ಕ್ರೈಂ

ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಗೀಸರ್ ಕ್ಯಾಮೆರಾ ಪ್ರಕರಣಕ್ಕೆ ಶಾಕಿಂಗ್ ಟ್ವಿಸ್ಟ್: ಅಕ್ರಮ ಸಂಬಂಧ ಮರೆಮಾಚಲು ಮಹಿಳೆಯ ಹೈಡ್ರಾಮಾ!ಪೊಲೀಸರು ಹೇಳಿದ್ದೇನು?

ನ್ಯೂಸ್‌ ನಾಟೌಟ್‌ : ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಪ್ರಕರಣಕ್ಕೆ ಸಂಬಂಧ ಪಟ್ಟ ಹಾಗೆ ಇದೀಗ ಶಾಕಿಂಗ್ ಟ್ವಿಸ್ಟ್‌ ಸಿಕ್ಕಿದೆ. ಗೀಸರ್ ನಲ್ಲಿ ಕ್ಯಾಮೆರಾ ಇಟ್ಟು ಮಹಿಳೆಯ ಅಶ್ಲೀಲ ವಿಡಿಯೋ ದಾಖಲಿಸಿದ್ದ ಸುದ್ದಿ ವ್ಯಾಪಕ ವೈರಲ್ ಆಗುತ್ತಿದ್ದಂತೆ ಪೊಲೀಸರು ಈ ಕುರಿತು ತೀವ್ರ ತನಿಖೆ ಆರಮಭಿಸಿದ್ದರು. ಇದೀಗ ಸ್ವತಃ ಪೊಲೀಸರೇ ಶಾಕ್‌ ಗೊಳಗಾಗಿದ್ದು, ಮಹಿಳೆಯ ಖತರ್‌ ನಾಕ್‌ ನಾಟಕದ ಕಥೆ ಕೇಳಿ ಬೆಚ್ಚಿ ಬಿದ್ದಿದ್ದಾರೆ.

ಅಕ್ರಮ ಸಂಬಂಧ ಮುಚ್ಚಿ ಹಾಕಲು ಮಹಿಳೆಯೇ ಇಂತಹ ಬೃಹನ್ನಾಟಕ ಮಾಡಿದ್ದಾಳೆ ಅನ್ನೋ ಅಂಶ ತನಿಖೆಯಿಂದ ಬಯಲಾಗಿದೆ ಎಂದು ಹೇಳಲಾಗುತ್ತಿದೆ.ಮನೆಗೆ ಅಳವಡಿಸಿದ್ದ ಗೀಸರ್ ನಲ್ಲಿ ರಹಸ್ಯ ಕ್ಯಾಮೆರಾ ಇರಿಸಿ ಮಹಿಳೆಯ ಸ್ನಾನದ ವಿಡಿಯೋ ರೆಕಾರ್ಡ್ ಮಾಡಿ ಸೆಕ್ಸ್ ಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ದುಷ್ಕರ್ಮಿಯನ್ನು ಸಾರ್ವಜನಿಕರೇ ಪತ್ತೆ ಮಾಡಿ ಥಳಿಸಿದ್ದ ವಿಡಿಯೋ ಮತ್ತು ಸುದ್ದಿ ವ್ಯಾಪಕ ವೈರಲ್ ಆಗಿತ್ತು. ಈ ವೇಳೆಯಲ್ಲಿ ಆರೋಪಿ ಮತ್ತು ಸಂತ್ರಸ್ಥ ಮಹಿಳೆ ಸೇರಿ ಇತರರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದರು. ಇದೀಗ ಪೊಲೀಸ್ ವಿಚಾರಣೆ ವೇಳೆ ಒಂದೊಂದೇ ನಾಟಕ ವಿಷಯಗಳು ಬಹಿರಂಗಗೊಂಡಿವೆ.

ಆರೋಪಿ ಮತ್ತು ಸಂತ್ರಸ್ಥ ಮಹಿಳೆಯನ್ನು ಠಾಣೆಗೆ ಕರೆತಂದ ಪೊಲೀಸರು ಹಲವಾರು ಪ್ರಶ್ನೆಗಲನ್ನು ಕೇಳಿದ್ದಾರೆ. ಮುಖ್ಯವಾಗಿ ಗೀಸರ್ ನಲ್ಲಿ ಕ್ಯಾಮೆರಾ ಇಡಲು ಸಾಧ್ಯವೇ ಎಂಬುದಕ್ಕೆ ಉತ್ತರ ನೀಡಿ ಎಂದಿದ್ದು, ಗೀಸರ್ ಹೀಟ್ ಗೆ ಎಂತಹ ಎಲೆಕ್ಟ್ರಾನಿಕ್ ವಸ್ತುಗಳಾದರು ಮೆಲ್ಟ್ ಆಗುತ್ತದೆ. ಅಂತಹುದರಲ್ಲಿ ರಹಸ್ಯ ಕ್ಯಾಮೆರಾ ಹೇಗೆ ಕೆಲಸ ಮಾಡಿತು ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಪೊಲೀಸರಿಗೆ ಶಾಕ್ ಆಗುವ ರೀತಿಯಲ್ಲಿ ಉತ್ತರಗಳು ಹೊರಬಂದಿವೆ.

ಪೊಲೀಸರಿಗೆ ಆರೋಪಿ ಪುರುಷ ಮತ್ತು ಸಂತ್ರಸ್ಥ ಮಹಿಳೆ ನಡುವಿನ ಅಕ್ರಮ ಸಂಬಂಧವಿರುವ ವಿಚಾರದ ಬಗ್ಗೆ ಮಾಹಿತಿ ಸಿಕ್ಕಿದೆ. ಈ ವೇಳೆ ಪೊಲೀಸರು ಇಬ್ಬರನ್ನೂ ಪ್ರತ್ಯೇಕಿಸಿ ವಿಚಾರಣೆ ನಡೆಸಿದ್ದು, ಸಂತ್ರಸ್ಥೆಯ ವಿಚಾರಣೆಗೆ ಮಹಿಳಾ ಅಧಿಕಾರಿಯನ್ನು ನೇಮಿಸಿದ್ದಾರೆ. ಈ ವೇಳೆ ಸಂತ್ರಸ್ಥೆ ಎನ್ನಲಾದ ಮಹಿಳೆ ಆಘಾತಕಾರಿ ಮಾಹಿತಿಗಳನ್ನು ಹೊರ ಹಾಕಿದ್ದಾರೆ.ಅಕ್ರಮ ಸಂಬಂಧ ಮುಚ್ಚಿಹಾಕಲು ಮಹಿಳೆಯು ಆಡಿದ ‘ಬೃಹನ್ನಾಟಕ’ ಇದಾಗಿದ್ದು, ಆರೋಪಿ ಪುರುಷನೊಂದಿಗೆ ಈ ಮಹಿಳೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಹೇಳಲಾಗಿದೆ. ಆಕೆಯೇ ತನ್ನ ನಗ್ನ ಚಿತ್ರಗಳ ಸೆಲ್ಫಿ ತೆಗೆದುಕೊಂಡು ಆತನ ಮೊಬೈಲ್ ಗೆ ಕಳುಹಿಸಿದ್ದಳು ಎಂಬ ಅಂಶ ಹೊರಬಿದ್ದಿದೆ. ಮನೆಯವರಿಗೆ ಗೊತ್ತಾಗಬಾರದು ಹೇಳಿ ಗೀಸರ್ ಕ್ಯಾಮೆರಾದ ನಾಟಕವಾಡಿದ್ದಾಳೆ. ಆಕೆಯ ಪತಿಯಿಂದ ತಪ್ಪಿಸಿಕೊಳ್ಳಲು ಆರೋಪಿತ ವ್ಯಕ್ತಿ ತನ್ನನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾನೆ ಎಂದು ಹೇಳಿದ್ದು, ಇದು ಹೈಡ್ರಾಮಾಕ್ಕೆ ಕಾರಣವಾಯಿತು. ತನ್ನ ತಪ್ಪು ಮುಚ್ಚಿಕೊಳ್ಳಲು ಮಹಿಳೆ ಗೀಸರ್ ಕ್ಯಾಮೆರಾ ನಾಟಕ ಮಾಡಿದ್ದಾಳೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಈ ಬಗ್ಗೆ ಮಾತನಾಡುತ್ತಾ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಇದೊಂದು “ಹತೋಟಿ ಮೀರಿದ ಸಂಬಂಧ”… ಆರಂಭದಲ್ಲಿ ಗಂಭೀರವಾದ ಬ್ಲ್ಯಾಕ್‌ಮೇಲ್ ಪ್ರಕರಣ ಎಂದು ಭಾವಿಸಲಾಗಿತ್ತು. ಆದರೆ ಬಳಿಕ ತನಿಖೆಯಿಂದ ಇದು ವೈಯಕ್ತಿಕ ವಿವಾದ ಎಂದು ತಿಳಿಯಿತು ಎಂದು ಹೇಳಿದ್ದಾರೆ.

Related posts

ಬೋಳು ತಲೆಯ ವಿಷಯ ಮುಚ್ಚಿಟ್ಟು ಎರಡನೇ ಮದುವೆಗೆ ಯತ್ನ..! ಸುಳ್ಳು ಹೇಳಿ ಸಿಕ್ಕಿಬಿದ್ದ ವರನಿಗೆ ವಧುವಿನ ಕಡೆಯವರು ಮಾಡಿದ್ದೇನು? ಇಲ್ಲಿದೆ ವೈರಲ್ ವಿಡಿಯೋ

ನವಜಾತ ಶಿಶುವನ್ನು ದೇವಸ್ಥಾನದಲ್ಲಿ ಬಿಟ್ಟು ಹೋದ ಹೆತ್ತವರು! ಮಾನವೀಯತೆ ಮೆರೆದ ಪೊಲೀಸರು!

ಭಾಗಮಂಡಲದ ವ್ಯಕ್ತಿ ಗೂನಡ್ಕದಲ್ಲಿರುವ ಪತ್ನಿ ಮನೆಗೆ ಬಂದು ವಿಷ ಸೇವನೆ, ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲು