ನ್ಯೂಸ್ ನಾಟೌಟ್: ರಬ್ಬರ್ ಟ್ಯಾಪಿಂಗ್ ಕೆಲಸ ಮುಗಿಸಿ ಶೆಡ್ ಗೆ ಬರುತ್ತಿದ್ದ ವ್ಯಕ್ತಿಯ ಮೇಲೆ ಕಾಡಾನೆ ದಾಳಿಗೆ ಯತ್ನಿಸಿರುವ ಘಟನೆ ಇಂದು (ಜು.೧೧) ಬೆಳಗ್ಗೆ 5 ಗಂಟೆಗೆ ನಡೆದಿದೆ.
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಊರು ಬೈಲು ಎಂಬಲ್ಲಿ ಘಟನೆ ಸಂಭವಿಸಿದೆ. ಪವಾಡಸದೃಶ್ಯ ರೀತಿಯಲ್ಲಿ ವ್ಯಕ್ತಿ ಪಾರಾಗಿದ್ದಾರೆ.
ಇಂದು ಬೆಳಗ್ಗೆ ಪಾಲ್ತಾಡಿ ಕೇಶವ ಅವರ ಮಗ ರವಿ ಅನ್ನುವವರು ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ಹೋಗಿದ್ದರು. ಈ ವೇಳೆ ತಮ್ಮ ಕೆಲಸ ಮುಗಿಸಿ ಇನ್ನೇನು ರಬ್ಬರ್ ಶೆಡ್ ಗೆ ಅವರು ಹೋಗಬೇಕು ಅನ್ನುವಷ್ಟರಲ್ಲಿ ಕಾಡಾನೆಯೊಂದು ಶೆಡ್ ಹಿಂದಿನಿಂದ ದಿಢೀರ್ ದಾಳಿಗೆ ಯತ್ನಿಸಿದೆ.
ಅದೃಷ್ಟವಶಾತ್ ರವಿ ಓಡಿ ತಪ್ಪಿಸಿಕೊಂಡಿದ್ದಾರೆ. ಇದೇ ವೇಳೆ ಕಾಡಾನೆ ರಬ್ಬರ್ ಶೆಡ್ ಅನ್ನು ಧ್ವಂಸ ಮಾಡಿದೆ. ಕಳೆದ ಹದಿನೈದು ದಿನದಿಂದ ಈ ಭಾಗದಲ್ಲಿ ಕಾಡಾನೆಯ ಹಾವಳಿ ಇದೆ, ಅರಣ್ಯ ಇಲಾಖೆಗೆ ಮನವಿ ಕೊಟ್ಟರೂ ಸರಿ ಆಗಿಲ್ಲವೆಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.