ರಾಮನಗರ: ಹಿರಿಯ ನಾಯಕರ ಸಮಾಧಿ ಮೇಲೆ ಸಮಾಧಿ ಕಟ್ಟಿಕೊಂಡಿರುವ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಯಾವ ಪುಣ್ಯದ ಹಣದಲ್ಲಿ ರಾಧಿಕಾ ಕುಮಾರಸ್ವಾಮಿ ಅವರಿಗೆ ನೂರಾರು ಕೋಟಿ ಕೊಟ್ಟರೆಂದು ರಾಜ್ಯದ ಜನರಿಗೆ ತಿಳಿಸಬೇಕೆಂದು ಮಾಜಿ ಶಾಸಕ ಕೆ.ರಾಜು ಆಗ್ರಹಿಸಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನದಲ್ಲಿದ್ದವರು ರಾಧಿಕಾ ಅವರನ್ನು ಮದುವೆ ಆದರು. ಆದರೆ ರಾಧಿಕಾ ಕುಮಾರಸ್ವಾಮಿಯಿಂದ ದೂರವಾಗಲೂ ನೂರಾರು ಕೋಟಿ ರೂಪಾಯಿ ಕೊಟ್ಟರು. ಯಾವ ಪುಣ್ಯದ ಹಣದಲ್ಲಿ ರಾಧಿಕಾ ಕುಮಾರಸ್ವಾಮಿ ಅವರಿಗೆ ನೂರಾರು ಕೋಟಿ ಕೊಟ್ಟರೆಂದು ರಾಜ್ಯದ ಜನರಿಗೆ ತಿಳಿಸಬೇಕೆಂದು ಒತ್ತಾಯಿಸಿದರು.