ದೇಶ-ಪ್ರಪಂಚ

ಮುಸ್ಲಿಂ ಧರ್ಮ ತೊರೆದು ಹಿಂದೂ ಧರ್ಮ ಸ್ವೀಕರಿಸಿದ ಶಿಯಾ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ

ಲಖನೌ: ಪ್ರಮುಖ ಬೆಳವಣಿಗೆಯೊಂದರಲ್ಲಿ ಉತ್ತರ ಪ್ರದೇಶದ ಪ್ರಮುಖ ಮುಸ್ಲಿಂ ಮುಖಂಡರಲ್ಲಿ ಒಬ್ಬರಾಗಿದ್ದ ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸಿಂ ರಿಜ್ವಿ ಇಸ್ಲಾಂ ತೊರೆದು ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ.

ಈ ಹಿಂದೆ ಪ್ರವಾದಿ ಕುರಿತ ಪುಸ್ತಕವನ್ನು ಬಿಡುಗಡೆ ಮಾಡಿದ್ದ ವಾಸಿಂ ರಿಜ್ವಿ ವಿವಾದಕ್ಕೆ ಗುರಿಯಾಗಿದ್ದರು. ಅವರಿಗೆ ಮುಸ್ಲಿಂ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ಸಾಕಷ್ಟು ಬೆದರಿಕೆ ಕರೆಗಳೂ ಬರುತ್ತಿದ್ದವು. ಈ ಕುರಿತು ಸ್ವತಃ ರಿಜ್ವಿ ಅವರೇ ಸಾಕಷ್ಟು ಬಾರಿ ಹೇಳಿಕೊಂಡಿದ್ದರು. ಇದೀಗ ಮತ್ತೊಮ್ಮೆ ಈ ಕುರಿತು ಮಾತನಾಡಿರುವ ಅವರು, ನನ್ನನ್ನು ಇಸ್ಲಾಂನಿಂದ ಹೊರಹಾಕಲಾಗಿದೆ, ಪ್ರತಿ ಶುಕ್ರವಾರ ನನ್ನ ತಲೆಗೆ ಬಹುಮಾನ ಹೆಚ್ಚಿಸಲಾಗುತ್ತಿದೆ. ಹಾಗಾಗಿ ಇಂದು ನಾನು ಸನಾತನ ಧರ್ಮವನ್ನು ಶಾಸ್ತ್ರಬದ್ಧವಾಗಿ ಸೇರಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

https://twitter.com/MeghBulletin/status/1467734991991808001?ref_src=twsrc%5Etfw%7Ctwcamp%5Etweetembed%7Ctwterm%5E1467734991991808001%7Ctwgr%5E%7Ctwcon%5Es1_c10&ref_url=https%3A%2F%2Fpublish.twitter.com%2F%3Fquery%3Dhttps3A2F2Ftwitter.com2FMeghBulletin2Fstatus2F1467734991991808001widget%3DTweet

ರಿಜ್ವಿಗೆ ನೂತನ ಹೆಸರು

ಇನ್ನು ಹಿಂಧೂ ಧರ್ಮವನ್ನು ಸ್ವೀಕರಿಸಿರುವ ರಿಜ್ವಿ ಅವರಿಗೆ ಸನಾತನ ಧರ್ಮದಂತೆ ಹೊಸ ಹೆಸರು ನೀಡಲಾಗಿದೆ. ಅದರಂತೆ ರಿಜ್ವಿ ಅವರು ಜಿತೇಂದ್ರ ನಾರಾಯಣ ಸಿಂಗ್ ತ್ಯಾಗಿ ಎಂಬ ಹೆಸರಿನಿಂದ ಕರೆಯಲ್ಪಡುತ್ತಾರೆ. ಅಂತೆಯೇ ತ್ಯಾಗಿ ಸಮುದಾಯದೊಂದಿಗೆ ಸಂಬಂಧ ಹೊಂದಿರುತ್ತಾರೆ ಎನ್ನಲಾಗಿದೆ. 

Related posts

ನಡು ರಸ್ತೆಯಲ್ಲಿ ಗನ್ ಹಿಡಿದು ನಿಂತ ಯುವಕ..!ಬೆಚ್ಚಿ ಬಿದ್ದ ಸ್ಥಳೀಯರು..!ಮುಂದೇನಾಯ್ತು?

ಲೋಕಸಭಾ ಚುನಾವಣೆ: ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ ಪ್ರಧಾನಿ ಮೋದಿ..! ಕಾಂಗ್ರೆಸ್‌ ನ ನ್ಯಾಯ ಪತ್ರಕ್ಕೆ ಪ್ರತ್ಯುತ್ತರ

3 ವರ್ಷದ ಅವಳಿ ಬಾಲಕಿಯರ ಖಾಸಗಿ ಅಂಗವನ್ನು ಸಿಗರೇಟ್ ನಿಂದ ಸುಟ್ಟ ವೈದ್ಯ ದಂಪತಿ:ಅವರು ಮಾಡಿದ ತಪ್ಪಾದರೂ ಏನು?ಬಡಮಕ್ಕಳ ಜೀವದ ಜತೆ ಚೆಲ್ಲಾಟವಾಡಿದ್ರೇ?