ದೇಶ-ಪ್ರಪಂಚ

ಇದ್ದಕ್ಕಿದಂತೆ ವಾಟ್ಸಾಪ್, ಫೇಸ್ಬುಕ್‌ ಸ್ಟಾಪ್ ಆಗಿದ್ಯಾಕೆ? ಏನಿದು ಸಮಸ್ಯೆ?

ದೆಹಲಿ: ಪ್ರಪಂಚದ ಅತ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣ ಮಾಧ್ಯಮಗಳಾದ ಫೇಸ್ಬುಕ್, ಇನ್ಸ್ಟಾಗ್ರಾಮ್, ವಾಟ್ಸಾಪ್ ಮತ್ತು ಫೇಸ್ಬುಕ್ ಮೆಸೆಂಜರ್‌ಗಳು ಸೋಮವಾರ ಸಂಜೆ ದಿಢೀರ್‌ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸಿದವು. ಇದರಿಂದ ಕೋಟ್ಯಂತರ ಜನರಿಗೆ ಗೊಂದಲ ಸೃಷ್ಟಿಯಾಗಿದ್ದು ನಿಜ. ಬಳಕೆದಾರರು ಬಳಕೆಯಲ್ಲಿ ಎದುರಿಸುತ್ತಿರುವ ತೊಂದರೆಯ ಕುರಿತು ಸಾಮಾಜಿಕ ಮಾಧ್ಯಮ ಟ್ವಿಟ್ಟರ್‌ನಲ್ಲಿ ಭಾರಿ ಚರ್ಚೆ ನಡೆಸಿದ್ದಾರೆ. ಹೀಗಾಗಿ ಫೇಸ್ಬುಕ್, ವಾಟ್ಸ್ಅಪ್ ಎಂಬ ವಿಷಯಗಳು ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗಿವೆ.

ಏನಿದು ವಿಚಾರ?

ವೆಬ್‌ಸೈಟ್‌ಗಳು ಮತ್ತು ಸೇವೆಗಳ ಸ್ಥಿತಿಯ ಬಗ್ಗೆ ಮಾಹಿತಿ ಒದಿಗಿಸುವ ವೆಬ್‌ಸೈಟ್‌ ‘ಡೌನ್ ಡಿಟೆಕ್ಟರ್’ ಪ್ರಕಾರ ಫೇಸ್ಬುಕ್ ಒಡೆತನದ ಸಾಮಾಜಿಕ ಮಾಧ್ಯಮಗಳಲ್ಲಿ ಸಂಜೆ ಐದು ಗಂಟೆಯಿಂದಲೇ ಸಮಸ್ಯೆ ಎದುರಾಗಿದೆ. ನಂತರ ಸಮಸ್ಯೆಯು ವಿಶ್ವದೆಲ್ಲೆಡೆ ಕಾಣಿಸಿಕೊಂಡಿದ್ದು ರಾತ್ರಿ ಒಂಬತ್ತೂವರೆ ಗಂಟೆಗೆ ಇದ್ದಕ್ಕಿಂತ ಕೆಲಸಗಳು ಸ್ಟಾಪ್ ಆಗಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಫೇಸ್ಬುಕ್, ನಮ್ಮ ಉತ್ಪನ್ನಗಳ ಬಳಕೆಯಲ್ಲಿ ಗ್ರಾಹಕರು ಸಮಸ್ಯೆ ಅನುಭವಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಸೇವೆಯನ್ನು ಆದಷ್ಟು ಶೀಘ್ರವೇ ಸಹಜ ಸ್ಥಿತಿಗೆ ತರಲು ನಾವು ಪ್ರಯತ್ನಿಸುತ್ತಿದ್ದೇವೆ. ಸಮಸ್ಯೆಗೆ ನಾವು ಕ್ಷೇಮೆ ಕೋರುತ್ತೇವೆ,’ ಎಂದು ಫೇಸ್ಬುಕ್ ಹೇಳಿದೆ.

Related posts

ಅಯೋಧ್ಯೆಯಲ್ಲಿ 4 ವರ್ಷದ ಬಾಲಕಿ ಮೇಲೆ ಮೊಹಮ್ಮದ್ ಸಲ್ಮಾನ್ ಎಂಬಾತನಿಂದ ರೇಪ್..! ರಾತ್ರಿ ಬೆಳಗಾಗುವುದರೊಳಗೆ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ ಪೊಲೀಸರು..!

ತಿರುಮಲದಲ್ಲಿ ಮತ್ತೆ ರಾತ್ರೋರಾತ್ರಿ ಚಿರತೆ, ಕರಡಿ ಪ್ರತ್ಯಕ್ಷ? ಭಕ್ತರಿಗೆ ದೇವಸ್ಥಾನದ ಟ್ರಸ್ಟ್ ನೀಡಿದ ಎಚ್ಚರಿಕೆ ಏನು..? ಸಂಚಾರ ನಿಯಮದಲ್ಲಿ ತಂದ ಬದಲಾವಣೆ ಏನು?

ಮುಂಬೈ: ಲ್ಯಾಂಡಿಂಗ್ ವೇಳೆ ಪತನಗೊಂಡ ಮಿನಿ ವಿಮಾನ..!ಒಟ್ಟು ಎಂಟು ಮಂದಿಯಿದ್ದ ವಿಮಾನ ನಿಯಂತ್ರಣ ತಪ್ಪಿದ್ದೇಗೆ..?