Uncategorized

ಪಬ್‌ನಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ ಹ* ಲ್ಲೆ,ಕನ್ನಡ ರಾಜ್ಯೋತ್ಸವ ಸಂಭ್ರಮದ ದಿನದಂದೇ ಬೆಳಕಿಗೆ ಬಂದ ಘಟನೆ

ನ್ಯೂಸ್ ನಾಟೌಟ್ : ಇಂದು ಕನ್ನಡ ರಾಜ್ಯೋತ್ಸವ.. ಎಲ್ಲೆಲ್ಲೂ ಸಂಭ್ರಮ ಮನೆ ಮಾಡಿದೆ.ಆದರೆ ಪಬ್‌ವೊಂದರಲ್ಲಿ (Pub) ಕನ್ನಡ ಹಾಡು (Kannada Song) ಹಾಕಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ ಘಟನೆ ಬೆಂಗಳೂರಿನಿಂದ(Bengaluru) ಕನ್ನಡ ರಾಜ್ಯೋತ್ಸವ ದಿನದಂದೇ ಬೆಳಕಿಗೆ ಬಂದಿದೆ . ಆರ್‌ಆರ್ ನಗರದ (RR Nagar) ಐಡಿಯಲ್ ಹೋಮ್ ಬಳಿ ನಡೆದಿದ್ದು,ಇದೀಗ ತಡವಾಗಿ ಬೆಳಕಿಗೆ ಬಂದಿದೆ.

ಐಡಿಯಲ್ ಹೋಮ್ ಬಳಿಯ ಪಬ್‌ನಲ್ಲಿ ಅಕ್ಟೋಬರ್ 25ರಂದು ಘಟನೆ ನಡೆದಿದೆ ಎನ್ನಲಾಗಿದೆ. ಪಬ್‌ನಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹ* ಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಶ್ರೇಯಸ್ ಹಾಗೂ ಆತನ ಸ್ನೇಹಿತರು ರಾತ್ರಿ 10:45ರ ಸುಮಾರಿಗೆ ಪಬ್‌ಗೆ ಬಂದಿದ್ದರು. ಈ ವೇಳೆ ಪಬ್‌ನಲ್ಲಿ ಕನ್ನಡ ಹಾಡು ಹಾಕಲಾಗಿತ್ತು. ಇದೇ ಸಂದರ್ಭ ಕನ್ನಡ ಹಾಡು ಹಾಕಿದ್ದಕ್ಕೆ ಜಗಳ ತೆಗೆದಿದ್ದಾರೆ ಎಂದು ಹೇಳಲಾಗಿದೆ.

ಪಬ್ ಮಾಲೀಕ ರವಿಕಾಂತ್ ನೀಡಿದ ದೂರಿನನ್ವಯ ಎಫ್‌ಐಆರ್ (FIR) ದಾಖಲು ಮಾಡಲಾಗಿದೆ. ಶ್ರೇಯಸ್ ಹಾಗೂ ಆತನ ಸ್ನೇಹಿತನ ವಿರುದ್ಧ ಪಬ್ ಮ್ಯಾನೇಜರ್ ದೂರು ನೀಡಿದ್ದು, ಆರ್‌ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Related posts

ಹಾಲು ಕುಡಿಯುವ ವೇಳೆ ಉಸಿರುಗಟ್ಟಿ ನವಜಾತ ಶಿಶು ಮೃತ್ಯು:ಹಿರಿ ಮಗನೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ

ನಿದ್ರೆಗೆಟ್ಟು ರಾತ್ರಿ ಇಡೀ ಸೊಳ್ಳೆ ಕಚ್ಚಿಸಿಕೊಳ್ಳುವ ಪೊಲೀಸರಿಗೆ ಮಾತ್ರ ಏನಿಲ್ಲ..! ಬೆಳಗ್ಗಿನಿಂದ ಸಂಜೆ ತನಕ ದುಡಿಯುವ ವಿಎ, ಪಿಡಿಓಗಳಿಂದ ನಾಳೆ ಪ್ರತಿಭಟನೆ, ಏನಿದು ವಿಚಾರ..?

ಕಾರ್ಕಳ: ರೇಪ್ ಕೇಸ್ ಬಗ್ಗೆ ಉಡುಪಿ ಎಸ್‌ ಪಿ ಹೇಳಿದ್ದೇನು..? ಆಸ್ಪತ್ರೆಯಲ್ಲಿರುವ ಸಂತ್ರಸ್ತೆಯಿಂದ ಹೇಳಿಕೆ ದಾಖಲು..!