ಕ್ರೀಡೆ/ಸಿನಿಮಾ

ಅಲೆಮಾರಿ ಬಾಲಕಿಯ ಶಿಕ್ಷಣಕ್ಕೆ ಖ್ಯಾತ ಕ್ರಿಕೆಟಿಗ ಕೆ.ಎಲ್ ರಾಹುಲ್ ನೆರವು, ಡಾಕ್ಟರ್ ಆಗುವ ಕನಸನ್ನು ಕೇಳಿದ ಬಳಿಕ ಕನ್ನಡಿಗ ಕ್ರಿಕೆಟಿಗ ಮಾಡಿದ್ದೇನು..?

ನ್ಯೂಸ್ ನಾಟೌಟ್: ಡಾಕ್ಟರ್ ಆಗುವ ಕನಸು ಕಂಡಿರುವ ಅಲೆಮಾರಿ ಕುಟುಂಬದ ಹಿನ್ನೆಲೆಯುಳ್ಳ ಬಾಲಕಿಗೆ ಖ್ಯಾತ ಕ್ರಿಕೆಟಿಗ ಕೆ.ಎಲ್ ರಾಹುಲ್ ನೆರವಾಗಿರುವ ವಿಚಾರ ಹೊರಬಿದ್ದಿದೆ.

ಸುಡುಗಾಡು ಸಿದ್ದರ ಕುಟುಂಬದಲ್ಲಿ ಅಲೆಮಾರಿ ಜೀವನ ನಡೆಸಿಕೊಂಡು ಬದುಕು ನಡೆಸುತ್ತಿರುವ ಬಡ‌ಕುಟುಂಬದ ವಿದ್ಯಾರ್ಥಿನಿಗೆ ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ಕನ್ನಡಿಗ ಕೆಎಲ್ ರಾಹುಲ್ ನೆರವಾಗಿದ್ದಾರೆ. ಧಾರವಾಡದ‌ ಸಿದ್ದೇಶ್ವರ ಕಾಲೋನಿಯಲ್ಲಿರುವ ಹನುಮಂತಪ್ಪ ಹಾಗೂ ಸುಮಿತ್ರಾ ದಂಪತಿಯ ಮಗಳು ಸೃಷ್ಟಿ ಆರ್ಥಿಕ ಸಂಕಷ್ಟದಿಂದ ಓದು ಮುಂದುವರಿಸುವುದು ಕಷ್ಟವಾಗಿತ್ತು.

ಉತ್ತಮ ಶಾಲೆಯಲ್ಲಿ ಕಲಿಯಬೇಕು ಅನ್ನುವ ಹೆತ್ತವರ ಆಸೆಗೆ ಆರ್ಥಿಕ ಸಂಕಷ್ಟ ಅಡ್ಡಿ ಬಂದಿತ್ತು. ಇಂತಹ ಸಂದರ್ಭದಲ್ಲಿ ಮಂಜುನಾಥ ಹೆಬಸೂರು ಅನ್ನುವವರು ಖ್ಯಾತ ಕ್ರಿಕೆಟಿಗ ಕೆಎಲ್ ರಾಹುಲ್ ಅವರನ್ನು ಸಂಪರ್ಕಿಸಿ, ವಿದ್ಯಾಭ್ಯಾಸಕ್ಕೆ ಆರ್ಥಿಕ‌ ಸಹಾಯ ಮಾಡುವಂತೆ ಮನವಿ ಮಾಡಿದ್ದರು. ಇದಕ್ಕೆ ಕೆ.ಎಲ್. ರಾಹುಲ್ ಸಕಾರಾತ್ಮಕವಾಗಿ ಸ್ಪಂದಿಸಿದ್ದರು.

ಈ ಶಾಲೆಯಲ್ಲಿ ಸೃಷ್ಟಿ ಕುಲಾವಿ ವ್ಯಾಸಾಂಗ ಮಾಡಲು ರಾಹುಲ್ ಅವರು ನೆರವು‌ ನೀಡಿದ್ದಾರೆ. ಇದೊಂದು ನಮ್ಮ ಶಾಲೆಗೆ ಹಾಗೂ ನಮಗೂ ಹೆಮ್ಮೆ ಎಂದು ಶಾಲೆಯ‌ ಪ್ರಾಂಶುಪಾಲರಾದ ಮಾಲಾಶ್ರಿ ನಯ್ಯರ್ ಹೇಳಿದ್ದಾರೆ. 1996 ರಲ್ಲಿ ದೀಪಕ ಗಾಂವ್ಕರ್ ಹಾಗೂ ಅನೀತಾ ಗಾಂವ್ಕರ್ ಅವರ ನೇತೃತ್ವದಲ್ಲಿ ಪ್ರಾರಂಭವಾದ ದಿ ಗ್ಲೋಬಲ್ ‌ಎಕ್ಸಲೆನ್ಸ್ ಶಾಲೆ ಉತ್ತಮ ಹೆಸರು ಪಡೆದುಕೊಂಡಿದೆ.ವಿಶ್ವಕಪ್ ಕ್ರಿಕೆಟ್ ಹಿನ್ನೆಲೆಯಲ್ಲಿ ಬ್ಯುಸಿಯಾಗಿರುವ ಕೆ.ಎಲ್‌.ರಾಹುಲ್ ಕಾರ್ಯಕ್ಕೆ ಎಲ್ಲ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

Related posts

ಸೂಪರ್‌ ಸ್ಟಾರ್‌ ರಜನಿಕಾಂತ್ ಅವರನ್ನು ಭಿಕ್ಷುಕ ಎಂದು ತಿಳಿದು 10 ರೂ. ನೀಡಿದ ಆ ಮಹಿಳೆ ಯಾರು?ದೇಗುಲದ ಕಂಬದ ಪಕ್ಕ ಕುಳಿತಿದ್ದ ಕೋಟಿ ರೂ.ಗಳ ಒಡೆಯನ ಪರಿಚಯವೇ ಸಿಗಲಿಲ್ವೇ? ಇದಕ್ಕೆ ಕಾರಣವೇನು? ಈ ಬಗ್ಗೆ ನಟ ರಜನಿಕಾಂತ್ ಏನಂದ್ರು?

ಜೈಲಿಂದ ಹೊರಗಡೆ ಬಂದ ಬಳಿಕ ಮೊದಲ ಸಂಕ್ರಾತಿ ಹಬ್ಬ ಆಚರಿಸಿದ ನಟ ದರ್ಶನ್,ಪತ್ನಿ ವಿಜಯಲಕ್ಷ್ಮಿ ಜತೆ ಫಾರಂ ಹೌಸ್​ನಲ್ಲಿ ಪ್ರಾಣಿಗಳ ಆರೈಕೆ ಮಾಡಿದ ಡಿ.ಬಾಸ್

ಏಷ್ಯಾ ಕಪ್ ಫೈನಲ್ : ಸಿರಾಜ್, ಹಾರ್ದಿಕ್ ಬೌಲಿಂಗ್ ಅಬ್ಬರಕ್ಕೆ ಮುಳುಗಿದ ಲಂಕಾ..! ಕೇವಲ 50 ರನ್ ಗೆ ಆಲೌಟ್ ..!