ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಭಿನ್ನಮತ ಮತ್ತೆ ಸ್ಪೋಟಗೊಂಡಿದೆ. ಸುದ್ದಿಗೋಷ್ಠಿಯಲ್ಲಿಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಡೀಲ್ ರಾಜ ಎಂಬುದಾಗಿ ಕಾಂಗ್ರೆಸ್ ನಾಯಕರೇ ಹೊರ ಹಾಕಿದ್ದಾರೆ! ಡಿಕೆ ಶಿವಕುಮಾರ್ ಕೋಟಿ ಕೋಟಿ ಡೀಲ್ ನಡೆಸಿದ್ದಾರೆ ಎಂಬುದಾಗಿ ಆರೋಪವನ್ನು ಗುಸು ಗುಸು ಮಾತನಾಡುತ್ತಲ್ಲೇ ಮಾಡಿರುವುದಾಗಿ ಬಯಲಾಗಿದೆ. ಕೆಪಿಸಿಸಿ ಕಚೇರಿಯಲ್ಲಿ ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿನ ಕೆಪಿಸಿಸಿಯ ಸಲೀಂ ಹಾಗೂ ವಿ.ಎಸ್ ಉಗ್ರಪ್ಪನವರು ಸುದ್ದಿಗೋಷ್ಠಿಗೂ ಮೊದಲು ಗುಸುಗುಸು ರೀತಿಯಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಮಾತನಾಡೋದು ಕ್ಯಾಮರಾಗಳ ಕಣ್ಣಲ್ಲಿ ಸೆರೆಯಾಗಿದೆ.
previous post