮಟ್ಟದ ಹಾಲನ್ನು ಶಿಕ್ಷಕರೇ ನೀಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಆಸ್ಪತ್ರೆಯಲ್ಲಿ ಮಕ್ಕಳ ಸ್ಥಿತಿ ಪ್ರತಿಕ್ಷಣವೂ ಪರಿಶೀಲಿಸಲಾಗುತ್ತದೆ. ಹಾಲಿನ ಮಾದರಿಗಳನ್ನು ತೆಗೆದುಕೊಂಡು ಪರೀಕ್ಷೆಗೆ ಕಳುಹಿಸುವಂತೆ ಸಿಎಂಒ ತಿಳಿಸಿದೆ.

Related posts

ಮೆಟ್ರೋ ಟಿಕೆಟ್‌ ದರದಲ್ಲಿ 50% ರಿಯಾಯಿತಿ, ಉಚಿತ ವಿದ್ಯುತ್‌, 24 ಗಂಟೆ ಉಚಿತ ನೀರು ಪೂರೈಕೆ..! 15 ಗ್ಯಾರಂಟಿ ಘೋಷಿಸಿದ ಕೇಜ್ರಿವಾಲ್

ಬೈಕ್ ​ಗೆ KSRTC ಬಸ್ ಡಿಕ್ಕಿ..! 3 ಮಕ್ಕಳು ಸೇರಿ 5 ಮಂದಿ ಸಾವು..!

ಪ್ರಧಾನಿ ಮೋದಿ ಸಹೋದರ ಚೆನ್ನೈ ಆಸ್ಪತ್ರೆಗೆ ದಾಖಲು!