ಕ್ರೈಂರಾಜಕೀಯ

ಡಿಕೆಶಿ ಮಹಿಳೆಯನ್ನು ಅಪಹರಿಸಿ ಬೆದರಿಸಿ ಜಮೀನು ಬರೆಸಿಕೊಂಡಿದ್ದಕ್ಕೆ ದಾಖಲೆ ಇದೆ ಎಂದ ಹೆಚ್.ಡಿ.ಕೆ..! ಏನಿದು ಆರೋಪ..?

ನ್ಯೂಸ್ ನಾಟೌಟ್: ಲೋಕಸಭೆ ಚುನಾವಣೆಯ (Lok Sabha Elections) ಮತದಾನಕ್ಕೆ ದಿನಗಣನೆ ಆರಂಭವಾಗಿರುವ ಸಂದರ್ಭದಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ನಡುವಣ ವಾಕ್ಸಮರ ತಾರಕಕ್ಕೇರಿದೆ. ಡಿಕೆ ಶಿವಕುಮಾರ್ ವಿರುದ್ಧ ಬೆಂಗಳೂರಿನಲ್ಲಿ ಮತ್ತೆ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಡಿಕೆಶಿ ಮಹಿಳೆಯನ್ನು ಅಪಹರಿಸಿ ಬೆದರಿಸಿ ಜಮೀನು ಬರೆಸಿಕೊಂಡಿದ್ದು ನಿಜ.

ಆ ಘಟನೆ ನಡೆದದ್ದು 1996-97 ರಲ್ಲಿ, ಅದರ ದಾಖಲೆಗಳಿವೆ ಎಂದು ಹೇಳಿದ್ದಾರೆ. ಒಂದು ಮಗುವನ್ನು ಕಿಡ್ನಾಪ್ ಮಾಡಿ ಕರೆದುಕೊಂಡು ಏನು ಮಾಡಿದ್ದಿರಿ? ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಜಮೀನು ಬರೆಸಿಕೊಳ್ಳಲು ಏನು ಮಾಡಿದ್ದಿರಿ? ಚೆಕ್ ಕೊಟ್ಟಿರುವುದು ಬೇಕಾ? ಚೆಕ್ ಡಿಸಾನರ್ ಮಾಡಿರುವ ದಾಖಲೆ ಇದೆ, ಎಲ್ಲ ಇಟ್ಟಿದ್ದೇವೆ. ನಿನ್ನೆ ಮೊದಲ ಬಾರಿಗೆ ಇದನ್ನ ಹೇಳಿದ್ದೆ. ಅದಕ್ಕೆ ಚರ್ಚೆಗೆ ಕರೆಯುತ್ತಾರೆ. ಚರ್ಚೆಗೆ ಸಿದ್ದ ಇದ್ದೇನೆ ಬನ್ನಿ, ಕಂತೆ ಗಟ್ಟಲೇ ದಾಖಲೆ ಇಟ್ಟಿದ್ದೇನೆ. ದಾಖಲೆಗಳು ಬೇಕಾದಷ್ಟಿವೆ ಎಂದು ಕುಮಾರಸ್ವಾಮಿ ಪ್ರತಿ ಸವಾಲು ಹಾಕಿದ್ದಾರೆ.

ಈಗ ಶಾಂತಿನಗರ ಹೌಸಿಂಗ್ ಸೊಸೈಟಿ, ಡೂಪ್ಲಿಕೇಟ್ ಸೊಸೈಟಿನ ಒರಿಜಿನಲ್ ಮಾಡಿಕೊಳ್ಳಲಿಲ್ವಾ? ಈ ದೇಶದಲ್ಲಿನ ಸಂಸ್ಥೆಗಳನ್ನು ದುಡ್ಡಿನಲ್ಲಿ ಕೊಂಡುಕೊಂಡು ಯಾವಾಗ ಏನು ಬೇಕಾದ್ರು ಮಾಡುವ ವ್ಯಕ್ತಿ ಡಿಕೆ ಶಿವಕುಮಾರ್ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ. ರಾಹುಲ್ ಗಾಂಧಿಯವರ ಮಂಡ್ಯ ಪ್ರಚಾರ ವಿಚಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಬರುವವರನ್ನು ಬೇಡ ಎಂದು ಹೇಳಲಾಗುತ್ತದೆಯಾ? ರಾಜಕೀಯವಾಗಿ ಪ್ರಚಾರ ಮಾಡಲು ಯಾರು ಬೇಕಾದರೂ ಬರಬಹುದು, ಅವರಿಗೆ ಸ್ವಾಗತ. ನಮ್ಮದೇನು ತಕರಾರಿಲ್ಲ, ಬಂದು ಪ್ರಚಾರ ಮಾಡಲಿ. ಅದರಿಂದ ನನಗೇನೂ ಲಾಸ್ ಇಲ್ಲ ಎಂದ ಹೇಳಿದ್ದಾರೆ.

Related posts

20ರ ಯುವತಿಯನ್ನು ಇರಿದು ಕೊಂದ ಪ್ರಿಯಕರ..! ಶವವನ್ನು ಪೊದೆಯಲ್ಲಿ ಎಸೆದು ಪರಾರಿ..!

ಪಾದ್ರಿಗೆ ಭಂಗ ತಂದ ಯುವತಿಯರ ಸಂಗ!

ವಿಮಾನದೊಳಗೆ ದೈತ್ಯ ಗಾತ್ರದ ಶ್ವಾನವನ್ನು ಕರೆತಂದ ವ್ಯಕ್ತಿ..!‌ ಇಲ್ಲಿದೆ ವೈರಲ್ ವಿಡಿಯೋ