ಉಡುಪಿಕರಾವಳಿರಾಜ್ಯ

ಉಡುಪಿ ಗರುಡ ಗ್ಯಾಂಗ್‌ ವಾರ್ ಪ್ರಕರಣದ ಪ್ರಮುಖ 3 ಆರೋಪಿಗಳ ಬಂಧನ..! ಬಂಧಿತರ ಸಂಖ್ಯೆ 6ಕ್ಕೆ ಏರಿಕೆ..!

ನ್ಯೂಸ್‌ ನಾಟೌಟ್‌: ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿಯ ಕುಂಜಿಬೆಟ್ಟು ಎಂಬಲ್ಲಿ ಮೇ 19ರಂದು ನಸುಕಿನ ವೇಳೆ ನಡು ರಸ್ತೆಯಲ್ಲಿಯೇ ಗರುಡ ಗ್ಯಾಂಗ್ ಮಧ್ಯೆ ನಡೆದ ಗ್ಯಾಂಗ್‌ವಾರ್‌ಗೆ ಸಂಬಂಧಿಸಿ ಮತ್ತೆ ಮೂವರು ಆರೋಪಿಗಳನ್ನು ಇಂದು(ಮೇ.26) ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.

ಈ ಮೂಲಕ ಬಂಧಿತರ ಸಂಖ್ಯೆ 6ಕ್ಕೆ ಏರಿಕೆಯಗಿದೆ. ಬಂಧಿತರನ್ನು ಗರುಡ ಗ್ಯಾಂಗ್ ನ ಮಜೀದ್, ಅಲ್ಫಾಝ್, ಶರೀಫ್ ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ಮೇ 20ರಂದು ಪ್ರಮುಖ ಆರೋಪಿ ಕಾಪು ಕೊಂಬಗುಡ್ಡೆ ಮೂಲದ ಆಶಿಕ್(26), ತೋನ್ಸೆ ಹೂಡೆಯ ರಾಕೀಬ್(21) ಹಾಗೂ ಮೇ 25ರಂದು ಸಕ್ಲೈನ್(26) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮೂವರಲ್ಲಿ ವಿಡಿಯೋದಲ್ಲಿ ಕಾಣುವ ಕಾರು ಢಿಕ್ಕಿ ಹೊಡೆದು ಗಾಯಗೊಂಡ ಶರೀಫ್ ಎಂಬಾತ ಕೂಡ ಇದ್ದಾನೆ. ಈತನಿಗೆ ಗಾಯಗಳಾಗಿದ್ದು, ಈಗಾಗಲೇ ಚಿಕಿತ್ಸೆ ಪಡೆದುಕೊಂಡಿದ್ದಾನೆ ಎನ್ನಲಾಗಿದೆ.

Click 👇

https://newsnotout.com/2024/05/neonotals-are-nomore-by-fire
https://newsnotout.com/2024/05/voice-modulation-app-and-kannada-news
https://newsnotout.com/2024/05/news-school-lock-for-loan-kannada-news

Related posts

ಅಕ್ರಮ ಗೋ ಸಾಗಾಟ…ಆರೋಪಿಗಳ ಬಂಧನ

‘ಜನರಿಗೆ ಉಚಿತ…ಉಚಿತ ಅಂತ ಕೊಟ್ಟು ಈಗ ಬೆಲೆ ಏರಿಕೆಯನ್ನು ಖಚಿತ ಮಾಡಿದ್ದಾರೆ’, ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಶಾಸಕಿ ಭಾಗೀರಥಿ ಮುರುಳ್ಯ

ಯೋಗ, ಪರಿಸರಕ್ಕಾಗಿ ಕಾಲ್ನಡಿಗೆಯಲ್ಲಿ ಯುವಕನ ದೇಶ ಪರ್ಯಟನೆ