ದೇಶ-ವಿದೇಶವೈರಲ್ ನ್ಯೂಸ್

ಏಕಕಾಲದಲ್ಲಿ 5 ಮಕ್ಕಳಿಗೆ ಜನ್ಮ ನೀಡಿದ ತಾಯಿ..! ಈ ಬಗ್ಗೆ ವೈದ್ಯೆ ಹೇಳಿದ್ದೇನು..?

ನ್ಯೂಸ್ ನಾಟೌಟ್: ತಾಯಿಯೊಬ್ಬರು ಅವಳಿ ಮಕ್ಕಳಿಗೆ ಜನನ ನೀಡಿರುವ ಬಗ್ಗೆ ಕೇಳಿರುತ್ತೇವೆ. ಅಪರೂಪವೆಂಬಂತೆ ಗರ್ಭಿಣಿಯೊಬ್ಬರು ಒಂದಲ್ಲ ಎರಡಲ್ಲ ಬರೋಬ್ಬರಿ ಐದು ಮಕ್ಕಳಿಗೆ ಏಕಕಾಲದಲ್ಲಿ ಜನ್ಮ ನೀಡಿರುವ ಘಟನೆ ನಡೆದಿದೆ. 20 ವರ್ಷದ ಗರ್ಭಿಣಿಯೊಬ್ಬರು ಬರೋಬ್ಬರಿ ಐದು ಮಕ್ಕಳಿಗೆ ಜನ್ಮ ನೀಡಿದ ಅಪರೂಪದಲ್ಲಿ ಅಪರೂಪದ ಘಟನೆ ಬಿಹಾರದಲ್ಲಿ ನಡೆದಿದೆ.

ಇಲ್ಲಿನ ಕಿಶನ್‌ಗಂಜ್ ಜಿಲ್ಲೆಯಲ್ಲಿ ಇಂತಹ ಅಚ್ಚರಿಯ ಪ್ರಕರಣವೊಂದು ನಡೆದಿದ್ದು, ಈ ವಿಷಯ ಇದೀಗ ಇಡೀ ಪ್ರದೇಶದಲ್ಲಿ ಬಿಸಿಬಿಸಿ ಸುದ್ದಿಯಾಗಿ ಚರ್ಚೆಗೆ ಗ್ರಾಸವಾಗಿದೆ. ಗರ್ಭಿಣಿ ಜನ್ಮ ನೀಡಿದ ಎಲ್ಲಾ ಐದು ಮಕ್ಕಳು ಹೆಣ್ಣು ಶಿಶುಗಳಾಗಿದ್ದು, 1 ಕೆಜಿಗಿಂತ ಕಡಿಮೆ ತೂಕವಿದೆ. ಸದ್ಯ ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ. ಇಂತಹ ಅಪರೂಪದ ಘಟನೆಯಲ್ಲಿ ಐವರು ಹೆಣ್ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿಗೆ ಹೆರಿಗೆ ಮಾಡಿಸಿಕೊಟ್ಟ ವೈದ್ಯೆ ಡಾ.ಫರ್ಜಾನಾ ಮಾತನಾಡಿ, ಈ ಪ್ರಕರಣ ಸವಾಲಿನದ್ದಾಗಿದ್ದು, ಇಂತಹ ಪ್ರಕರಣಗಳು ತೀರಾ ವಿರಳ. ಅಚ್ಚರಿಯ ವಿಷಯ ಎಂದರೆ ಎಲ್ಲಾ ಮಕ್ಕಳು ಸಾಮಾನ್ಯ ಹೆರಿಗೆಯ ಮೂಲಕ ಜನಿಸಿದರು ಎಂದು ಹೇಳಿದ್ದಾರೆ.

ಈ ಪ್ರಕರಣವು ಕಿಶನ್‌ಗಂಜ್ ಜಿಲ್ಲೆಯ ಪೋಥಿಯಾ ಬ್ಲಾಕ್‌ನಲ್ಲಿ ನಡೆದಿದ್ದು, ಠಾಕೂರ್‌ಗಂಜ್ ಕನಕಪುರ ಪಂಚಾಯತ್‌ನ ಜಲ್ಮಿಲಿಕ್ ಗ್ರಾಮದ ನಿವಾಸಿ ತಾಹಿರಾ ಬೇಗಂ (20) ಖಾಸಗಿ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಾಹಿರಾ ಅವರು 2 ತಿಂಗಳ ಗರ್ಭಿಣಿಯಾಗಿದ್ದಾಗ ಹೊಟ್ಟೆಯಲ್ಲಿ ನಾಲ್ಕು ಮಕ್ಕಳಿರುವುದು ಗೊತ್ತಾಗಿದೆ. ಬಳಿಕ ವೈದ್ಯರ ಬಳಿ ತಪಾಸಣೆಗೆ ಹೋದಾಗ ನಾಲ್ಕಲ್ಲ ಐದು ಮಕ್ಕಳಿರುವುದು ಗೊತ್ತಾಯಿತು. ಆರಂಭದಲ್ಲಿ ಗರ್ಭಿಣಿ ತುಂಬಾ ಹೆದರುತ್ತಿದ್ದಳು, ಆದರೆ ವೈದ್ಯರು ಅವಳಿಗೆ ಭರವಸೆ ನೀಡಿ ಆತ್ಮವಿಶ್ವಾಸ ತುಂಬಿದ್ದಾರೆ. ಪರಿಣಾಮ ಐದು ಹೆಣ್ಮಕ್ಕಳಿಗೆ ನಾರ್ಮಲ್ ಡೆಲಿವರಿ ಮೂಲಕ ಜನ್ಮ ನೀಡಿದ್ದಾರೆ. ರೋಗಿಯು ಸಾಮಾನ್ಯ ಹೆರಿಗೆ ಮೂಲಕ 5 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ತಾಯಿ ಮತ್ತು ಅವಳ ಹೆಣ್ಣುಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಹೇಳಿದರು. ಅಂದಹಾಗೆ ಈ ಬಾರಿ ತಾಹಿರಾ ಎರಡನೇ ಬಾರಿಗೆ ತಾಯಿಯಾಗಿದ್ದು, ಈಗಾಗಲೇ ಮೂರು ವರ್ಷದ ಮಗ ಇದ್ದಾನೆ. ಒಟ್ಟು ಆರು ಮಕ್ಕಳ ತಾಯಿಯಾಗಿದ್ದಾರೆ.

Related posts

ಮದ್ಯಪಾನ ಮಾಡಿ ಶಾಲಾ ವಾಹನ ಓಡಿಸಿದ್ರಾ ಚಾಲಕರು..? 16 ಚಾಲಕರ ವಾಹನ ಪರವಾನಗಿ ಪತ್ರ ಆರ್.​ಟಿ.ಒ ಗೆ ರವಾನೆ

Titanic ಸಬ್​ಮೆರಿನ್ ದುರಂತ! ಟೈಟಾನಿಕ್ ಸಿನಿಮಾ ರಿ-ರಿಲೀಸ್​ಗೆ ಮುಂದಾದ ನೆಟ್​ಫ್ಲಿಕ್ಸ್!​ ನೆಟ್ಟಿಗರು ಟೀಕಿಸಿದ್ದೇಕೆ?

Shakti scheme: ಟೀಕೆಗಳ ನಡುವೆ ಕೂಡ KSRTC ಸಾರಿಗೆ ನಿಗಮಗಳ ಆದಾಯ ಹೆಚ್ಚಳವಾದದ್ದು ಹೇಗೆ? ಸಾವಿರಕ್ಕೂ ಅಧಿಕ ಬಸ್‌ ಖರೀದಿಗೆ ನಿರ್ಧಾರಿಸಿದೆಯ ಸಾರಿಗೆ ನಿಗಮ! ಸಾರಿಗೆ ಸಚಿವರು ಹೇಳಿದ್ದೇನು?