ಕ್ರೈಂದೇಶ-ಪ್ರಪಂಚವೈರಲ್ ನ್ಯೂಸ್

ಭೂಗತ ಪಾತಕಿಯ ಕೋಟ್ಯಂತರ ರೂ. ಆಸ್ತಿ ಹರಾಜು ಯಾವಾಗ..? ಭಾರತದಲ್ಲಿರುವ ದಾವೂದ್‌ ಇಬ್ರಾಹಿಂನ ಆಸ್ತಿಗಳೆಷ್ಟು ಕೋಟಿ ಮೌಲ್ಯದ್ದು ಗೊತ್ತಾ?

ನ್ಯೂಸ್ ನಾಟೌಟ್: ಇತ್ತೀಚೆಗಷ್ಟೇ ಆಸ್ಪತ್ರೆಗೆ ದಾಖಲಾಗಿದ್ದ ಭೂಗತ ಪಾತಕಿ, ಮುಂಬೈನಿಂದ ಪರಾರಿಯಾಗಿ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿರುವ ಜಾಗತಿಕ ಭಯೋತ್ಪಾದಕ ದಾವೂದ್‌ ಇಬ್ರಾಹಿಂಗೆ ಸೇರಿದ ಮುಂಬೈ ಮತ್ತು ರತ್ನಗಿರಿಯಲ್ಲಿರುವ ನಾಲ್ಕು ಆಸ್ತಿಗಳನ್ನು 2024ರ ಜನವರಿ 5ರಂದು ಹರಾಜು ಹಾಕಲು ಸಿದ್ಧತೆ ನಡೆಸಲಾಗಿದೆ ಎಂದು ವರದಿ ತಿಳಿಸಿದೆ.

ಭೂಗತ ಪಾತಕಿ ದಾವೂದ್‌ ಇಬ್ರಾಹಿಂನ ರತ್ನಗಿರಿಯ ಖೇಡ್‌ ತಾಲೂಕಿನಲ್ಲಿರುವ ಬಂಗಲೆಗಳು ಹಾಗೂ ಮಾವಿನ ತೋಟ ಸೇರಿದಂತೆ ನಾಲ್ಕು ಆಸ್ತಿಗಳನ್ನು ಕಳ್ಳಸಾಗಣೆ ಮತ್ತು ವಿದೇಶಿ ವಿನಿಮಯ ಕಾಯ್ದೆಯಡಿ(SAFEMA) ಸ್ವಾಧೀನಪಡಿಸಿಕೊಳ್ಳಲಾಗಿತ್ತು.

ಈಗಾಗಲೇ ಮಹಾರಾಷ್ಟ್ರ ಸರ್ಕಾರ ದಾವೂದ್‌ ಇಬ್ರಾಹಿಂ ಕುಟುಂಬಕ್ಕೆ ಸೇರಿದ್ದ ರೆಸ್ಟೋರೆಂಟ್‌ ಅನ್ನು 4.53 ಕೋಟಿ ರೂಪಾಯಿಗೆ ಹರಾಜು ಹಾಕಲಾಗಿತ್ತು. ಅದೇ ರೀತಿ ಆರು ಫ್ಲ್ಯಾಟ್‌ ಗಳನ್ನು 3.53 ಕೋಟಿ ರೂಪಾಯಿಗೆ, ಗೆಸ್ಟ್‌ ಹೌಸ್‌ ಅನ್ನು 3.52 ಕೋಟಿ ರೂಪಾಯಿಗೆ ಹರಾಜು ಹಾಕಲಾಗಿತ್ತು ಎಂದು ವರದಿ ತಿಳಿಸಿದೆ.

2020ರ ಡಿಸೆಂಬರ್‌ ನಲ್ಲಿ ರತ್ನಗಿರಿಯಲ್ಲಿರುವ ದಾವೂದ್‌ ಇಬ್ರಾಹಿಂನ ಎರಡು ನಿವೇಶನ ಮತ್ತು ನಿಷ್ಕ್ರಿಯಗೊಂಡಿದ್ದ ಪೆಟ್ರೋಲ್‌ ಬಂಕ್‌ ಅನ್ನು 1.10 ಕೋಟಿ ರೂಪಾಯಿಗೆ ಹರಾಜು ಹಾಕಲಾಗಿತ್ತು. ಖೇಡ್‌ ತಾಲೂಕಿನ ಲೋಟೆ ಗ್ರಾಮದಲ್ಲಿನ ಈ ಆಸ್ತಿಗಳನ್ನು ದಾವೂದ್‌ ಇಬ್ರಾಹಿಂ ಸಹೋದರಿ ಹಸೀನಾ ಪಾರ್ಕರ್‌ ಹೆಸರಿನಲ್ಲಿ ನೋಂದಾಯಿಸಲಾಗಿತ್ತು.

2019ರ ಏಪ್ರಿಲ್‌ ನಲ್ಲಿ ನಾಗ್‌ ಪಾಡಾದಲ್ಲಿನ 600 ಚದರ ಅಡಿಯ ಫ್ಲ್ಯಾಟ್‌ ಅನ್ನು 1.80 ಕೋಟಿ ರೂಪಾಯಿಗೆ ಹರಾಜು ಮಾಡಲಾಗಿತ್ತು. ಅಲ್ಲದೇ ಪಾಕ್‌ ಮೋಡಿಯ ಸ್ಟ್ರೀಟ್‌ ನಲ್ಲಿ ದಾವೂದ್‌ ಇಬ್ರಾಹಿಂಗೆ ಸೇರಿದ್ದ ಆಸ್ತಿಯನ್ನು 79.43 ಲಕ್ಷ ರೂಪಾಯಿಗೆ ಎಸ್‌ ಎ ಎಫ್‌ ಇಎಂಎ ಅಧಿಕಾರಿಗಳು ಹರಾಜು ಹಾಕಿದ್ದರು ಎನ್ನಲಾಗಿದೆ.

Related posts

ರೈತರಿಂದ ಸರ್ಕಾರಿ ಅಧಿಕಾರಿಗಳಿಗೆ ಮುತ್ತಿಗೆ..! ಬಿಡಿಸಲು ಬಂದ ಪೊಲೀಸರ ಮೇಲೆ ಮಚ್ಚಿನಿಂದ ದಾಳಿ..!

ಗೋ ಹತ್ಯಾ ನಿಷೇಧ ಕಾನೂನು ಸಮರ್ಪಕ ಜಾರಿಗೆ ಜೆ.ಪಿ. ನಡ್ಡಾಗೆ ಮನವಿ

ಸಂಪಾಜೆ: ಕಲ್ಲುಗುಂಡಿಯ ಬಂಗ್ಲೆಗುಡ್ಡೆಯಲ್ಲಿ ಬೆಂಕಿ ಅವಘಡ, ಧಗಧಗನೆ ಹೊತ್ತಿ ಉರಿದ ಸಸ್ಯ ಸಂಪತ್ತು