ಕರಾವಳಿ

ಫಾಜಿಲ್ ಹತ್ಯೆ ಪ್ರಕರಣ: ಮೊದಲ ಆರೋಪಿ ಬಂಧನ

ನ್ಯೂಸ್ ನಾಟೌಟ್ : ಮಂಗಳೂರಿನ ಸುರತ್ಕಲ್ ನಲ್ಲಿ ನಡೆದಿದ್ದ ಫಾಜಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಇದರೊಂದಿಗೆ ಪೊಲೀಸರು ತನಿಖೆಯಲ್ಲಿ ಮಹತ್ವದ ಬೆಳವಣಿಗೆಯನ್ನು ಪಡೆದುಕೊಂಡಿದ್ದಾರೆ.

ಒಟ್ಟು ನಾಲ್ವರು ಹಂತಕರನ್ನು ಪೊಲೀಸರು ಶನಿವಾರ ಬಂಧಿಸಿ ತೀವ್ರ ವಿಚಾರಕ್ಕೆ ಒಳಪಡಿಸಿದ್ದರು. ಇದೀಗ ಕಾರು ಚಾಲಕ ಕಮ್ ಮಾಲೀಕನನ್ನು ಬಂಧಿಸಲಾಗಿದೆ. ನಾಲ್ವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಕಾರು ಚಾಲಕನಾಗಿ ಹತ್ಯೆಯಲ್ಲಿ ಭಾಗಿಯಾಗಿದ್ದ ಹಾಗೂ ಫಾಜಿಲ್ ಹತ್ಯೆ ನಡೆಯುವ ತನಕ ಕಾರು ಇಂಜಿನ್ ಆಫ್‌ ಮಾಡದೆ ಆರೋಪಿಗಳು ತಪ್ಪಿಸಿಕೊಳ್ಳುವುದಕ್ಕೆ ಸಹಾಯ ಮಾಡಿದ್ದ ಎನ್ನಲಾಗಿದೆ. ಸದ್ಯ ಪೊಲೀಸರು ಆರೋಪಿಯ ಹೆಸರನ್ನು ಇನ್ನೂ ಬಹಿರಂಗಪಡಿಸಿಲ್ಲ. ಒಂದು ಮಾಹಿತಿಯ ಪ್ರಕಾರ ಪ್ರಕರಣದಲ್ಲಿ ಭಾಗಿಯಾಗಿದ್ದವರೆಲ್ಲರು ಸ್ಥಳೀಯ ವ್ಯಕ್ತಿಗಳೇ ಎಂದು ಹೇಳಲಾಗಿದೆ. ಎರಡು ದಿನಗಳ ಹಿಂದೆ ಫಾಜಿಲ್ ನನ್ನು ಸುರತ್ಕಲ್ ನಲ್ಲಿ ರಾತ್ರಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆಗೆ ರಿವೆಂಜ್ ತೀರಿಸಿಕೊಳ್ಳುವುದಕ್ಕಾಗಿ ಹತ್ಯೆ ನಡೆದಿದೆ ಎನ್ನಲಾಗುತ್ತಿದೆ.

Related posts

ಸುಳ್ಯ:ಕೂಜಿಮಲೆ ರಬ್ಬರ್‌ ಎಸ್ಟೇಟ್‌ನಲ್ಲಿ ಕಾಣಿಸಿಕೊಂಡ ಆ ಅಪರಿಚಿತ ಮಹಿಳೆ ಯಾರು?ಮೂರನೇ ಬಾರಿ ನಕ್ಸಲರ ಪ್ರತ್ಯಕ್ಷ?ಮತ್ತೆ ನಕ್ಸಲ್‌ ಸಂಚಾರ?

ಪುತ್ತೂರು: ಹುಡುಗಿಯೊಂದಿಗೆ ಸಂಬಂಧ ಇದೆಯೆಂದು ಹಲ್ಲೆ, ನೊಂದ ಯುವಕನಿಂದ ಲೈವ್ ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಯತ್ನ, ವಿಷ ಕುಡಿದ ಯುವಕನ ಸ್ಥಿತಿ ಗಂಭೀರ..!

ನವವಿವಾಹಿತೆ ಪುಣೆಯಲ್ಲಿ ಅನುಮಾನಸ್ಪದ ಸಾವು..! ಕ್ಯಾಂಟಿನ್ ನಡೆಸುವ ಯುವಕನ ಜೊತೆಗೆ ಮದುವೆಯಾಗಿದ್ದ ಹೆಣ್ಣು ಮಗಳಿಗೆ ಆಗಿದ್ದೇನು..?