ಕರಾವಳಿ

ಮಾದಕ ವಸ್ತು ಸಾಗಾಟ: ಮಾಲು ಸಹಿತ ಲೇಡಿ ಅಂಡ್ ಗ್ಯಾಂಗ್ ಅಂದರ್..!

ನ್ಯೂಸ್ ನಾಟೌಟ್:  ಮಂಗಳೂರು ನಗರದಲ್ಲಿ ನಿಷೇಧಿತ ಮಾದಕ ವಸ್ತುವನ್ನು ಬೆಂಗಳೂರಿನಿಂದ ಅಕ್ರಮವಾಗಿ ಖರೀದಿಸಿ ಮಂಗಳೂರಿಗೆ ಕಾರೊಂದರಲ್ಲಿ ತರುತ್ತಿದ್ದ ನಾಲ್ಕು ಮಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಖಚಿತ ಮಾಹಿತಿಯ ಮೇರೆಗೆ ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಕಾಸರಗೋಡು ಜಿಲ್ಲೆಯವರಾದ ಮಹಮ್ಮದ್ ರಮೀಝ್(24), ಮೊಹಿದ್ದೀನ್ ರಶೀದ್(24) ಅಬ್ದುಲ್ ರವೂಫ್(35) ಹಾಗೂ ಬೆಂಗಳೂರಿನ ಮಡಿವಾಳ ನಿವಾಸಿ ಸಬಿತಾ ಸಮೀರಾ(25) ಎಂದು ಗುರುತಿಸಲಾಗಿದೆ. ಬಂಧಿತರಿಂದ ಒಟ್ಟು 125 ಗ್ರಾಂ ತೂಕದ ರೂ. 6 ಲಕ್ಷ ಮೌಲ್ಯದ ಎಂಡಿಎಂಎ ಮಾದಕ ವಸ್ತುವನ್ನು, 6 ಮೊಬೈಲ್ ಫೋನ್ ಗಳು, ಡಿಜಿಟಲ್ ತೂಕ ಮಾಪನ ಹಾಗೂ ಸಾಗಾಟಕ್ಕೆ ಉಪಯೋಗಿಸಿದ ಮಾರುತಿ ರಿಟ್ಜ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

Related posts

ನಟ ಪ್ರಕಾಶ್ ರಾಜ್ ಗೆ ಜೀವ ಬೆದರಿಕೆ, ಯೂಟ್ಯೂಬ್ ಚಾನೆಲ್ ವಿರುದ್ಧ FIR ದಾಖಲು

ಸುಳ್ಯ: ಅಜ್ಜಾವರದ ಹುಡುಗಿಗೆ ಬಿ ಫಾರ್ಮ್ ನಲ್ಲಿ ದ್ವಿತೀಯ ರ‍್ಯಾಂಕ್‌, ಯಾರಿದು ಸಾಧಕಿ..?

ಮಡಿಕೇರಿ: ಕೊಡಗಿನ ಕೆಲವೆಡೆ ಸೂರ್ಯನ ಸುತ್ತ ಗೋಚರವಾದ ಉಂಗುರದ ಮಾದರಿ..!,ಸೂರ್ಯ ದೇವ’ನ ಸುತ್ತ ವಿವಿಧ ವರ್ಣಗಳ ಉಂಗುರ ದರ್ಶನದಿಂದ ಪುಳಕಿತರಾದ ಜನ