ಕರಾವಳಿ

ಕಾಲ್ನಡಿಗೆಯಲ್ಲೇ  360 ಕಿ.ಮೀ ಬಂದು ಗಿರ್ ಹಸುವನ್ನು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಒಪ್ಪಿಸಿದ ಯುವಕ..!

ವರದಿ:ಶ್ರೀಜಿತ್ ಸಂಪಾಜೆ

ನ್ಯೂಸ್ ನಾಟೌಟ್: ಯುವಕನೊಬ್ಬ ಕಾಲ್ನಡಿಗೆಯಲ್ಲೇ 360 ಕಿ.ಮೀ ಕ್ರಮಿಸಿ ತನ್ನ ಬೆಲೆ ಬಾಳುವ ಎತ್ತನ್ನು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಒಪ್ಪಿಸಿದ ಅಪರೂಪದ ವಿದ್ಯಮಾನ ನಡೆದಿದೆ.

ಯುವಕರು ಕಾಲ್ನಡಿಗೆಯಲ್ಲೇ ದೇಶ ಸುತ್ತುವುದನ್ನು ನೋಡಿದ್ದೇವೆ. ಆದರೆ ದೇವರ ಕೆಲಸಕ್ಕಾಗಿ ಕಾಲ್ನಡಿಗೆಯಲ್ಲಿ ಇಂತಹದ್ದೊಂದು ಸಾಹಸ ಮಾಡಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಇವರ ಹೆಸರು ಕಳಸದ ಹಿರೇಬೈಲ್ ನ ಶ್ರೇಯಾಂಸ್ ಜೈನ್ . ಇವರು ಬೆಂಗಳೂರಿನ ತಮ್ಮ ಮನೆಯಲ್ಲಿ ಸಾಕುತ್ತಿರುವ ಮೊದಲ ಗಿರ್ ಎತ್ತನ್ನು ಶ್ರೀ ಧರ್ಮಸ್ಥಳ ದೇವಸ್ಥಾನಕ್ಕೆ ಅರ್ಪಿಸುವುದಾಗಿ ಹರಕೆ ಹೊತ್ತುಕೊಂಡಿದ್ದರು. ಅದರಂತೆ ಈಗ ಮೊದಲ ಕರುವನ್ನು ಬರೋಬ್ಬರಿ ಎರಡು ವರ್ಷಗಳ ಬಳಿಕ 360 ಕಿ.ಮೀ. ಗಿರ್ ಎತ್ತು ಜೊತೆ ನಡೆದುಕೊಂಡು ಬಂದು ಧರ್ಮಸ್ಥಳಕ್ಕೆ ಅರ್ಪಿಸಿದ್ದಾರೆ. ಧರ್ಮಾಧಿಕಾರಿ ಡಾ.ಡಿ,ವೀರೇಂದ್ರ ಹೆಗ್ಗಡೆಯವರು ಗಿರ್ ಎತ್ತಿಗೆ ತಿನ್ನಲು ಫಲಹಾರ ನೀಡುವ ಮೂಲಕ ಬರಮಾಡಿಕೊಂಡರು. ಶ್ರೇಯಾಂಸ್ ಬೆಂಗಳೂರಿನ ಜಿಗಣಿಯವರು. ಲಾಕ್‌ಡೌನ್ ವೇಳೆ ಕಂಪನಿ ಕೆಲಸವನ್ನು ನಂಬದೆ ದನ ಸಾಕಿ ಹೈನುಗಾರಿಕೆಯಲ್ಲಿ ಕ್ರಾಂತಿ ಮಾಡಿದ್ದರು. ಜೈನ್ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ.

Related posts

ನಾಳೆ ಸರ್ಕಾರಿ ರಜೆ ಘೋಷಣೆ..! ಪದ್ಮ ವಿಭೂಷಣ ಪುರಸ್ಕೃತ ಎಸ್‌.ಎಂ.ಕೃಷ್ಣ ನಿಧನಕ್ಕೆ3 ದಿನ ಶೋಕಾಚರಣೆ

‘ಯುವ’ ಸಿನಿಮಾ ಬಿಡುಗಡೆಯಲ್ಲಿ ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ ಭಾಗಿ, ಡಾ. ರಾಜ್ ಕುಮಾರ್ ಕುಟುಂಬಕ್ಕೂ ಕೆವಿಜಿ ಕುಟುಂಬಕ್ಕೂ ಇರುವ ನಂಟೇನು..?

ಇಂದು ದಕ್ಷಿಣ ಕನ್ನಡ ಜಿಲ್ಲೆಗೆ ರೆಡ್ ಅಲರ್ಟ್