ಕ್ರೈಂ

ಮೇಕೆ ತಲೆ ಕಡಿಯುವ ಬದಲು ಮನುಷ್ಯನ ತಲೆಯನ್ನೇ ಕತ್ತರಿಸಿದ ಕುಡುಕ..!

ಕೋಲಾರ: ದೇವರಿಗೆ ಪ್ರಾಣಿ ಬಲಿ ಕೊಡುವಾಗ ಎಡವಟ್ಟು ಮಾಡಿರುವ ಕುಡುಕನೊಬ್ಬ ಮೇಕೆ ತಲೆ ಕಡಿಯುವ ಬದಲಿಗೆ ಯುವಕನ ಕತ್ತು ಕತ್ತರಿಸಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಕೋಲಾರದ ಗಡಿ ಅಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ವಲಸನಪಲ್ಲಿಯಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸುರೇಶ್ (32) ಬಲಿಪಶುವಾದ ಯುವಕ. ಮೇಕೆ ಹಿಡಿದುಕೊಂಡಿದ್ದ ಸ್ನೇಹಿತನ ಕತ್ತು ಕತ್ತರಿಸಿರುವ ಕುಡುಕ ಚಲಪತಿ, ಪೊಲೀಸರ ಅತಿಥಿಯಾಗಿದ್ದಾನೆ. ಈತ ಕುಡಿದ ಮತ್ತಿನಲ್ಲಿ ಮೇಕೆ ತಲೆ ಬದಲಿಗೆ ತನ್ನ ಸ್ನೇಹಿತನ ತಲೆಯನ್ನೇ ಕತ್ತರಿಸಿದ್ದಾನೆ.

ಯಲ್ಲಮ್ಮನಿಗೆ ಪ್ರತಿ ವರ್ಷ ಜಾತ್ರೆಯಲ್ಲಿ ಬಲಿ ಕೊಡುವುದು ಗ್ರಾಮದ ಸಂಪ್ರದಾಯ. ಅದರಂತೆ ಈ ವರ್ಷವೂ ಮೇಕೆ ಕತ್ತರಿಸಲು ಗ್ರಾಮಸ್ಥರು ಮುಂದಾಗಿದ್ದರು. ಮೇಕೆ ಹಿಡಿದುಕೊಂಡಿದ್ದ ಸುರೇಶ್ ತಲೆಯನ್ನು ಕತ್ತರಿಸಿರುವ ಚಲಪತಿ, ಗ್ರಾಮಾಂತರ ಪೊಲೀಸರ ಅತಿಥಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Related posts

ನೈಟಿ ಎಗರಿಸಿ ಪರಾರಿಯಾದ ಬುರ್ಖಾಧಾರಿ ಕಳ್ಳಿಯರು..!

ರೇಣುಕಾ ಸ್ವಾಮಿ ಕೊಲೆ ಪ್ರಕರಣ; ಜೈಲ್‌ನಲ್ಲಿ ಜ್ವರದಿಂದ ಬಳಲುತ್ತಿರುವ ದರ್ಶನ್‌, ಆರೋಪಿಗಳ ಕುಟುಂಬಕ್ಕೆ ಶಾಕ್‌ ಮೇಲೆ ಶಾಕ್‌..!

ಕಡಬ: ಒಂಟಿ ಮಹಿಳೆಯನ್ನು ಮತಾಂತರ ನಡೆಸಲೆತ್ನಿಸಿದವ ಅರೆಸ್ಟ್