ಕರಾವಳಿಸುಳ್ಯ

ಧರ್ಮಸ್ಥಳ:ಹೆಚ್ಚುತ್ತಿರುವ ಕಾಡುಪ್ರಾಣಿಗಳ ಉಪಟಳ,ಹಟ್ಟಿಗೆ ನುಗ್ಗಿ ದನವನ್ನು ಕೊಂದು ತಿಂದು ತೇಗಿದ ಚಿರತೆ

ನ್ಯೂಸ್ ನಾಟೌಟ್ :ದನದ ಹಟ್ಟಿಗೆ ಚಿರತೆಯೊಂದು ನುಗ್ಗಿದ್ದು ಕಟ್ಟಿ ಹಾಕಿದ್ದ ದನವೊಂದನ್ನು ಕೊಂದು ತಿಂದ ಘಟನೆ ಇಂದು ಬೆಳ್ಳಂ ಬೆಳಗ್ಗೆ ಬೆಳಕಿಗೆ ಬಂದಿದೆ.ಧರ್ಮಸ್ಥಳ ಗ್ರಾಮದ ನೇರ್ತನೆ ಎಂಬಲ್ಲಿ ಮನೆಯ ಸಮೀಪವಿದ್ದ ಹಟ್ಟಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ತ್ರೇಸ್ಯಾಮ್ಮ ಪಿ.ಕೆ. ಎಂಬವರಿಗೆ ಸೇರಿದ ದನ ಇದಾಗಿದ್ದು, ತ್ರೇಸ್ಯಾಮ್ಮರ ಮನೆಯ ಸಮೀಪದ ಹಟ್ಟಿಯಲ್ಲಿದ್ದ ದನವನ್ನು ರಾತ್ರಿಯ ವೇಳೆ ಚಿರತೆ ಕೊಂದು ತಿಂದಿದೆ.ತ್ರೇಸ್ಯಾಮ್ಮ ಅವರ ಮನೆ ಅರಣ್ಯದ ಸಮೀಪವೇ ಇದ್ದು,ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ.ಜತೆಗೆ ಮನೆಯಲ್ಲಿ ಕೃಷಿ ಚಟುವಟಿಯಲ್ಲೂ ತೊಡಗಿಕೊಂಡಿದ್ದಾರೆ.ಹೈನುಗಾರಿಯೇ ಇವರಿಗೆ ಜೀವನೋಪಾಯವೂ ಆಗಿದೆ.

ನೇರ್ತನೆಯಲ್ಲಿ ಕಳೆದ ಕೆಲ ದಿನಗಳಿಂದ ಚಿರತೆ ಹಾಗೂ ಆನೆಗಳ ಹಾವಳಿ ತುಂಬಾ ಹೆಚ್ಚಾಗಿದ್ದು,ಕೃಷಿಕರು ಆತಂಕದಲ್ಲಿಯೇ ದಿನದೂಡುವ ಸ್ಥಿತಿ ಎದುರಾಗಿದೆ ಎಂದು ಇಲ್ಲಿನ ಸ್ಥಳೀಯರು ಮಾಹಿತಿ ನೀಡಿದ್ದಾರೆ.ಕೆಲ ದಿನಗಳ ಹಿಂದೆ ಚಿರತೆ ಕಾಣಿಸಿಕೊ‌ಡು ನಾಯಿಗಳನ್ನು ತಿಂದು ಹಾಕಿತ್ತು. ಆದ್ದರಿಂದ ಚಿರತೆ ಇಲ್ಲಿಗೆ ಬಂದಿರಬಹುದು ಎಂಬ ಅನುಮಾನವೂ ವ್ಯಕ್ತವಾಗಿದೆ.

Related posts

ಗೈರು ಹಾಜರಾದ ವಿದ್ಯಾರ್ಥಿಯಿಂದ ಪರೀಕ್ಷೆ ಬರೆಯಲು ಹಣ ಪಡೆದ ಪ್ರಾಂಶುಪಾಲ..! ಪ್ರಾಂಶುಪಾಲ ಸೇರಿ ಇಬ್ಬರು ಅರೆಸ್ಟ್..!

3 ದಿನಗಳ ಕಾಲ ಕರ್ನಾಟಕದಲ್ಲಿ ಮದ್ಯ ನಿಷೇಧ..! ಇಲ್ಲಿದೆ ಸಂಪೂರ್ಣ ಮಾಹಿತಿ

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಅವಮಾನಿಸಿದ ಕಿಡಿಗೇಡಿಗಳು