ದೇಶ-ವಿದೇಶ

ವಿಶ್ವ ಸುಂದರಿ ಮುಡಿಗೇರಿಸಿಕೊಂಡ ಡೆನ್ಮಾರ್ಕ್ ನ ಚೆಲುವೆ, ಯಾರಿವರು 2024ರ ಚೆಲುವೆ..?

ನ್ಯೂಸ್ ನಾಟೌಟ್: 2024ರ ಇಂಟರ್ ನ್ಯಾಷನಲ್ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ವಿಶ್ವ ಸುಂದರಿ ಯಾರೆಂಬುದು ಘೋಷಣೆಯಾಗಿದೆ. ಡೆನ್ಮಾರ್ಕ್ 21 ವರ್ಷದ ವಿಕ್ಟೋರಿಯಾ ಕ್ಜೇರ್ ವಿಜೇತರಾಗಿ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಇಂಟರ್ ನ್ಯಾಷನಲ್ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಡೆನ್ಮಾರ್ಕ್ ಮೊದಲ ಬಾರಿಗೆ ಕಿರೀಟವನ್ನು ಪಡೆದುಕೊಳ್ಳುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿದೆ.

ಮೆಕ್ಸಿಕೋದ ಮರಿಯಾ ಫೆರ್ನಾಂಡಾ ಬೆಲ್ಟ್ರಾನ್ ಮೊದಲ ರನ್ನರ್ ಅಪ್ ಆಗಿ, ನೈಜೀರಿಯಾದ ಸಿನಿದಿಮ್ಮಾ ಅಡೆಟ್ಶಿನಾ ಎರಡನೇ ರನ್ನರ್ ಅಪ್ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಭಾರತವನ್ನು ಪ್ರತಿನಿಧಿಸಿದ್ದ ರಿಯಾ ಸಿಂಘಾ ಅಂತಿಮ ಸುತ್ತಿನಲ್ಲಿ ಟಾಪ್​ 12 ಸ್ಥಾನ ಪಡೆಯುವಲ್ಲಿ ವಿಫಲರಾಗಿದರು.

ಮೆಕ್ಸಿಕೋ ನಗರದಲ್ಲಿ ನಡೆದ 73ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ವಿವಿಧ ದೇಶಗಳಿಂದ 130 ಸುಂದರಿಯರು ಸ್ಪರ್ಧಿಸಿದ್ದರು. ಇದೀಗ 2024ರ ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದ ರಿಯಾ ಸಿಂಘಾಗೆ ನಿರಾಶೆಯಾಗಿದೆ.

Related posts

ಟೇಕಾಫ್ ಆಗುವಾಗ ವಿಮಾನದಿಂದ ಕೆಳಗೆ ಬಿದ್ದ ಗಗನಸಖಿ..! ಆಸ್ಪತ್ರೆಗೆ ದಾಖಲು

6 ಶರಣಾಗತ ನಕ್ಸಲರ ಶಸ್ತ್ರಾಸ್ತ್ರ ಅರಣ್ಯದಲ್ಲಿ ಪತ್ತೆ..! ಶರಣಾದರೂ ಶಸ್ತ್ರಾಸ್ತ್ರ ಬಚ್ಚಿಟ್ಟಿದ್ದ ನಕ್ಸಲರ ತಂಡ..!

ತಡರಾತ್ರಿ RSS ಕಾರ್ಯಾಲಯಕ್ಕೆ ನುಗ್ಗಿ ಹಲವರನ್ನು ವಶಕ್ಕೆ ಪಡೆದ ಪೊಲೀಸರು..! ಈ ಬಗ್ಗೆ ಬಿಜೆಪಿ ಹೇಳಿದ್ದೇನು..?