ಕ್ರೈಂ

ಅಗ್ನಿ ಅನಾಹುತ.. ಸುಟ್ಟು ಕರಕಲಾದ ಅಪಾರ ಪ್ರಮಾಣದ ಪೀಠೋಪಕರಣಗಳು..! ಇಲ್ಲಿದೆ ನೋಡಿ ವಿಡಿಯೋ

ನ್ಯೂಸ್‌ ನಾಟೌಟ್‌: ಮೈಸೂರು ನಗರದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಇರುವ ಸಂಗಮ್ ಶಾಮಿಯಾನ ಹಾಗೂ ಡೆಕೋರೆಟೆಡ್‌ ಗೋದಾಮಿನಲ್ಲಿ ಇಂದು (ಜೂನ್ 1) ಬೆಳಗಿನ ಜಾವ ಬೆಂಕಿ ಹೊತ್ತಿಕೊಂಡು ಭಾರಿ ಪ್ರಮಾಣದ ಪೀಠೋಪಕರಣಗಳು ಸುಟ್ಟು ಭಸ್ಮವಾಗಿವೆ.
ಬೆಂಕಿಯ ಕೆನ್ನಾಲಿಗೆಗೆ ಅಪಾರ ಮೌಲ್ಯದ ಶಾಮಿಯಾನ ಹಾಗೂ ಡೆಕೋರೇಷನ್ ವಸ್ತುಗಳು ಕೂಡ ನಾಶವಾಗಿವೆ.
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಕಾರ್ಯಾಚರಣೆ ನಡೆಸಿ ಬೆಂಕಿ‌ ನಂದಿಸಿದ್ದಾರೆ. ಈ ಗೋಡಾನ್ ಮೈಸೂರು ನಗರದ ಷರಿಫ್ ಎಂಬವರ ಅಳಿಯನಿಗೆ ಸೇರಿದ್ದಾಗಿದೆ.

ಲಕ್ಷಾಂತರ ರೂಪಾಯಿ ಮೌಲ್ಯದ ಶಾಮಿಯಾನ ಸಾಮಾಗ್ರಿಗಳನ್ನು ಹೊಂದಿದ್ದರು ಎನ್ನಲಾಗಿದೆ. ಅಗ್ನಿ ಶಾಮಕ ಸಿಬ್ಬಂದಿ ಸುಮಾರು ಮೂರು ಗಂಟೆಗೂ ಅಧಿಕ ಸಮಯ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಬೆಂಕಿ ಸುತ್ತಮುತ್ತಲಿನ ಚಾಮುಂಡಿ ಬೆಟ್ಟದ ಕಾಡು ಪ್ರದೇಶಗಳಿಗೆ ಹರಡದಂತೆ ಅಗ್ನಿ ಶಾಮಕ ದಳದವರು ಪರೀಕ್ಷಿಸುತ್ತಿದ್ದಾರೆ …

Related posts

ಸುಳ್ಯ: ಗೂಡ್ಸ್‌ ಟೆಂಪೊ ಚಾಲಕರಿಗೆ ಪಂಗನಾಮ ಹಾಕಿದ ಖದೀಮ..! 7,600 ರೂ. ವಸೂಲಿ ಮಾಡಿ ಅಪರಿಚಿತ ಪರಾರಿ..! CCTV ದೃಶ್ಯ ಇಲ್ಲಿದೆ ವೀಕ್ಷಿಸಿ..

ಸುಳ್ಯ: ಮೊಬೈಲ್ ರೀಚಾರ್ಜ್ ಮಾಡಲು ಬಂದ ಹಿಂದೂ ಹುಡುಗಿಯ ಫೋಟೋ ತೆಗೆದ ಮುಸ್ಲಿಂ ಯುವಕ, ರೊಚ್ಚಿಗೆದ್ದ ಯುವತಿಯ ಮನೆಯವರಿಂದ ಪೊಲೀಸರಿಗೆ ದೂರು

ಜೋಡುಪಾಲ: ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಸಿಲಿಂಡರ್ ಹೊತ್ತ ಲಾರಿ ಹೊಂಡಕ್ಕೆ, ತಪ್ಪಿದ ಭಾರೀ ಅನಾಹುತ