ನ್ಯೂಸ್ ನಾಟೌಟ್ : ಕೈಗಾರಿಕಾ ಉದ್ದೇಶದಿಂದ ನಿರ್ಮಿಸಲಾಗಿದ್ದ ಸಿಮೆಂಟ್ ಟ್ಯಾಂಕ್ ಗೆ ಬಿದ್ದು ಆನೆಯೊಂದು ಸಾವನ್ನಪ್ಪಿರುವ ಘಟನೆ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯ ಎಳನೀರುಗುಂಡಿಯಲ್ಲಿ ನಡೆದಿದೆ.
ಕೆಲವು ವರ್ಷಗಳಿಂದ ಸಿಮೆಂಟ್ ಗುಂಡಿ ತೋಡಲಾಗಿದೆಯಾದರು ಇದುವರೆಗೂ ಬಳಕೆಯಾಗಿರಲಿಲ್ಲ. ಫೆ.೧೭ ಶುಕ್ರವಾರ ತಡರಾತ್ರಿ ನಿಡ್ತ ಮೀಸಲು ಅರಣ್ಯದಿಂದ ಹೆಣ್ಣು ಕಾಡಾನೆಯು ನೀರು ಕುಡಿಯಲು ಬಂದಿದ ವೇಳೆ ಆಳವಾದ ಸಿಮೆಂಟ್ ಗುಂಡಿಗೆ ಬಿದ್ದಿರಬಹುದು ಎಂದು ಡಿಸಿಎಫ್ ಪೂವಯ್ಯ ತಿಳಿಸಿದ್ದಾರೆ.
ಆನೆಯ ಮೃತದೇಹವನ್ನು ಹೊರತೆಗೆಯಲಾಗಿದ್ದು ಮರಣೋತ್ತರ ಪರೀಕ್ಷೆಯ ಬಳಿಕ ಸಾವಿನ ನಿಖರ ಕಾರಣ ಗೊತ್ತಾಗಲಿದೆ ಎಂದು ವಲಯ ಅರಣ್ಯಧಿಕಾರಿ ಪ್ರಪುಲ್ ಶೆಟ್ಟಿ ತಿಳಿಸಿದ್ದಾರೆ.