ಕ್ರೈಂದೇಶ-ಪ್ರಪಂಚವೈರಲ್ ನ್ಯೂಸ್

ಉಚಿತ ಪ್ರಯಾಣಿಸುವ ಮಹಿಳೆಯರಿಗೆ ಬಸ್ ನಿಲ್ಲಿಸದ ಚಾಲಕ! ಕರ್ನಾಟಕದ ಉಚಿತ ಪ್ರಯಾಣಕ್ಕೂ ಎದುರಾಗಲಿದೆಯಾ ಇಂತಹ ಸಮಸ್ಯೆ!

ನ್ಯೂಸ್‌ ನಾಟೌಟ್‌: ರಾಷ್ಟ್ರ ರಾಜಧಾನಿಯಲ್ಲಿ ಮಹಿಳೆಯರಿಗೆ ಬಸ್ ನಿಲ್ಲಿಸದ ಡಿಟಿಸಿ ಬಸ್‌  ಚಾಲಕರು ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ  ಕೇಜ್ರಿವಾಲ್ ಗುರುವಾರ ಎಚ್ಚರಿಸಿದ್ದಾರೆ ಎಂದು ವರದಿ ತಿಳಿಸಿದೆ.

ದೆಹಲಿಯಲ್ಲಿ ನಡೆದ ಈ ಘಟನೆಯ ವಿಡಿಯೋವನ್ನು ಪೋಸ್ಟ್ ಮಾಡಿದ ಕೇಜ್ರಿವಾಲ್, ಬಸ್ ಚಾಲಕನಿಗೆ ಶಿಕ್ಷೆ ವಿಧಿಸಲಾಗುತ್ತಿದೆ ಎಂದು ಹೇಳಿದ್ದಾರೆ.

AAP ಸರ್ಕಾರವು 2019 ರಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯನ್ನು ಆರಂಭಿಸಿತ್ತು. ಅಂದಿನಿಂದ, ಅವರು ಈ ಸೌಲಭ್ಯವನ್ನು ಪಡೆದ ಮಹಿಳೆಯರ ಸಂಖ್ಯೆಯ ಕುರಿತು ಬಜೆಟ್‌ನಲ್ಲಿ ಪ್ರತಿ ವರ್ಷ ಸ್ಥಿತಿಗತಿ ವರದಿಯನ್ನು ಮಂಡಿಸುತ್ತಿದ್ದಾರೆ.

“ಮಹಿಳೆಯರಿಗೆ ಉಚಿತ ಪ್ರಯಾಣದ ಕಾರಣ ಕೆಲವು ಚಾಲಕರು ಮಹಿಳೆಯರನ್ನು ನೋಡಿ ಬಸ್ ನಿಲ್ಲಿಸುವುದಿಲ್ಲ ಎಂಬ ದೂರುಗಳಿವೆ. ಇದನ್ನು ಸಹಿಸಲಾಗುವುದಿಲ್ಲ. ಈ ಬಸ್ ಚಾಲಕನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ” ಎಂದು ಕೇಜ್ರಿವಾಲ್ ಅವರು ತಮ್ಮ ಟ್ವೀಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇಂತಹ ಪ್ರಕರಣ ಕರ್ನಾಟಕದಲ್ಲೂ ಮುಂದೆ ಬರುವ ಸಾಧ್ಯತೆ ಇದ್ದು, ಕಾಂಗ್ರೆಸ್ ಸರ್ಕಾರ ತಮ್ಮ ಉಚಿತ ಬಸ್ಸ್ ಪ್ರಯಾಣದ ಭಾಗ್ಯವನ್ನು ಯಾವ ರೀತಿ ಪರಿಣಾಮಕಾರಿಯಾಗಿ ಜಾರಿಗೊಳಿಸಲಿದೆಯೋ ಕಾದು ನೋಡಬೇಕಾಗಿದೆ.

Related posts

ಡ್ರೋನ್‌ ಕ್ಯಾಮೆರಾ ಬಳಸಿ ಪತ್ನಿಯ ಕಳ್ಳಾಟ ಬಯಲು ಮಾಡಿದ ಪತಿ..! ಆ ದೃಶ್ಯಗಳನ್ನು ಕಂಡ ಪತಿಗೆ ಶಾಕ್..! ಮುಂದೇನಾಯ್ತು..?

ವರನಿಲ್ಲದೇ ಸಪ್ತಪದಿ ತುಳಿದ ವಧು,ಹಾಗಾದ್ರೆ ಇದು ಹೇಗೆ ಸಾಧ್ಯ ಆಯ್ತು..ಇಲ್ಲಿದೆ ಡಿಟೇಲ್ಸ್..

ಕೆಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ದುರಂತ, 23 ವರ್ಷದ ಯುವಕ ಸಾವು