ಕರಾವಳಿಸುಳ್ಯ

ಕಾರ್ಕಳ : ಇಂಧನ ಸಚಿವ ವಿ. ಸುನೀಲ್ ಕುಮಾರ್ ಏ.19 ರಂದು ನಾಮಪತ್ರ ಸಲ್ಲಿಕೆ

ನ್ಯೂಸ್ ನಾಟೌಟ್ : ಇಂಧನ ಸಚಿವ ವಿ .ಸುನೀಲ್ ಕುಮಾರ್ ಅವರು ಏ.19(ನಾಳೆ)ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಪರವಾಗಿ ಸ್ಪರ್ಧಿಸುತ್ತಿರುವ ವಿ.ಸುನೀಲ್ ಕುಮಾರ್ ಅವರು ಏ.19ರ ಬುಧವಾರ ಬೆಳಗ್ಗೆ 10 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ.

ಈ ವೇಳೆ ರ‍್ಯಾಲಿ ಇರಲಿದ್ದು, ಸ್ವರಾಜ್ ಮೈದಾನದಿಂದ ಕಾರ್ಕಳ ಬಸ್ ನಿಲ್ದಾಣ- ಬಂಡೀಮಠ ಮಾರ್ಗವಾಗಿ ರ‍್ಯಾಲಿ ಮುಖಾಂತರ ಸಾಗಿ ಬಂದು ತಾಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿಯವರಿಗೆ ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ . ನಂತರ ಕುಕ್ಕುಂದೂರು ಗ್ರಾಮ ಪಂಚಾಯತ್ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ ಎಂದು ಸುನೀಲ್ ಕುಮಾರ್ ಅವರ ಪ್ರಕಟಣೆ ತಿಳಿಸಿದೆ.

Related posts

ಸುಳ್ಯ: ಮಾತು ಬಾರದ ಅಜ್ಜಿ ದಾರಿ ತಪ್ಪಿ ಪರದಾಟ, ಏನೂ ತಿಳಿಯದೇ ಒದ್ದಾಟ, ಸಾಂತ್ವಾನ ಕೇಂದ್ರಕ್ಕೆ ಸೇರಿಸಿದ ಸ್ಥಳೀಯರು

6 ವರ್ಷ ಕಾಂಗ್ರೆಸ್ ನಿಂದ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಅಮಾನತು?

ಕೊಡಗಿನ ಜನರಿಗೂ ಶುರುವಾಯ್ತಾ ಹುಲಿಯುಗುರಿನ ಭಯ..? ವಿರಾಜಪೇಟೆ ಶಾಸಕ ಎ ಎಸ್ ಪೊನ್ನಣ್ಣ ಜನರಿಗೆ ನೀಡಿದ ಅಭಯವೇನು?