ಕ್ರೈಂ

ಕೊನೆಗೂ ಹನಿಟ್ರ್ಯಾಪ್ ಕಳ್ಳರು ಪೊಲೀಸರ ಬಲೆಗೆ ಬಿದ್ದರು

1.1k

ಬೆಂಗಳೂರು: ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಯುವಕರನ್ನು ಗುರುತಿಸುವ ಕಿಡಿಗೇಡಿಗಳ ಗುಂಪು ನಕಲಿ ಫೇಸ್‌ಬುಕ್‌ ಐಡಿಗಳನ್ನು ಮಾಡಿ ಪ್ರೊಫೈಲ್‌ಗೆ ಸುಂದರವಾದ ಯುವತಿಯರ ಫೋಟೋ ಹಾಕಿ ಅದಕ್ಕೆ ಸ್ಪಂದಿಸುವ ಯುವಕರಿಗೆ ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿದ್ದ ಗ್ಯಾಂಗ್ ಇದೀಗ ಸಿಐಡಿ ಬಲೆಗೆ ಬಿದ್ದಿದೆ. ರಾಜಸ್ಥಾನ ಮೂಲದ ಕಸಮ್ ಖಾನ್, ಸಾಕಿರ್,ಜಮೀಲ್ ಖಾನ್ ಬಂಧಿತ ಅಪರಾಧಿಗಳು. ಹನಿಟ್ರ್ಯಾಪ್ ದಂಧೆ ನಡೆಸುತ್ತಿದ್ದ ಇವರು ಯುವತಿಯರ ಹೆಸರಿನಲ್ಲಿ ಫೇಸ್‌ಬುಕ್ ಖಾತೆ ತೆರೆದು ಫೇಸ್‌ಬುಕ್ ಮೂಲಕವೇ ಯುವಕರ ಮೊಬೈಲ್ ನಂಬರ್ ಪಡೆದುಕೊಂಡು ವಿಡಿಯೋ ಕಾಲ್ ಮಾಡುತ್ತಿದ್ದರು. ವಿಡಿಯೋ ಕಾಲ್‌ನಲ್ಲಿ ಮಾದಕವಾಗಿ ಮಾತನಾಡಿಸಿ, ಅವರ ಬಟ್ಟೆ ಬಿಚ್ಚಿಸುತ್ತಿದ್ದರು.ಇದನ್ನು ರೆಕಾರ್ಡ್ ಮಾಡಿಟ್ಟುಕೊಂಡು ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದರು. ಹನಿಟ್ರ್ಯಾಪ್ ಬಗ್ಗೆ ಸಿಐಡಿಯಲ್ಲಿ ಹಲವು ದೂರುಗಳು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ತನಿಖೆಗಿಳಿದ ಸಿಐಡಿ ಪೊಲೀಸರು ಬೆಂಗಳೂರಿನಲ್ಲಿ ಮೂರು ಮಂದಿಯನ್ನು ಬಂಧಿಸಿದ್ದಾರೆ.

See also  ಸೋನು ಗೌಡ ಕೇಸ್ ಮತ್ತಷ್ಟು ಚುರುಕು..! ಬಾಲಕಿಯ ತಾಯಿಗೆ ಕೌನ್ಸಿಲಿಂಗ್‌
  Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget