ದೇಶ-ಪ್ರಪಂಚವಾಣಿಜ್ಯ

ಹರಿದ, ಹಾಳಾದ ನೋಟನ್ನು ಬದಲಾಯಿಸಬೇಕೆ? ಆರ್‌ಬಿಐ ಹೇಳುವುದೇನು ?

ನ್ಯೂಸ್ ನಾಟೌಟ್: ಹಲವಾರು ಜನರ ಬಳಿ ಹರಿದ ನೋಟು , ಹಾಳಾದ ನೋಟು ಇರುವುದು ಸಹಜ, ಈ ನೋಟನ್ನು ಹೇಗೆ ಚಲಾವಣೆ ಮಾಡೋದು ಎಂಬುದು ಹೆಚ್ಚಿನವರಿಗೆ ತಲೆನೋವಿನ ವಿಷಯ. ಇ ಸಮಸ್ಯೆಗಳ ಪರಿಹಾರಕ್ಕೆ ಆರ್ ಬಿಐ ನಿಯಮಗಳನ್ನು ಜಾರಿಗೆ ತಂದಿದೆ.

ಅಂತಹ ನೋಟುಗಳ ಬದಲಾವಣೆಯ ನಿಯಮಗಳೇನು?

  • ಹರಿದ, ಹಾಳಾದ, ಸೀರಿಯಲ್ ನಂಬರ್ ಇಲ್ಲದ ಯಾವುದೇ ನೋಟನ್ನು ಸಾರ್ವಜನಿಕ ವಲಯದ ಬ್ಯಾಂಕ್‌ನ ಬ್ರಾಂಚ್‌ನಲ್ಲಿ ಅಥವಾ ಆರ್‌ಬಿಐ ಕಚೇರಿಯಲ್ಲಿ ಡೆಪಾಸಿಟ್ ಮಾಡಬಹುದು. ಯಾವುದೇ ಫಾರ್ಮ್ ಅನ್ನು ಭರ್ತಿ ಮಾಡಿದೆಯೇ ನೋಟನ್ನು ಬದಲಾವಣೆ ಮಾಡಿಕೊಳ್ಳಬಹುದು ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ.
  • ಜನರು ಏಕಕಾಲದಲ್ಲಿ 20 ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಬಹುದು. ಅವುಗಳು 5000 ರೂಪಾಯಿಗಿಂತ ಹೆಚ್ಚಿರಬಾರದು. ಅಂತಹ ನೋಟಿನ ಮೌಲ್ಯವನ್ನು ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ಗಳು ಕೂಡಲೇ ಪಾವತಿ ಮಾಡುತ್ತದೆ. ಅಧಿಕ ಮೌಲ್ಯವನ್ನು ಹೊಂದಿರುವ ನೋಟುಗಳಾದರೆ ಬ್ಯಾಂಕ್‌ ಅದನ್ನು ವ್ಯಕ್ತಿಯ ಖಾತೆಗೆ ಡೆಪಾಸಿಟ್ ಮಾಡುವ ಸಾಧ್ಯತೆಗಳಿವೆ.
  • 50 ಸಾವಿರ ರೂಪಾಯಿಗಿಂತ ಅಧಿಕ ಮೊತ್ತದ ಬದಲಾವಣೆಗೆ ಬ್ಯಾಂಕ್ ಗಳು ಕಾಲಾವಕಾಶ ತೆಗೆದುಕೊಳ್ಳುತ್ತವೆ.
  • ಆರ್ ಬಿಐ ಅಡಿಯಲ್ಲಿ ಬರುವ ಬ್ಯಾಂಕ್ ಗಳು ಹಾಳಾದ ನೋಟನ್ನು ಬ್ಯಾಂಕ್ ಬದಲಾವಣೆ ಮಾಡಲು ಒಪ್ಪದಿದ್ದರೆ, ಆರ್‌ಬಿಐನ ಅಧಿಕೃತ ವೆಬ್‌ಸೈಟ್‌ನಲ್ಲಿ ದೂರು ಸಲ್ಲಿಸಲು ಅವಕಾಶ ಒದಗಿಸಿದೆ. ಆರ್‌ಬಿಐನ ಮಾರ್ಗಸೂಚಿಯನ್ನು ಉಲ್ಲಂಘನೆ ಮಾಡಿದರೆ ಅಂತಹ ಬ್ಯಾಂಕ್‌ ಗಳ ವಿರುದ್ಧ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಆರ್ ಬಿಐ ತಿಳಿಸಿದೆ.
  • ಇನ್ನು ಅತೀ ಹೆಚ್ಚು ತುಂಡಾದ ಅಥವಾ ಅರ್ಧಕಿಂತಲೂ ಕಡಿಮೆ ಹರಿದು ಉಳಿದಿರುವ ನೋಟನ್ನು ಬ್ಯಾಂಕ್‌ನಲ್ಲಿ ಬದಲಾವಣೆ ಮಾಡಲು ಸಾಧ್ಯವಾಗುವುದಿಲ್ಲ. ಅತೀ ಹೆಚ್ಚು ತುಂಡಾದ ನೋಟನ್ನು ಆರ್‌ಬಿಐ ಕಚೇರಿಯಲ್ಲಿ ಮಾತ್ರವೇ ಬದಲಾವಣೆ ಮಾಡಲು ಸಾಧ್ಯ ಎಮದು ರಿಸರ್ವ್ ಬ್ಯಾಂಕ್ ಸೂಚಿಸಿದೆ.
  • ಕೆಲವೊಮ್ಮೆ ಅತಿ ಹೆಚ್ಚು ಹಾಳಾದ ನೋಟುಗಳಾಗಿದ್ದರೆ, ನೋಟು ಎಷ್ಟು ತುಂಡಾಗಿದೆ, ಎಷ್ಟು ಹಾನಿಯಾಗಿದೆ ಎಂಬ ಆಧಾರದಲ್ಲಿ ನೋಟಿನ ಮೌಲ್ಯವನ್ನು ಅಂದಾಜು ಮಾಡಲಾಗುತ್ತದೆ. ಉದಾಹರಣೆಗೆ 2000 ರೂಪಾಯಿ ನೋಟು 88 ಸ್ಕ್ವೇರ್‌ ಸೆಂಟಿಮೀಟರ್ ಸರಿಯಿದ್ದರೆ ಸಂಪೂರ್ಣ ಮೌಲ್ಯವನ್ನು ನೀಡಲಾಗುತ್ತದೆ. ಒಂದು ವೇಳೆ ಆ ನೋಟು ಬರೀ 44 ಸ್ಕ್ವೇರ್‌ ಸೆಂಟಿಮೀಟರ್ ಅಥವಾ ಅದಕ್ಕಿಂತ ಕಡಿಮೆ ಉಳಿದಿದ್ದರೆ, ನೋಟಿನ ಅರ್ಧ ಮೌಲ್ಯವನ್ನು ಮಾತ್ರ ನೀಡಲಾಗುತ್ತದೆ.

ಈ ಮಾರ್ಗಸೂಚಿಯನ್ನು ಪಾಲಿಸಿ ಸರಳವಾಗಿ ನೋಟನ್ನು ಬದಲಾವಣೆ ಮಾಡಿಕೊಳ್ಳಬಹುದು ಎಂದು ಆರ್ ಬಿಐ ತನ್ನ ನಿಯಮಾವಳಿಗಳಲ್ಲಿ ತಿಳಿಸಿದೆ.

Related posts

ರಾತ್ರಿಯಿಡೀ ಕಾರ್ಯಾಚರಣೆ; ಮೂವರು ಉಗ್ರರ ಹೊಡೆದುರುಳಿಸಿದ ಸೇನೆ

ಒಂದೇ ಒಂದು ದೋಸೆ!!ಬರೋಬ್ಬರಿ 8 ಜಿರಳೆ..!!ಪ್ರತಿಷ್ಠಿತ ಹೊಟೇಲ್‌ನಲ್ಲಿ ಸಸ್ಯಾಹಾರಿ ಮಹಿಳೆಗೆ ಕಂಡಿದ್ದೇನು?ವಿಡಿಯೋ ನುಡಿದ ಸಾಕ್ಷಿ..!

ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಆರೋಪ ಸಾಬೀತು..? ಎಸ್.ಐ.ಟಿ ಕಚೇರಿಯಿಂದ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಪ್ರಜ್ವಲ್ ಸ್ಥಳಾಂತರ..!