ಕರಾವಳಿಕೊಡಗು

ನಟಿ ರಶ್ಮಿಕಾ ಮಂದಣ್ಣ ಡೀಪ್ ಫೇಕ್‌ ವಿಡಿಯೋ ಪ್ರಕರಣ; 19ನೇ ವರ್ಷದ ಯುವಕನಿಂದ ಕೃತ್ಯ?ದೆಹಲಿ ಪೊಲೀಸರಿಂದ ವಿಚಾರಣೆ

ನ್ಯೂಸ್ ನಾಟೌಟ್ : ನ್ಯಾಷನಲ್ ಕ್ರಶ್,ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ಪ್ರಕರಣ ಇಡೀ ದೇಶದಾದ್ಯಂತ ಭಾರಿ ಸಂಚಲನ ಮೂಡಿಸಿತ್ತು.ಇದಕ್ಕೆ ಸಂಬಂಧ ಪಟ್ಟ ಹಾಗೆ ವಿಚಾರಣೆ ನಡೆಸಿದ್ದ ದೆಹಲಿ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ. ಈ ವಿಡಿಯೋವನ್ನ ಮೊದಲು ಸೋಷಿಯಲ್ ಮೀಡಿಯಾಗೆ ಅಪ್ಲೋಡ್ ಮಾಡಿದ್ದು ಯಾರು ಅನ್ನೋದು ಈಗ ಪತ್ತೆಯಾಗಿದೆ.

ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ಪ್ರಕರಣದಲ್ಲಿ ದೆಹಲಿ ಪೊಲೀಸರು ಬಿಹಾರ ಮೂಲದ 19 ವರ್ಷದ ಯುವಕನನ್ನು ವಿಚಾರಣೆ ನಡೆಸಿದ್ದಾರೆ. ಈ ಯುವಕನ ಸೋಷಿಯಲ್ ಮೀಡಿಯಾ ಅಕೌಂಟ್‌ನಿಂದ ಮೊದಲಿಗೆ ಡೀಪ್ ಫೇಕ್ ವಿಡಿಯೋ ಅಪ್ಲೋಡ್‌ ಆಗಿದೆ ಎಂದು ತಿಳಿದು ಬಂದಿದೆ.ಹೀಗಾಗಿ ವಿಚಾರಣೆಗೆ ಹಾಜರಾಗಲು ಪೊಲೀಸರು ನೊಟೀಸ್ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.ಕಳೆದ ಒಂದು ವಾರದ ಹಿಂದಷ್ಟೇ ಝರಾ ಪಟೇಲ್ ಅನ್ನೋರ ದೇಹಕ್ಕೆ ರಶ್ಮಿಕಾ ಮಂದಣ್ಣ ಅವರ ಮುಖ ಹೋಲುವಂತ ಡೀಪ್ ಫೇಕ್ ವಿಡಿಯೋ ಸೃಷ್ಟಿಸಲಾಗಿತ್ತು. ಈ ವಿಡಿಯೋ ವೈರಲ್ ಆದ ಬಳಿಕ ಬಾಲಿವುಡ್‌ನ ಹಲವು ಮಂದಿ ವಿರೋಧ ವ್ಯಕ್ತ ಪಡಿಸಿದ್ದರು.ಡೀಪ್ ಫೇಕ್ ವಿಡಿಯೋ ಅವಾಂತರ ದೇಶಾದ್ಯಂತ ಸಂಚಲನ ಸೃಷ್ಟಿಸಿದ ಮೇಲೆ ನವೆಂಬರ್ 10 ರಂದು ಎಫ್‌ಐಆರ್ ದಾಖಲಿಸಲಾಗಿತ್ತು.ಇದೀಗ ಬಿಹಾರದ ಯುವಕನಿಗೆ ನೊಟೀಸ್ ನೀಡಲಾಗಿದೆ. ಸದ್ಯ 19 ವರ್ಷದ ಯುವಕ ಇನ್‌ಸ್ಟಾಗ್ರಾಂ ಅಕೌಂಟ್‌ನಿಂದ ವಿಡಿಯೋ ಡೌನ್ ಲೋಡ್ ಮಾಡಿಕೊಂಡಿದ್ದಾಗಿ ಹೇಳಿದ್ದಾನೆ. ಆದರೆ ಪೊಲೀಸರ ವಿಚಾರಣೆ ಬಳಿಕ ಅಸಲಿ ವಿಷಯ ತಿಳಿದು ಬರಬೇಕಿದೆ.

Related posts

ಅರ್ಧ ದಾರಿಯಲ್ಲಿ ಆಮ್ಲ ಜನಕ ಖತಂ, ಪರದಾಡಿದ ರೋಗಿ

ಬಂಟ್ವಾಳ: ಏಕಾಂಗಿಯಾಗಿ 30ಅಡಿ ಆಳದ ಬಾವಿ ಕೊರೆದ ಪಿಯುಸಿ ವಿದ್ಯಾರ್ಥಿ! ಇಲ್ಲಿದೆ ಪಂಚಾಯತ್ ಗೆ ಮಾದರಿಯಾದ ಹುಡುಗನ ಕಥೆ!

ಚಾರ್ಮಾಡಿ: KSRTC ಬಸ್‌ಗಳ ಅಪಘಾತದ ಟ್ರಾಫಿಕ್‌ನಲ್ಲಿ ಹೆರಿಗೆ ನೋವಿನಿಂದ ಗಂಟೆಗಟ್ಟಲೆ ಒದ್ದಾಡಿದ ಗರ್ಭಿಣಿ..! ಆಂಬ್ಯುಲೆನ್ಸ್‌ ಚಾಲಕ ಆರೀಫ್‌ನ ಸಮಯ ಪ್ರಜ್ಞೆಯಿಂದ ಉಳಿಯಿತು ಜೀವ..!