ರಾಜಕೀಯರಾಜ್ಯ

ಆರಂಭಿಕ ಸುತ್ತಿನ ಅಂಚೆ ಮತಗಳ ಎಣಿಕೆಯಲ್ಲಿ ಎನ್.​​ಡಿ.ಎ ಗೆ ಭಾರಿ ಮುನ್ನಡೆ..! ಕುತೂಹಲ ಕೆರಳಿಸಿದ ಸುಮಾರು 64.2 ಕೋಟಿ ಮತದಾರರ ತೀರ್ಪು

ನ್ಯೂಸ್ ನಾಟೌಟ್: ದೇಶದಾದ್ಯಂತ ಲೋಕಸಭೆ ಚುನಾವಣೆಯ ಅತ್ಯಂತ ಪ್ರಮುಖ ಘಟ್ಟದ ಮತ ಎಣಿಕೆ ಇಂದು (ಮಂಗಳವಾರ) ಬೆಳಗ್ಗೆ 7.30ಕ್ಕೆ ಸ್ಟ್ರಾಂಗ್​ ರೂಂಗಳನ್ನು ತೆರೆಯುವ ಮೂಲಕ ಆರಂಭವಾಗಿದೆ. ಬೆಳಗ್ಗೆ 8ಕ್ಕೆ ಅಂಚೆ ಮತಗಳ ಎಣಿಕೆ ಕಾರ್ಯ ಆರಂಭಿಸಲಾಗಿದೆ ಎಂದು ವರದಿ ತಿಳಿಸಿದೆ. ದೇಶದ ವಿವಿಧೆಡೆಯ ಎಣಿಕೆ ಕೇಂದ್ರಗಳಲ್ಲಿ ಬಿಗಿ ಭದ್ರತೆಯಲ್ಲಿ ಮತ ಎಣಿಕೆ ನಡೆಯುತ್ತಿದೆ.

ಸುಮಾರು 64.2 ಕೋಟಿ ಮತದಾರರು ನೀಡಿರುವ ತೀರ್ಪು ಸಂಜೆಯೊಳಗೆ ಸ್ಪಷ್ಟವಾಗಲಿದೆ. ಏಪ್ರಿಲ್‌ 19ರಿಂದ ಆರಂಭವಾಗಿದ್ದ ಲೋಕಸಭೆ ಚುನಾವಣೆಯ ಮತದಾನ ಜೂನ್ 1ರವರೆಗೂ ಜರುಗಿತ್ತು. ಹೀಗಾಗಿ ಸುದೀರ್ಘವಾಗಿ ನಡೆದ ಚುನಾವಣಾ ಪ್ರಕ್ರಿಯೆ ಎಂಬ ದಾಖಲೆಯನ್ನೂ ಬರೆದಿದೆ. ಹಲವು ಅಡೆತಡೆಗಳು, ಸಾಕಷ್ಟು ಸವಾಲುಗಳ ಮಧ್ಯೆ ಕೇಂದ್ರ ಚುನಾವಣಾ ಆಯೋಗ ಯಶಸ್ವಿಯಾಗಿ ಚುನಾವಣಾ ಪ್ರಕ್ರಿಯೆ ಮುಗಿಸಿತ್ತು. ಅಂಚೆ ಮತಗಳ ಎಣಿಕೆಯಲ್ಲಿ ಬಿಜೆಪಿ ಮತ್ತು ಮಿತ್ರ ಪಕ್ಷಗಳು ಹಲವು ಕಡೆಗಳಲ್ಲಿ ಮುನ್ನಡೆ ಸಾಧಿಸುತ್ತಿವೆ.

Click 👇

https://newsnotout.com/2024/06/election-padmaraj-and-brijish-kannada-news
https://newsnotout.com/2024/06/loka-sabha-result-news-stars
https://newsnotout.com/2024/06/election-and-tv-court-issued-notice

Related posts

ಹಲವು ಭರವಸೆಗಳನ್ನು ಒಳಗೊಂಡ ಕಾಂಗ್ರೆಸ್‌ ಪ್ರಣಾಳಿಕೆ ಬಿಡುಗಡೆ

ಈ ಜಿಲ್ಲೆಯಲ್ಲಿ10 ನೇ ಪಾಸಾದವರೂ ವೈದ್ಯರು..! ಆಕೆಯಿಂದ ಬಯಲಾಯ್ತು 384 ನಕಲಿ ವೈದ್ಯರ ದಂಧೆ..!

ಪುತ್ತೂರು ಬ್ಯಾನರ್ ಪ್ರಕರಣ: ಬ್ಯಾನರ್ ಹಾಕಿದವರ ವಿರುದ್ಧ ನಾವು ದೂರು ಕೊಟ್ಟಿಲ್ಲ,ಪೊಲೀಸರ ಮೇಲೆ ಒತ್ತಡ ಹಾಕಿಲ್ಲ –ಕಟೀಲ್