ದೇಶ-ಪ್ರಪಂಚವೈರಲ್ ನ್ಯೂಸ್

ಆನ್‌ಲೈನ್‌ ಆರ್ಡರ್‌ ಮಾಡಿದ ವಸ್ತು ತಲುಪಿಸಲು ಬರೋಬ್ಬರಿ ನಾಲ್ಕು ವರ್ಷ ತೆಗೆದುಕೊಂಡ ಸಂಸ್ಥೆ..! ಏನಿದು ದೆಹಲಿಯ ಟೆಕ್ಕಿಯ ಸಮಸ್ಯೆ ?

ನ್ಯೂಸ್‌ ನಾಟೌಟ್‌: ಇಂದಿನ ದಿನಗಳಲ್ಲಿ ನಮಗೆ ಬೇಕಾದ ಯಾವುದೇ ವಸ್ತುಗಳು ಆದರೂ ಸರಿ ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದರೆ ಸಾಕು ಕೆಲವೇ ದಿನಗಳಲ್ಲಿ ನಾವು ನೀಡಿದ ವಿಳಾಸಕ್ಕೆ ಬಂದು ತಲುಪುತ್ತದೆ. ಆದರೆ ದೆಹಲಿಯ ಟೆಕ್ಕಿಯೋರ್ವ ಆರ್ಡರ್‌ ಮಾಡಿದ್ದ ವಸ್ತು ತಲುಪಲು ಬರೋಬ್ಬರಿ ನಾಲ್ಕು ವರ್ಷ ಬೇಕಾಯಿತು!

ಭಾರತದಲ್ಲಿ ಸದ್ಯ ನಿಷೇಧದ ಪಟ್ಟಿಯಲ್ಲಿರುವ ನಿತಿನ್ ಅಗರ್ವಾಲ್ ಅಲಿ ಬಾಬಾ ಒಡೆತನದ ಅಲೈಕ್ಸ್​ಪ್ರೆಸ್ ಆನ್​ಲೈನ್ ಶಾಪಿಂಗ್‌ಗೆ ಹೆಚ್ಚು ಜನಪ್ರಿಯತೆ ಪಡೆದಿತ್ತು. ಇದರಲ್ಲಿ ಭಾರತದಲ್ಲಿ ಲಭ್ಯವಿಲ್ಲದ ಕೆಲವು ವಸ್ತುಗಳು ಅಗ್ಗದ ಬೆಲೆಯಲ್ಲಿ ದೊರಕುತ್ತಿತ್ತು. ಈ ನಿಟ್ಟಿನಲ್ಲಿ ದೆಹಲಿ ಮೂಲದ ಟೆಕ್ಕಿಯೊಬ್ಬರು 2019ರಲ್ಲಿ ಅಲೈಕ್ಸ್​ಪ್ರೆಸ್‌ನಲ್ಲಿ ವಸ್ತುವೊಂದನ್ನು ಆರ್ಡರ್ ಮಾಡಿದ್ದರು. ಆದರೆ ನಿಗದಿತ ದಿನಾಂಕ ಕಳೆದಿದ್ದರೂ ಆರ್ಡರ್ ಮಾತ್ರ ಕೈಸೇರಿರಲಿಲ್ಲ. ಹೀಗಾಗಿ ಏನೋ ಸಮಸ್ಯೆಯಾಗಿರಬಹುದು ಎಂದು ಟೆಕ್ಕಿ ಸುಮ್ಮನಾಗಿದ್ದರು. ಇದಾಗಿ ಕೆಲ ಸಮಯ ಕಳೆಯುತ್ತಿದ್ದಂತೆ ಭಾರತದಲ್ಲಿ ಅಲೈಕ್ಸ್​ಪ್ರೆಸ್ ತಾಣ ನಿಷೇಧವಾಯಿತು.

ಇದೀಗ ನಾಲ್ಕು ವರ್ಷಗಳ ಬಳಿಕ ಇವರು ಆರ್ಡರ್‌ ಮಾಡಿದ ವಸ್ತು ಕೈಸೇರಿದೆ. ಜತೆಗೆ ತಡವಾಗಿ ಆರ್ಡರ್ ಕೈಸೇರಿರುವ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದು, ಈ ಬಗ್ಗೆ ಟ್ವೀಟ್ ಮಾಡಿ ಎಂದಿಗೂ ಭರವಸೆ ಕಳೆದುಕೊಳ್ಳದಿರಿ ಎಂದು ಕ್ಯಾಪ್ಶನ್ ನೀಡಿದ್ದಾರೆ. ಇದು ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.

Related posts

ಗೂನಡ್ಕ: ಸ್ಕೂಟಿ ಕದ್ದು ಬಂದವ ಹೋಟೆಲ್ ಶೌಚಾಲಯದಲ್ಲಿ ಗಡದ್ ನಿದ್ರೆಗೆ ಜಾರಿದ..!

ಕಾಂಗ್ರೆಸ್ ಅಭ್ಯರ್ಥಿ ಪರ ಬಿಜೆಪಿ ಶಾಸಕನಿಂದ ಭರ್ಜರಿ ಪ್ರಚಾರ..! ದಕ್ಷಿಣ ಕನ್ನಡದಿಂದ ಬೆಂಗಳೂರಿಗೆ ಬಂದವರು ಏನೂ ಮಾಡಿಲ್ಲ ಎಂದು ಸ್ವಪಕ್ಷದ ವಿರುದ್ಧವೇ ಟೀಕೆ..!

ವಿಡಿಯೋ ವರದಿ ಪ್ರಕಟಿಸಿದ ಮೂರೇ ಮೂರು ನಿಮಿಷದಲ್ಲಿ ಮೆಸ್ಕಾಂ ರಿಪ್ಲೇ..! ನ್ಯೂಸ್ ನಾಟೌಟ್ ಫೇಸ್ ಬುಕ್ ಪೇಜ್ ಗೆ ಬಂದು ಅಗತ್ಯ ಮಾಹಿತಿ ಕೇಳಿದ ಮೆಸ್ಕಾಂ ಮಂಗಳೂರು ಕಚೇರಿ