ದೇಶ-ಪ್ರಪಂಚದೇಶ-ವಿದೇಶರಾಜಕೀಯವೈರಲ್ ನ್ಯೂಸ್

ಚುನಾವಣಾ ಅಖಾಡದಲ್ಲಿ ಚೊಂಬು, ಚಿಪ್ಪುದ್ದೇ ಕಾಳಗ, ಟೀಕೆಗಳಲ್ಲೂ ವಿಚಿತ್ರ ಕ್ರಿಯೇಟಿವಿಟಿ

ನ್ಯೂಸ್ ನಾಟೌಟ್: ಲೋಕಸಭೆ ಚುನಾವಣೆಯ ಅಖಾಡದಲ್ಲಿ ಟೀಕೆಗಳು ಕ್ರೀಯಾಶೀಲತೆಯಿಂದ ಕೂಡಿದ್ದು, ಏಪ್ರಿಲ್ 26ರಂದು ಕರ್ನಾಟಕದಲ್ಲೂ ಮತದಾನ ನಡೆಯಲಿದೆ. ಅದೇ ದಿನ ಕರ್ನಾಟಕದ14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ರಾಜಕೀಯ ಪಕ್ಷಗಳ ಪ್ರಚಾರ ಬಿರುಸುಗೊಂಡಿದ್ದು, ಬಹಿರಂಗ ಪ್ರಚಾರಕ್ಕೆ ತೆರೆಬೀಳಲು ಇನ್ನೆರಡೇ ದಿನ ಬಾಕಿ ಇದೆ.

ಎಲ್ಲ ಕಡೆ ಲಕ್ಷಾಂತರ ಜನರನ್ನು ಸೇರಿಸಿ ರಾಜಕೀಯ ಪಕ್ಷಗಳು ರ‍್ಯಾಲಿ, ಸಮಾವೇಶಗಳನ್ನು ಮಾಡುತ್ತಿದ್ದರೆ ಕರ್ನಾಟಕದಲ್ಲಿ ಪ್ರಚಾರದ ಶೈಲಿ ತುಸು ಭಿನ್ನವಾಗಿದೆ. ರ‍್ಯಾಲಿ, ಸಮಾವೇಶಗಳಷ್ಟೇ ಅಲ್ಲದೆ ಕ್ರಿಯಾಶೀಲ ಜಾಹೀರಾತು, ಟ್ವೀಟ್​ಗಳ ಮೂಲಕವೂ ರಾಜಕೀಯ ಪಕ್ಷಗಳು ಸಾರ್ವಜನಿಕರ ಗಮನ ಸೆಳೆಯುತ್ತಿವೆ. ಕೇಂದ್ರ ಸರ್ಕಾರ ಹಾಗೂ ಬಿಜೆಪಿಯಿಂದ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬುದನ್ನು ಬಿಂಬಿಸಲು ಕಾಂಗ್ರೆಸ್ ಪಕ್ಷವು ಏಪ್ರಿಲ್ 19ರಂದು ರಾಜ್ಯದ ಹೆಚ್ಚಿನೆಲ್ಲ ದಿನಪತ್ರಿಕೆಗಳಿಗೆ ಜಾಹೀರಾತೊಂದನ್ನು ನೀಡಿತು.

ಅದರಲ್ಲಿ, ದೊಡ್ಡದಾದ ಚೊಂಬಿನ ಫೋಟೊ ಪ್ರಕಟಿಸಿ, ಕರ್ನಾಟಕಕ್ಕೆ ಮೋದಿ ಸರ್ಕಾರ ಕೊಟ್ಟ ಕೊಡುಗೆ ಚೊಂಬು ಎಂದು ಟೀಕೆ ಮಾಡುತ್ತು. ಎಲ್ಲರ ಖಾತೆಗೆ 15 ಲಕ್ಷ ಹಣ ಹಾಕುವ ಚೊಂಬು, ತೆರಿಗೆ ಹಂಚಿಕೆಯಲ್ಲಿ ಚೊಂಬು, ರೈತರ ಆದಾಯ ಡಬಲ್ ಮಾಡುವ ಚೊಂಬು, ಬರ ನೆರೆ ಪರಿಹಾರದ ಚೊಂಬು, 27 ಜನ ಬಿಜೆಪಿ ಜೆಡಿಎಸ್ ಸಂಸದರು ರಾಜ್ಯಕ್ಕೆ ನೀಡಿದ ಕೊಡುಗೆ ಕೇವಲ ಚೊಂಬು.

ಈ ಚುನಾವಣೆಯಲ್ಲಿ ಬಿಜೆಪಿಗೆ ನಾವು ನೀಡೋಣ ಇದೇ ಚೊಂಬು ಎಂದು ಕಾಂಗ್ರೆಸ್ ಜಾಹೀರಾತು ನೀಡಿತ್ತು. ಇದನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್​ಗೆ ತಿರುಗೇಟು ನೀಡಿದ ಬಿಜೆಪಿ, 2013ರಲ್ಲಿ ಸಿಎಂ ಸಿದ್ದರಾಮಯ್ಯ ಅವರು ಚೊಂಬು ಹಿಡಿದುಕೊಂಡು ಬಯಲುಶೌಚಕ್ಕೆ ಹೋಗುತ್ತಿರುವ ಮತ್ತು 2023ರಲ್ಲಿ ಚೊಂಬು ಹಿಡಿದುಕೊಂಡು ಶೌಚಾಲಯಕ್ಕೆ ಹೋಗುತ್ತಿರುವ ಎಡಿಟೆಡ್ ಚಿತ್ರವನ್ನು ಟ್ವೀಟ್ ಮಾಡಿ ‘ಇಷ್ಟೇ ವ್ಯತ್ಯಾಸ’ ಎಂದಿತು. ಇದು ನಿಜಕ್ಕೂ ಚುನಾವಣಾ ಪ್ರಚಾರ ಅಖಾಡ ರಂಗೇರಿದೆ.

Related posts

ಏರ್​ ಗನ್ ಜತೆ ಆಟವಾಡುವಾಗ ಮಿಸ್ ಫೈರ್..! 7 ವರ್ಷದ ಬಾಲಕನ ದುರಂತ ಅಂತ್ಯ..!

ಪುಟ್ಟ ಮಗಳನ್ನು ಬೆಟ್ಟದ ಮೇಲೆ ಬಿಟ್ಟುಬಂದ ಅಮ್ಮ..! ಹಸಿವಿನಿಂದ 3 ವರ್ಷದ ಮಗುವಿನ ದಾರುಣ ಸಾವು..!

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಕೋಟಿ-ಕೋಟಿ ಹಣ ವಂಚನೆ..! ತಮಿಳುನಾಡಿಂದ ಬಂದವಳು ಸಿಕ್ಕಿಬಿದ್ದಿದ್ದೇಗೆ..?