ಕರಾವಳಿವೈರಲ್ ನ್ಯೂಸ್

ಒಂದು ಮೊಟ್ಟೆಯ ಬೆಲೆ ಬರೋಬ್ಬರಿ 2000 ರೂ..! ವಿಶ್ವದ ಅತ್ಯಂತ ದುಬಾರಿ ಮೊಟ್ಟೆಯ ಬಗ್ಗೆ ಕೇಳಿದ್ದೀರಾ? ಇಲ್ಲಿದೆ ಬಗೆ ಬಗೆಯ ದುಬಾರಿ ಮೊಟ್ಟೆಗಳ ವಿವರ

ನ್ಯೂಸ್‌ನಾಟೌಟ್‌: ಕೋಳಿ ಮೊಟ್ಟೆಗಳನ್ನು ತಿನ್ನುವ ಬಗ್ಗೆ ಮತ್ತು ಅದರ ದರಗಳ ಬಗ್ಗೆ ನಮಗೆ ಗೊತ್ತಿದೆ ಆದರೆ, ಕೋಳಿ ಮೊಟ್ಟೆ ಮಾತ್ರವಲ್ಲದೆ ಇದಕ್ಕಿಂತಲೂ ದುಬಾರಿ ಬೆಲೆಯ ಮೊಟ್ಟೆಗಳ ವಿವರ ಇಲ್ಲಿದೆ. ಮೊಟ್ಟೆಗಳು ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಮತ್ತು ರುಚಿಕರ ಆಹಾರ ಪದಾರ್ಥವೂ ಹೌದು.
ಅವು ಅನೇಕ ವಿಟಮಿನ್ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ. ಅದಕ್ಕಾಗಿಯೇ ಅನೇಕ ಜನರು ಮೊಟ್ಟೆಗಳನ್ನು ತಿನ್ನುವ ಮೂಲಕ ಸ್ನಾಯುಗಳು ಮತ್ತು ಮೂಳೆಗಳನ್ನು ಬಲಪಡಿಸಲು ಬಯಸುತ್ತಾರೆ. ಸಾಮಾನ್ಯವಾಗಿ ಹೆಚ್ಚಿನವರು ಕೋಳಿ ಮೊಟ್ಟೆಗಳನ್ನು ತಿನ್ನುತ್ತಾರೆ. ಇದರ ಬೆಲೆಯೂ ಕಡಿಮೆ, ಆರೋಗ್ಯಕ್ಕೂ ಒಳ್ಳೆಯದು. ಆದರೆ ಇ್ಲಲಿದೆ ದುಬಾರಿ ಬೆಲೆಯ ಮೊಟ್ಟಗಳ ಬಗ್ಗೆ ತಿಳಿಯೋಣ ಬನ್ನಿ.

ಈ ಮೊಟ್ಟೆಗೆ ಭಾರಿ ಬೇಡಿಕೆ ಇದ್ದು, ಈ ಮೊಟ್ಟೆಗಳು ಬಹಳ ಅಪರೂಪವಾಗಿದೆ. ವರ್ಷಕ್ಕೆ 4 ವಾರಗಳು ಮಾತ್ರ ಲಭ್ಯವಿರುವ ಈ ಮೊಟ್ಟೆಗಳು ಬೇಯಿಸಿ ತಿನ್ನುವಂತದ್ದು. ಒಂದು ಮೊಟ್ಟೆಯ ಬೆಲೆ ಸುಮಾರು 800 ರೂ. ಬೆಲೆ ಹೊಂದಿದೆ.

(quail egg) ಈ ಕ್ವಿಲ್ ಮೊಟ್ಟೆಗಳು ತುಂಬಾ ಚಿಕ್ಕದಾಗಿದೆ. ಆದರೆ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಒಂದು ಡಜನ್ ಮೊಟ್ಟೆಗೆ ಸುಮಾರು 400 ರೂ. ಈ ಮೊಟ್ಟೆಗಳನ್ನು ಎಗ್ ಬುರ್ಜಿಯಂತೆ ಬೇಯಿಸಿ ತಿನ್ನುತ್ತಾರೆ. ಈ ಮೊಟ್ಟೆಗಳಲ್ಲಿ ಕಬ್ಬಿಣಾಂಶ ಹೇರಳವಾಗಿದೆ. ರುಚಿ ಕೋಳಿ ಮೊಟ್ಟೆಗಳನ್ನೇ ಹೋಲುತ್ತದೆ. ಬಹಳ ಕಡಿಮೆ ಸಮಯದಲ್ಲಿ ಬೇಯಿಸಬಹುದು.

(emu egge)ಎಮು ಮೊಟ್ಟೆಗಳನ್ನು ಸಹ ತಿನ್ನಲಾಗುತ್ತದೆ. ಈ ಮೊಟ್ಟೆಗಳು ತುಂಬಾ ದೊಡ್ಡದಾಗಿದೆ. ಎಮು ಮೊಟ್ಟೆಯು ಒಂದು ಡಜನ್ ಸುಮಾರು 15 ಕೋಳಿ ಮೊಟ್ಟೆಗಳ ಗಾತ್ರವನ್ನು ಹೊಂದಿದೆ. ಎಮು ಆಮ್ಲೆಟ್ ತುಂಬಾ ರುಚಿಕರವಾಗಿದೆ. ಒಂದು ಮೊಟ್ಟೆಯ ಆಮ್ಲೆಟ್ ಅನ್ನು ಮೂರ್ನಾಲ್ಕು ಜನ ತಿನ್ನಬಹುದು. ಈ ಮೊಟ್ಟೆಗಳು ರುಚಿ ಮತ್ತು ನೋಟ ಎರಡರಲ್ಲೂ ಭಿನ್ನವಾಗಿರುತ್ತವೆ. ಒಂದು ಎಮು ಮೊಟ್ಟೆಯ ಬೆಲೆ ಸುಮಾರು 2000 ರೂ. ಬೆಲೆಯನ್ನು ಹೊಂದಿದೆ.

(turkey egg)ಈ ಮೊಟ್ಟೆಗಳು ಬಹಳ ಅಪರೂಪ. ವಾಣಿಜ್ಯಿಕವಾಗಿ ಇದನ್ನು ಮಾರಲಾಗುತ್ತದೆ. ಏಕೆಂದರೆ ಟರ್ಕಿ ಕೋಳಿಗಳು ಮೊಟ್ಟೆ ಇಡಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ವಾರಕ್ಕೆ ಎರಡು ಮೊಟ್ಟೆಗಳನ್ನು ಮಾತ್ರ ಇಡಲಾಗುತ್ತದೆ. ಟರ್ಕಿ ಮೊಟ್ಟೆಗಳು ಕೋಳಿ ಮೊಟ್ಟೆಗಳಂತೆ ತುಂಬಾ ರುಚಿಯಾಗಿರುತ್ತವೆ. ಆದರೆ ಈ ಮೊಟ್ಟೆಗಳಲ್ಲಿ ಹೆಚ್ಚು ಪೋಷಕಾಂಶಗಳಿವೆ. ಒಂದು ಡಜನ್ ಮೊಟ್ಟೆಗಳಿಗೆ ಸುಮಾರು 3000 ರೂಪಾಯಿಗಳು.

ಬಾತುಕೋಳಿ ಮೊಟ್ಟೆಗಳು ತುಂಬಾ ರುಚಿಯಾಗಿರುತ್ತವೆ. ಅವು ಸಾಮಾನ್ಯ ಮೊಟ್ಟೆಗಳಿಗಿಂತ ಹೆಚ್ಚು ವೆಚ್ಚವಾಗುತ್ತವೆ. ಒಂದು ಡಜನ್ ಮೊಟ್ಟೆಗಳ ಬೆಲೆ ಸುಮಾರು 150 ರೂಪಾಯಿಗಳು. ಈ ಮೊಟ್ಟೆಗಳು ತುಂಬಾ ಉಪಯುಕ್ತವಾಗಿವೆ. ಬಾತುಕೋಳಿ ಮೊಟ್ಟೆಗಳು ಕೋಳಿ ಮೊಟ್ಟೆಗಳಿಗಿಂತ ದೊಡ್ಡದಾಗಿದೆ. ಈ ಮೊಟ್ಟೆಗಳು ರುಚಿಕರವಾಗಿರುವುದು ಮಾತ್ರವಲ್ಲದೆ ಸಾಮಾನ್ಯ ಮೊಟ್ಟೆಗಳಿಗಿಂತ ಹೆಚ್ಚಿನ ಪೋಷಕಾಂಶಗಳು ಮತ್ತು ಪ್ರೊಟೀನ್‌ಗಳನ್ನು ಸಹ ಹೊಂದಿರುತ್ತವೆ.
ಇವಿಷ್ಟು ಕೋಳಿ ಮೊಟ್ಟೆಗಳನ್ನು ಹೊರತುಪಡಿಸಿ ಅತೀ ಜನರು ತಿನ್ನುವ ಅತೀ ದುಬಾರಿ ಮೊಟ್ಟೆಗಳು.

Related posts

ನಾಳೆ (ಆಗಸ್ಟ್ 21) ಭಾರತ್ ಬಂದ್..? ಇಲ್ಲಿದೆ ಸಂಪೂರ್ಣ ಮಾಹಿತಿ

ಸುಳ್ಯ: ಕೋಲು ಜೇನಿಗೆಂದು ಬೆಂಕಿ ಹಚ್ಚಿ ಎಡವಟ್ಟು,  ಧಗಧಗನೆ ಹೊತ್ತಿ ಉರಿದ ತೆಂಗಿನ ಮರ..!

ಸೌಜನ್ಯ ಅತ್ಯಾಚಾರ ,ಹತ್ಯೆ ಪ್ರಕರಣ:ಸಿಡಿದೆದ್ದ ಸುಳ್ಯದ ಗೌಡ ಯುವ ಸೇವಾ ಸಂಘ ,ಆ.1ರಂದು ಬೃಹತ್ ವಾಹನ ಜಾಥಾ,ಸರ್ಕಾರಕ್ಕೆ ಮನವಿ,ವಿಡಿಯೋ ವೀಕ್ಷಿಸಿ