ಕ್ರೈಂಬೆಂಗಳೂರು

ಬಿಸಿ ನೀರಿಗಾಗಿ ಗೀಸರ್‌ ಬಳಸುತ್ತಿದ್ದ ತಾಯಿ-ಮಗನ ದುರಂತ ಅಂತ್ಯ..! ಗ್ಯಾಸ್‌ ಗೀಸರ್‌ ಸುರಕ್ಷತೆಯ ಬಗ್ಗೆ ಇರಲಿ ಎಚ್ಚರ

ನ್ಯೂಸ್‌ ನಾಟೌಟ್‌: ಬಾತ್‌ರೂಮ್‌ನಲ್ಲಿ ಗೀಸರ್‌ನ ಗ್ಯಾಸ್‌ ಸೋರಿಕೆಯಾಗಿ ತಾಯಿ ಮತ್ತು ಮಗ ಇಬ್ಬರೂ ಉಸಿರುಗಟ್ಟಿ ಮೃತಪಟ್ಟ ಘಟನೆ ರಾಮನಗರದ ಮಾಗಡಿಯ ಜ್ಯೋತಿ ನಗರದಲ್ಲಿ ಭಾನುವಾರ ಸಂಭವಿಸಿದೆ.


ಮೃತಪಟ್ಟವರನ್ನು ಶೋಭಾ (40) ಮತ್ತು ಆಕೆಯ ಪುತ್ರ ದಿಲಿಪ್ (17) ಎಂದು ಗುರುತಿಸಲಾಗಿದೆ. ಮಗ ಬಿಸಿ ನೀರು ಕಾಯಿಸಲು ಗ್ಯಾಸ್ ಗೀಸರ್ ಆನ್ ಮಾಡಿದ್ದ. ಈ ವೇಳೆ ಅನಿಲ ಸೋರಿಕೆಯಾಗಿ ಆತ ಉಸಿರುಗಟ್ಟಿ ಮೃತಪಟ್ಟಿದ್ದಾನೆ. ನೀರು ಕಾಯಿಸಲು ಹೋದ ಮಗ ತುಂಬಾ ಹೊತ್ತಾದರೂ ಬಾರದೇ ಇದ್ದಾಗ, ಆತನನ್ನು ನೋಡಲು ಬಾತ್‌ರೂಮ್‌ಗೆ ಬಂದ ಶೋಭಾ ವಿಷ ಅನಿಲ ಸೇವಿಸಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಬಳಿಕ ಇಬ್ಬರನ್ನೂ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಅದಾಗಲೇ ಅವರಿಬ್ಬರು ಮೃತಪಟ್ಟಿದ್ದರು. ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related posts

ತನ್ನನ್ನು ಪ್ರೀತಿಸುವಂತೆ ಅನ್ಯಕೋಮಿನ ಯುವಕನಿಂದ ನಿತ್ಯ ಕಿರುಕುಳ, ಮನನೊಂದು ಅಪ್ರಾಪ್ತೆ ಆತ್ಮಹತ್ಯೆ 

ಸಂಸದ ತೇಜಸ್ವಿ ಸೂರ್ಯ ವಿರುದ್ಧ ಎಫ್.​ಐ.ಆರ್..! ರೈತನ ಆತ್ಮಹತ್ಯೆ ಬಗ್ಗೆ ಸುಳ್ಳು ಮಾಹಿತಿ ಹರಡಿದ ಆರೋಪ..!

3 ಸಾವಿರ ಅಡಿಕೆ ಮತ್ತು ಬಾಳೆ ಗಿಡಗಳನ್ನು ತೆರವು ಮಾಡಿ 15 ಎಕರೆ ಜಾಗವನ್ನು ವಶಕ್ಕೆ ಪಡೆದ ಅರಣ್ಯ ಇಲಾಖೆ..! ಇಲ್ಲಿದೆ ಸಂಪೂರ್ಣ ಮಾಹಿತಿ