ಕರಾವಳಿ

ಬೈಕ್ ನಲ್ಲಿ ಡಬಲ್ ರೈಡ್ ನಿಷೇಧ ಯಾಕೆ ಗೊತ್ತಾ?

ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಬಲ್ ರೈಡ್ ಬೈಕ್ ಪ್ರಿಯರಿಗೆ ಖಾಕಿ ಪಡೆ ಭರ್ಜರಿ ಶಾಕ್ ನೀಡಿದೆ. ಬೈಕ್ ನಲ್ಲಿ ಪುರುಷರು ಹಾಗೂ ಯುವಕರು ಡಬಲ್ ರೈಡ್ ಹೋಗದಂತೆ ಪೊಲೀಸರು ಕಡಿವಾಣ ಹಾಕಿದ್ದಾರೆ. ಅದಕ್ಕೆ ಕಾರಣವನ್ನೂ ಪೊಲೀಸರು ಬಹಿರಂಗಪಡಿಸಿದ್ದಾರೆ. ನಾಳೆ ಯಿಂದ (5-8-2022) ಈ ನಿಯಮ ಜಾರಿಗೆ ಬರಲಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.

ಯಾರಿಗೆಲ್ಲ ಇರುತ್ತೆ ಅವಕಾಶ?

ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಎಲ್ಲ ಮಾದರಿಯ ದ್ವಿಚಕ್ರ ವಾಹನದಲ್ಲಿ ೬೦ ವರ್ಷಕ್ಕಿಂತ ಮೇಲ್ಪಟ್ಟವರು ಹಿರಿಯರು, ಮಹಿಳೆಯರು ಹಾಗೂ ಹದಿನೆಂಟು ವರ್ಷದೊಳಗಿನ ಮಕ್ಕಳನ್ನು ಹೊರತುಪಡಿಸಿ ಯುವಕರು ಹಾಗೂ ಪುರುಷರ ಓಡಾಟವನ್ನು ನಿರ್ಬಂಧಿಸಲಾಗಿದೆ. ಮೂರು ದಿನಗಳ ತನಕ ಈ ನಿರ್ಬಂಧ ಜಾರಿಯಲ್ಲಿರುತ್ತದೆ. ಸದ್ಯ ಮಂಗಳೂರಿನಲ್ಲಿ ಇರುವ ಸೂಕ್ಷ್ಮ ವಾತಾವರಣವನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಈ ಕ್ರಮ ತೆಗೆದುಕೊಂಡಿದ್ದಾರೆ. ಕೆಲವರು ಬೈಕ್ ನಲ್ಲಿ ಬಂದು ಒಂದಷ್ಟು ಸಮಸ್ಯೆಗಳಿಗೆ ಕಾರಣರಾಗುತ್ತಿದ್ದಾರೆ. ಪೊಲೀಸ್ ಇಲಾಖೆಗೆ ಇವರನ್ನು ನಿಯಂತ್ರಿಸುವುದು ದೊಡ್ಡ ಸವಾಲಾಗಿದೆ. ಈ ಕಾರಣಕ್ಕೆ ಇಂತಹ ಬಿಗಿ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಲೋಕ್ ಕುಮಾರ್ ತಿಳಿಸಿದ್ದಾರೆ.

Related posts

ಉಡುಪಿಯ ಕಾಪು ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ಕೊಟ್ಟ ಸೂರ್ಯಕುಮಾರ್ ಯಾದವ್, ಟಿ20 ವಿಶ್ವಕಪ್ ಗೆದ್ದ ಖುಷಿಗೆ ದೇವಿಗೆ ವಿಶೇಷ ಪೂಜೆ

ಪುತ್ತೂರು: ನಕಲಿ ದಾಖಲೆ ಸೃಷ್ಟಿಸಿ ಹೊಸ ಕಾರು ಖರೀದಿಸಿ ಕೋ-ಆಪರೇಟಿವ್ ಸೊಸೈಟಿಗೆ ಉಂಡೆನಾಮ ತಿಕ್ಕಿದ ಅಸಾಮಿ..! ಪುತ್ತೂರಿನ ಈ ಖತರ್ನಾಕ್ ಕಳ್ಳ ಈಗ ಪೊಲೀಸರ ಅತಿಥಿ

ಭೂಕಂಪಕ್ಕೂ ಮುನ್ನ ಮನೆ ಮೇಲೆ ಕುಸಿದ ಭಾರೀ ಗುಡ್ಡ..!