ಕರಾವಳಿ

ತಂದೆಯಿಂದಲೇ ಒಂದನೇ ತರಗತಿಯ ಮಗಳ ಮೇಲೆ ಲೈಂಗಿಕ ದೌರ್ಜನ್ಯ

ಮಂಗಳೂರು: ಒಂದನೇ ತರಗತಿಯ ಬಾಲಕಿ ಮೇಲೆ ರೌಡಿಶೀಟರ್ ತಂದೆಯೇ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಈತನ ಮೇಲೆ ಕದ್ರಿ ಪೊಲೀಸ್ ಠಾಣೆಯಲ್ಲಿ ಈ ಹಿಂದೆಯೇ ರೌಡಿಶೀಟರ್ ತೆರೆಯಲಾಗಿತ್ತು. ಇದೀಗ ಈತ ಮಗಳಿಗೇ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈತನ ದೌರ್ಜನ್ಯ ತಡೆಯಲು ಬಂದ ಪತ್ನಿಯ ಮೇಲೂ ಈತ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ‌. ಈತ ಜೊಮ್ಯಾಟೋದಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಹುಡುಗ ಎಂದು ಮಂಗಳಮುಖಿ ಜತೆ ಯುವತಿಯ ಚಾಟಿಂಗ್‌

ಪ್ರವೀಣ್ ನೆಟ್ಟಾರ್ ಗೆ ಕಡಿದದ್ದು ಯಾರು? ಇವನೇ ರಕ್ತಾಸುರ

ರಿಕ್ಷಾ-ಕಾರು ಅಪಘಾತದ ಗಾಯಾಳು ಚಿಕಿತ್ಸೆಗೆ ಸ್ಪಂದಿಸದೆ ಸಾವು